ಭಾವಬಂಧ

Author : ಆಶಾ ಶಿವಾನಂದ ಯಮಕನಮರಡಿ

Pages 116

₹ 100.00
Year of Publication: 2012
Published by: ಆದಿತ್ಯ ಪಬ್ಲಿಕೇಷನ್ಸ್
Address: ಎಲ್ ಐಜಿ-49, ಮಹಾಂತೇಶನಗರ, ಬೆಳಗಾವಿ
Phone: 9902791799

Synopsys

ಭಾವಬಂಧ- ಕವಿ ಆಶಾ ಶಿವಾನಂದ ಯಮಕನಮರಡಿ ಅವರ ಕವಿತೆಗಳ ಸಂಕಲನ. ಒಟ್ಟು 89 ಕವಿತೆಗಳಿವೆ. ಮುನ್ನುಡಿ ಬರೆದ ಸಾಹಿತಿ ಜಲತ್ಕುಮಾರ ಪುಣಚಗೌಡ ‘ಸರಳ ಶಬ್ದಗಳಲ್ಲಿ ಜೀವನದ ಗಂಭೀರ ತತ್ವಗಳನ್ನು ಹುದುಗಿಸಿಕೊಂಡಿರುವ ಕವನಗಳು ಕವಿಯ ಸಂವೇದನಾ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತಿವೆ. ‘ಸಿರಿವಂತರಾದರೂ ದಕ್ಷಿಣೆ ಬೇಡುವ ಮನಸಿದೆ ನಿಮಗೆ, ಕಾರಣ, ಅವರ ಕರ್ಮದ ಭಾರ ನೀವು ಹೊರುವುದಿದೆ’ ಇಂತಹ ಸಾಲುಗಳ ಮೂಲಕ ಶೋಷಣೆಯ ವ್ಯವಸ್ಥೆಯನ್ನು ಹಾಗೂ ಆ ಮೂಲಕ ಶೋಷಕರ ಮನಸ್ಸನ್ನು ಏಕಕಾಲಕ್ಕೆ ವಿಡಂಬಿಸುತ್ತಾರೆ’ ಎಂದು ಶ್ಲಾಘಿಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಸ.ರಾ. ಸುಳಕೊಡೆ ‘ಶರಣರ ಆಚಾರ-=ವಿಚಾರಗಳಿಂದ ಪ್ರಭಾವಿತವಾದ ಕವಿತೆಗಳಿವು. ವಚನಗಳ ಗಾಯನ ಮೂಲಕವೂ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತ ಕವಿ ಆಶಾ ಯಮಕನಮರಡಿ ಅವರ ಕಾವ್ಯಗಳಲ್ಲಿ ವಸ್ತು ವೈವಿಧ್ಯತೆ ಇದ್ದು, ಗಮನ ಸೆಳೆಯುತ್ತವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಆಶಾ ಶಿವಾನಂದ ಯಮಕನಮರಡಿ

ಆಶಾ ಶಿವಾನಂದ ಯಮಕನಮರಡಿ ಅವರು ಮೂಲತಃ ಬೆಳಗಾವಿಯವರು. ರಾಜ್ಯಶಾಸ್ತ್ರ ಪದವೀಧರೆ. ಭಾವಬಂಧ, ಬೆಡಗಿನ ನವಿಲುಗರಿ (ಕವನ ಸಂಕಲನಗಳು), ಚಿಂತನಬಂಧ (ಅಂಕಣ ಬರೆಹ), ಬೆಳಗಾವಿ ಜಿಲ್ಲೆಯ ಸಾಧಿಕಿಯರ ಪರಿಚಯ-‘ಬೆಳಗಾಗಿ ಜಿಲ್ಲಾ ವಿಶಿಷ್ಟ ಸಾಧಕಿಯರು’ಕೃತಿ ಪ್ರಕಟಗೊಂಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ, ಬೆಳಗಾವಿ, ಅಧ್ಯಕ್ಷತೆವಹಿಸಿದ್ದು, ಬೆಳಗಾವಿ ಜಿಲ್ಲಾ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಹಾಗೂ ಸಮಾಜ ಸೇವಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ. ಉದಯ ಟಿ.ವಿ.ಯ ‘ಸಿರಿ’ಯಲ್ಲಿ ಊಲನ್ ಹೆಣಿಕೆ ಕುರಿತು ಕಾರ್ಯಕ್ರಮ, ಬೆಳಗಾವಿ ಆಕಾಶವಾಣಿಯಲ್ಲಿ ವೇಣುಧ್ವನಿಯಲ್ಲಿ ಹಲವು ...

READ MORE

Related Books