ಕಣ್ಣ ಕಣಿವೆ

Author : ರೇಣುಕಾ ನಿಡಗುಂದಿ

Pages 80

₹ 50.00




Published by: ಪ್ರಗತಿ ಗ್ರಾಫಿಕ್ಸ್
Address: ಮೊದಲನೇ ಕ್ರಾಸ್, ಮಿಷನ್ ಕಂಪೌಡ್, ಶಿವಮೊಗ್ಗ ಕರ್ನಾಟಕ - 577201

Synopsys

‘ಕಣ್ಣ ಕಣಿವೆ ’ ಕೃತಿಯು ರೇಣುಕಾ ನಿಡಗುಂದಿ ಅವರ ಕವನಸಂಕಲನವಾಗಿದೆ. ನಮ್ಮದೆನ್ನುವ ಎಲ್ಲದರಿಂದಲೂ ದೂರವಿರುವ ಹೊರನಾಡಿನಲ್ಲಿ ನಮ್ಮ ನೋವು, ನಲಿವುಗಳನ್ನು ಸಂತೈಸಿಕೊಳ್ಳುತ್ತ, ಹೊರಗಿನ ಆರ್ಭಟ, ರೀತಿ-ನೀತಿಗಳಿಗೆ ಒಗ್ಗಿಕೊಳ್ಳುತ್ತ,  ನಮ್ಮ ಸಾಹಿತ್ಯಾಸಕ್ತಿ ಅಮೂರ್ತವಾದ ಅದೇನನ್ನೋ ಕಂಡುಕೊಳ್ಳುವ ನಿರಾಳ ಮನಸ್ಸಿನ ಚಿಂತನೆಯ ಒಂದು ಅಪೂರ್ವ ಹಂತದಲ್ಲಿ ಕಾವ್ಯ ಕಲ್ಪನೆಗಳು ಹುಟ್ಟಿಕೊಳ್ಳುತ್ತವೆ’. ಹೀಗೆ...

ಹುಟ್ಟಿ ಸೂಕ್ಷ್ಮಾಭಿವ್ಯಕ್ತಿಯ ಈ ತುಣುಕು ಗಮನಿಸಬೇಕು : ತೋರುತ್ತದೆ ಒಮ್ಮೊಮ್ಮೆ / ವ್ಯಥೆಯೂ ಸಣ್ಣಗೆ / ಕೊರಕಲಿನಲ್ಲಿ ಹರಿಯುವ / ನಿರ್ಜಲದಂತೆ / ಹೀಗೆ ಕೊರೆಯುತ್ತಲೇ / ಕರುಳಲ್ಲಿ ಮುಳ್ಳಾಡಿಸಿದಂತೆ / ಅಳತೆ ಮೀರಿ ಆಳವಾಗಿ / ಸಿಗಿದು ಸೀಳಿ ಒಗೆದಂತೆ / ಉಣಿಸಲಾರದ ತುತ್ತು ಕೈಜಾರಿ ಹೋದಂತೆ / ಹನಿಸಲಾರದ ನೀರು – ವ್ಯರ್ಥ ನೆಲ ಸೇರಿದಂತೆ…

About the Author

ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. 'ಓ ಮನಸೇ' ದೈಮಾಸಿಕ ಪತ್ರಿಕೆಯಲ್ಲಿ 'ರಾಜಧಾನಿ ಮೇಲ್' ಅಂಕಣ ಬರೆಹ ಬರೆಯುತ್ತಿದ್ದರು. ಬಿಡುಗಡೆಯಾದ ಕೃತಿಗಳು - ಮೊದಲ ಕವನ ಸಂಕಲನ " ಕಣ್ಣ ಕಣಿವೆ" 2008 ( ಪ್ರಗತಿ ಗ್ರಾಫಿಕ್ಸ್), “ದಿಲ್ಲಿ ಡೈರಿಯ ...

READ MORE

Related Books