ಕುದುರೆ ವ್ಯಥೆ- ಶಂಕರ್ ಸಿಹಿಮೊಗೆ ಅವರ ಮೊದಲ ಕವನ ಸಂಕಲನ. ಮಲೆನಾಡಿನವರಾದ ಶಂಕರ್ ಸಿಹಿಮೊಗೆ ತಮ್ಮ ಕವಿತೆಗಳಲ್ಲಿ ಅದೇ ಹಸಿರು, ನವಿರುತನಗಳನ್ನು ಕಾಯ್ದುಕೊಂಡಿದ್ದಾರೆ. ಇಲ್ಲಿಯ ಕವಿತೆಗಳಲ್ಲಿ ಸುಮಾರು 75 ಕವಿತೆಗಳು ಚುಟುಕುಗಳು ಎಂದು ಕರೆಯಬಹುದಾದ ರಚನೆಗಳು, 5,6,10 ಸಾಲುಗಳ ಚಿಕ್ಕ ಚಿಕ್ಕ ಕವಿತೆಗಳೂ ಇವೆ. ಇವುಗಳನ್ನು ಬರೆಯುವುದರಲ್ಲಿಯೇ ಕವಿಗೆ ಒಂದು ಬಗೆಯ ಆನಂದವಿದೆ. ತೃಪ್ತಿ ಇದೆ ಅನಿಸುತ್ತದೆ. ಒಂದು ಕಿರು ಭಾವವನ್ನು ಕೆಲವೇ ಶಬ್ದ ಸಾಲುಗಳ ಮೂಲಕ ಕವಿ ನಮ್ಮ ಮುಂದೆ ಇಡುತ್ತಾರೆ. ನೋಡಲು ಇದು ಕಿರಿದು ಅನಿಸಿದರೂ ಓದಿದ ನಂತರ ಮನಸ್ಸಿನಲ್ಲಿ ವಿಸ್ತಾರವಾಗಿ ಹಮ್ಮಿ ಬೇರೆಯೇ ಆದ ಅನುಭವ ನೀಡುತ್ತದೆ.
ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದುವಾಗಲೇ ಡಿ.ವಿ.ಎಸ್. ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ಈವರೆಗೆ ಸುಮಾರು ಹತ್ತಕ್ಕು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮ್ಯಾಕ್ ಬೆತ್, ಮಹಾಬಲಯ್ಯನ ಕೋಟು, ವಸುದೈವ ಕುಟುಂಬಕಂ, ಮತ್ತು ದಕ್ಷಯಜ್ಞ ಮುಖ್ಯವಾದವುಗಳು. ಕೆಲಸದ ನಡುವೆಯೂ ಸಾಹಿತ್ಯ ರಂಗಭೂಮಿಯತ್ತ ಒಲವಿಟ್ಟುಕೊಂಡಿರುವ ...
READ MORE