ವರ್ತಮಾನದ ಮಾನವ ಸಂಬಂಧಗಳಿಗೆ ತಮ್ಮ ಕವಿತೆಗಳ ಮೂಲಕ ಕನ್ನಡಿ ಹಿಡಿದಿದ್ದಾರೆ ಕವಿ ಸದಾಶಿವ್. ಈ ರೂಪಕಗಳ ಕಟ್ಟುವಿಕೆಯಲ್ಲಿನ ತಾಜಾತನ ಹಿತವೆನಿಸುತ್ತದೆ. ಕವಿತೆಗಳು ಸೌಮ್ಯವಾಗಿ ಧ್ವನಿಸಿದರೂ ಒಡಲಾಳದ ದೃಢತೆ ನಮ್ಮೊಳಗೊಂದು ಗಟ್ಟಿತನದ ತರಂಗವನ್ನು ಹೀಗೆ ಹಾಯಿಸುತ್ತದೆ. “ಅಪ್ಪ ಅವ್ವ ನಳನಳಿಸುತ್ತಾರೆ ಯಾರ್ಯಾರೋ ತೊಡಿಸಿ ಹೋದ ಅವಮಾನದ ಬಟ್ಟೆಯಿಂದ ನೋಡಿ ಅದೆಷ್ಟು ಗಟ್ಟಿ ಇಂದಿಗೂ ಅದಕ್ಕೊಂದು ಸವಕಲು ಬಂದಿಲ್ಲ”
ಸದಾಶಿವ್ ಸೊರಟೂರು ಅವರು ಜನಿಸಿದ್ದು 1983 ಜೂನ್ 18ರಂದು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರಾದ ಸದಾಶಿವ ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನಸುಗಳಿವೆ ಕೊಳ್ಳುವವರಿಲ್ಲ, ಹೆಸರಿಲ್ಲದ ಬಯಲು, ಕನಸುಗಳಿವೆ ಕೊಳ್ಳುವವರಿಲ್ಲ, ಹೊಸ್ತಿಲಾಚೆ ಬೆತ್ತಲೆ, ತೂತು ಬಿದ್ದ ಚಂದಿರ ಮುಂತಾದವು. ...
READ MORE