ಗೌಡರ ಮಲ್ಲಿ- ಮೂಕನ ಮಕ್ಕಳು

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 50

₹ 80.00
Year of Publication: 2009
Published by: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್
Address: ಗವಿಪುರಂ ಬಡಾವಣೆ, ಬೆಂಗಳೂರು

Synopsys

ಗೌಡರ ಮಲ್ಲಿ’ ಮಾಸ್ತಿಯವರ ಕಥನ ಕವನ. ಪ್ರೇಮ ಅದರ ವಸ್ತು. ಕಾರ್ತೀಕದ ದಿನಗಳಲ್ಲಿ ಹಮನುನ ಗಿರಿಯ ಸುತ್ತಲ ಹೊಲಗಳಲ್ಲಿ ಸುತ್ತಾಡುವಾಗ ಮಾಸ್ತಿಯವರಿಗೆ ಈ ಕವನದ ಕೆಲವು ಸಾಲುಗಳು ಹೊಳೆದವು. ಆದರೆ, ಅದನ್ನು ಪೂರ್ಣಗೊಳಿಸಲು ಮೂರ್‍ನಾಲ್ಕು ತಿಂಗಳು ಬೇಕಾದವು. ಮೊದಲ ಬಾರಿಗೆ ’ಗೌಡರ ಮಲ್ಲಿ’ಯು ಜೀವನ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ 1940ರಲ್ಲಿ ಪ್ರತ್ಯೇಕ ಪುಸ್ತಕವಾಗಿ ಪ್ರಕಟವಾಯಿತು. 

ವಿವೇಕಿಗಳಾದವರ ಲೌಕಿಕ ಜೀವನದಲ್ಲಿಯೂ ಮಧುರ ಪ್ರೀತಿಯು ಯಾವ ಮಟ್ಟವನ್ನು ಮುಟ್ಟಬಲ್ಲುದೆಂಬುದನ್ನು ಈ ಕವನವು ತೋರಿಸುವುದು. ಪ್ರೇಮದ ಅನನ್ಯತೆ, ಸರ್ವ ಸಮರ್ಪಣ, ಆಂತರಿಕ ಔಚಿತ್ಯಗಳಿಂದ ಹಸನಾದ ಜೀವರುಗಳಲ್ಲಿ ದಿನದ ನಡತೆಯೂ ದಿವ್ಯವಾಗಿ ತೋರುವುದು’ ಎಂದು ಜೀವನ ಪತ್ರಿಕೆಯ ಸಂಪಾದಕರು ಬರೆದಿದ್ದಾರೆ.

ಈ ಪುಸ್ತಕದಲ್ಲಿ ಪುರುಷೋತ್ತಮರಾಯರು ಚಿತ್ರಿಸಿದ ಚಿತ್ರಗಳಿವೆ.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books