ಮುಳ್ಳು ಚೆಲ್ಲಿದ ಹಾದಿಗೆ

Author : ಭೀಮರಾಯ ಹೇಮನೂರು

Pages 180

₹ 150.00
Year of Publication: 2019
Published by: ಮಯೂರ ಪ್ರಕಾಶನ
Address: # 203, ಬಸವ ಚೇತನ, ಕೇನ್ ಬ್ರಿಡ್ಜ್ ಸ್ಕೂಲ್ ಹಿಂಭಾಗ, ಭೋಜಲಿಂಗೇಶ್ವರ ಮಠ  ಸಮೀಪ, ಶಹಾಬಾದ ರಸ್ತೆ, ಕಲಬುರಗಿ-585103

Synopsys

ಕವಿ ಭೀಮರಾಯ ಹೇಮನೂರು ಅವರ ಕವನ ಸಂಕಲನ- ಮುಳ್ಳು ಚೆಲ್ಲಿದ ಹಾದಿಗೆ. ಕೃತಿಯಲ್ಲಿ ಮೂರು ವಿಭಾಗಗಳನ್ನು ಮಾಡಿದ್ದು 150 ಹನಿ ಕುಸುಮಗಳು, 81 ವಚನ ಕುಸುಮಗಳು ಹಾಗೂ 34 ಕಾವ್ಯ ಕುಸುಮಗಳನ್ನು ಸಂಕಲಿಸಲಾಗಿದೆ. ಸಾಹಿತಿ ಪ್ರೊ. ವಸಂತ ಕುಷ್ಟಗಿ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಭೀಜಿ. ಅವರ ಸಾಹಿತ್ಯಾಭಿವ್ಯಕ್ತಿಯಲ್ಲಿ ಸಹಜತೆ ಇದೆ. ಲಾಲಿತ್ಯವಿದೆ. ಸತ್ಯವು ಅಪ್ರಿಯವಾಗಿರುವುದನ್ನು ಸಮರಸಪ್ರಜ್ಞೆಯಲ್ಲಿ ಹಂಚುವ ದಿಸೆಯಿದೆ. ರಚನೆಗಳಲ್ಲಿ ಸಂಪ್ರೀತಿ ಇದೆ. ಆತ್ಮಾನುಸಂಧಾನಕ್ಕೆ ಅವಕಾಶವಿದೆ. ತಾನುಂಡ ಖುಷಿಯಲ್ಲಿ ಸಮರ್ಪಣಾ ಭಾವವಿದೆ. ನುಡಿಯ ಆರ್ಭಟಕ್ಕಿಂತ ಅಂತಃಕರುಣೆಯ ನಿರ್ಮಲವಾಹಿನಿ ಇದೆ’ ಎಂದು ಪ್ರಶಂಸಿಸಿದ್ದಾರೆ. 

 

 

About the Author

ಭೀಮರಾಯ ಹೇಮನೂರು

ಲೇಖಕ ಭೀಮರಾಯ ಹೇಮನೂರು. ‘ಭೀಜಿ’ ಎಂಬುದು ಇವರ ಕಾವ್ಯನಾಮ. ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು. ಬಿ.ಕಾಂ ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಅಫಜಲಪುರದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆ ನಿರ್ವಹಿಸುತ್ತಿದ್ದಾರೆ.  ಕೃತಿಗಳು: ಮುಳ್ಳು ಚೆಲ್ಲಿದ ಹಾದಿಗೆ.. (ಕವನ ಸಂಕಲನ) ಈ ಕೃತಿಗೆ ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿಂದ 2019ನೇ ಕಾವ್ಯ ವಿಭಾಗದಲ್ಲಿ ಪ್ರಶಸ್ತಿ, .2020ರ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯಲ್ಲಿ ಆಕಾಶವಾಣಿ ಆಯೋಜಿತ  ರಾಷ್ಟ್ರಮಟ್ಟದ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಕವನ ವಾಚಿಸಿದ್ದರು. ‘ಯಾರು ಒಳ್ಳೆಯವರು ಯಾರು ಕೆಟ್ಟವರು’ (ನಾಟಕ) ...

READ MORE

Related Books