ಬುದ್ಧಸ್ಮಿತ - ಕವನ ಸಂಕಲನ

Author : ರವಿ.ಬ. ಹಾದಿಮನಿ

Pages 92

₹ 85.00
Year of Publication: 2020
Published by: ಹೊನ್ನ ಕುಸುಮ ಪ್ರಕಾಶನ
Address: ಪ್ರತೀಕ್ಷಾ ನಿಲಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಹುನಗುಂದ ಬಾಗಲಕೋಟೆ ಜಿಲ್ಲೆ - 587118
Phone: 9731572748

Synopsys

ಕವಿ ರವಿ ಹಾದಿಮನಿ ಅವರ ಮೊದಲ ಕವನ ಸಂಕಲನ ’ಬುದ್ಧಸ್ಮಿತ’. ಒಟ್ಟು 57  ಕವಿತೆಗಳಿವೆ. ಕೃತಿಗೆ ಮುನ್ನುಡಿ ಬರೆದ, ಯ. ಮಾ. ಯಾಕೊಳ್ಳಿ , ’‘ ವಿಭಿನ್ನಮನೋಭಾವದ ಕವಿತೆಗಳಿವೆ. ಶರಣರ ಸಂಸತ್ತಿನ ನೆನಪಿನಿಂದ ಹಿಡಿದು ಜಾಗತೀಕರಣದಂತಹ ಅತ್ಯಾಧುನಿಕ ಸಂಗತಿಗಳೂ ಕವಿತೆಯಾಗಿವೆ. ಬುದ್ಧ ಇಲ್ಲಿ ಮತ್ತೆ ಮತ್ತೆ ಬರುತ್ತಾನೆ. ಅಮರ ಕವಿ ಬೇಂದ್ರೆ, ಜಿ.ಎಸ್.ಎಸ್ ಮುಂತಾದ ಕವಿಗಳನ್ನು ನೆನೆಯುತ್ತಾರೆ. ಐಪಿಎಲ್ ಕ್ರಿಕೆಟ್ ನಂತಹ ಹೊಸಕಾಲದ ವಿದ್ಯಮಾನಗಳೂ ಕವಿತೆಯಾಗಿವೆ. ’ ಎಂದು ಪ್ರಶಂಸಿಸಿದ್ದಾರೆ.

About the Author

ರವಿ.ಬ. ಹಾದಿಮನಿ

ಲೇಖಕ ರವಿ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದವರು. ತಂದೆ ಬಸವಂತರಾಯ. ತಾಯಿ ಧನಪೂರ್ಣ. ಇವರು ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ತಶಾವರಗೇರಾದ  ಶಶಿಧರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ, ಬಾಗಲಕೋಟೆ ಜಿಲ್ಲೆಯ ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದರು. ಪ್ರಸ್ತುತ ಕುಷ್ಟಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ...

READ MORE

Related Books