ಸ್ಪರ್ಶ ಶಿಲೆ

Author : ಕೆ.ಎನ್. ಲಾವಣ್ಯ ಪ್ರಭಾ

Pages 64

₹ 70.00




Year of Publication: 2022
Published by: ಕವಿತಾ ಪ್ರಕಾಶನ
Address: 101, ಸೃಷ್ಟಿ ಸಾಲಿಗ್ರಾಮ ಅಪಾರ್ಟ್‌ಮೆಂಟ್, ಜಯಲಕ್ಷ್ಮಿ ವಿಲಾಸ್ ರಸ್ತೆ, ಚಾಮರಾಜಪುರಂ, ಮೈಸೂರು- 570 005
Phone: 9880105526

Synopsys

‘ಸ್ಪರ್ಶ ಶಿಲೆ’ ಲೇಖಕಿ ಕೆ.ಎನ್. ಲಾವಣ್ಯಪ್ರಭ ಅವರ ಕವಿತೆಗಳ ಸಂಕಲನ. ಇಲ್ಲಿ ಲಾವಣ್ಯ ಪ್ರಭಾ ಅವರ ಮೂವತ್ತಾರು ಕವಿತೆಗಳು ಸಂಕಲನಗೊಂಡಿವೆ. ಇಲ್ಲಿನ ಕವಿತೆಗಳ ವಿಶೇಷತೆ ಅಂದರೆ ವಸ್ತು ವೈವಿಧ್ಯತೆ. ಕವಿ ತನ್ನ ವೈಯಕ್ತಿಕ ನೆಲೆಯ ಅನುಭವಗಳನ್ನು ತನ್ಮಯತೆಯಿಂದ ನೋಡುತ್ತ ಅವನ್ನು ಸಾರ್ವತ್ರಿಕಗೊಳಿಸುವ ಬಗೆಯನ್ನು ಒಂದೆಡೆಯಲ್ಲಿ ಹುಡುಕುತ್ತಿದ್ದರೆ, ಸಾಮಾಜಿಕ ಅನುಭವವನ್ನು ಭಾವತೀವ್ರತೆಯಲ್ಲಿ ಕಟ್ಟುತ್ತ ತನ್ನದನ್ನಾಗಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಇನ್ನೊಂದೆಡೆ ಹುಡುಕುತ್ತಿರುವುದು ಕಾಣುತ್ತದೆ. ಆ ಅರ್ಥದಲ್ಲಿ ಇಲ್ಲಿನ ಕವಿತೆಗಳನ್ನು ವಿಶಾಲವಾಗಿ ಎರಡು ಗುಂಪುಗಳನ್ನಾಗಿ ಮಾಡಿ ಓದಲು ಸಾಧ್ಯವಿದೆ. ನವಿರುತನ, ಬೆಚ್ಚಗಿನ ಸಂವೇದನೆ, ಆರ್ದತೆಗಳನ್ನು ಅಭಿವ್ಯಕ್ತಿಸುವ, ಖಾಸಗಿಯಾಗಿರುತ್ತಲೇ ತನ್ನ ಬೆಚ್ಚಗಿನ ಭಾವವನ್ನು ವಿಸ್ತರಿಸಲು ಹವಣಿಸುವ ಕವಿತೆಗಳದ್ದು ಒಂದು ಗುಂಪು, ಇನ್ನೊಂದು ಸಾಮಾನ್ಯ ಲೋಕಾನುಭವವನ್ನು ಅಂತರಂಗದಲ್ಲಿ ಅನುಭವಿಸುತ್ತ ತಾನು ಸಾರ್ವತ್ರಿಕಗೊಳ್ಳುವ ವಿಧಾನವನ್ನು ಕಂಡುಕೊಳ್ಳುವುದು. ಕಾವ್ಯ ಅಥವಾ ಒಟ್ಟಾರೆ ಸಾಹಿತ್ಯ ಉದ್ದೇಶವೇ ಏಕಾಂತ- ಲೋಕಾಂತಗಳ ಅಂತರವನ್ನು ಅಳಿಸಿ ಹಾಕುತ್ತ ಇಲ್ಲವೇ ಅವುಗಳ ನಡುವಿರುವ ಸಾವಯವ ಸಂಬಂಧವನ್ನು ಅರಿಯುತ್ತ ಹೊಸ ಪ್ರಜ್ಞೆಯನ್ನು ಪಡೆಯುವುದಾಗಿರುವುದರಿಂದ ಇಲ್ಲಿ ಕೊಡು- ಕೊಳೆ ಎರಡೂ ಇರುತ್ತವೆ. ಅವು ಸಮಸಮವಾಗಿ ಬೆರೆತಾಗ ಓದುಗ ಹೊಸ ಅನುಭವವನ್ನು ಪಡೆಯಬಲ್ಲ. ಲಾವಣ್ಯ ಪ್ರಭಾ ಅವರು ಎರಡನ್ನೂ ಸಾಧಿಸುವ, ಪಡೆಯುವ ಪ್ರಯತ್ನದಲ್ಲಿದ್ದಾರೆ ಮತ್ತು ಆ ಪ್ರಯತ್ನಶೀಲತೆ ಗಂಭೀರವಾಗಿದೆ ಎನ್ನಬಹುದು

About the Author

ಕೆ.ಎನ್. ಲಾವಣ್ಯ ಪ್ರಭಾ

ಕವಿ ಕೆ. ಎನ್. ಲಾವಣ್ಯ ಪ್ರಭ ಅವರು ಮೂಲತಃ ಮೈಸೂರಿನವರು. ಅವರು 1971 ನವೆಂಬರ್‌ 02ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಾ. ಆರ್‌. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಅವರು ‘ಎಂ. ವಿ. ಸೀತಾರಾಮಯ್ಯನವರ ಸಾಹಿತ್ಯ’ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಇವರ ಹಲವಾರು ಕವಿತೆಗಳು ಕನ್ನಡದ ದಿನ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ನದಿ ಧ್ಯಾನದಲ್ಲಿದೆ’, ‘ಹುಟ್ಟಲಿರುವ ನಾಳೆಗಾಗಿ’, ‘ಗೋಡೆಗಿಡ’ ಅವರ ಕವನ ಸಂಕಲನಗಳು. ಸಂಶೋಧನಾ ಪ್ರಬಂಧ ಅವರ ಕವನ ಸಂಕಲನ. ತಮ್ಮದೇ ಯುಟ್ಯೂಬ್‌ ಚಾನೆಲ್‌ ಮೂಲಕ ಕಾವ್ಯ ...

READ MORE

Related Books