ಸಖಿ ಸಖ

Author : ಎ.ಎಸ್. ಮಕಾನದಾರ

Pages 96

₹ 75.00




Year of Publication: 2008
Published by: ನಿರಂತರ ಪ್ರಕಾಶನ
Address: # ಮಾಸುಮ್ ಮಂಜಿಲ್ , ಟೆಕ್ಕೇದ ಓಣಿ, ಗಜೇಂದ್ರಗಡ- 582114 ಜಿಲ್ಲಾ :ಗದಗ
Phone: 9916480291

Synopsys

ಲೇಖಕ ಹಾಗೂ ಕವಿ ಎ ಎಸ್. ಮಕಾನದಾರ ಅವರು ಬರೆದ ವೈವಿಧ್ಯಮಯ ವಿಷಯ ವಸ್ತು ಗಳಿಂದ ಕೂಡಿದ ಕವನ ಸಂಕಲನ- ಸಖಿ ಸಖ. ಬದುಕಿನ ವಿವಿಧ ಸಂಗತಿ, ಪ್ರೀತಿ, ಪ್ರೇಮ, ಸ್ನೇಹ, ಸಮಸ್ಯೆ, ಘಟನೆಗಳನ್ನು ಬಿಚ್ಚುಗಣ್ಣಿನಿಂದ ನೋಡುವ ಕವಿ, ಬಹಳ ಕಡೆ ಚುಚ್ಚು ಮದ್ದಿನಂತಹ ಪರಿಣಾಮಕಾರಿ ಚುಟುಕುಗಳ ಮೂಲಕ ಓದುಗರ ಸದ್ವಿವೇಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಕುಟುಕಿದ್ದಾರೆ, ತಿವಿದಿದ್ದಾರೆ, ಕಂಬನಿ ಸುರಿಸಿದ್ದಾರೆ. ನಮ್ಮ ಜಾಣ ಕಿವುಡು. ಮರೆವು, ಕುರುಡುಗಳಿಗೆ ಚಾಟಿ ಏಟು ಬೀಸಿದ್ದಾರೆ. ಸಾಮಾಜಿಕ ಸಮಸ್ಸೆಗಳಿಂದ ವಿಮುಖ ವಾಗಿ ಜೀವಿಸುವ ಸುಕುಮಾರರ ಅಸ್ತಿತ್ವ ಗಳನ್ನುಅಣುಕಿಸಿದ್ದಾರೆ.

ಹಿರಿಯ ಚುಟುಕು ಕವಿ ಎಚ್ ದುಂಡಿ ರಾಜ್ ಅವರು ಮಕಾನದಾರ ಅವರ ತಾಜಾತನದ ಕಾವ್ಯದಲ್ಲಿ ಪ್ರಾಸ, ಲಯ, ಪ್ರತಿಮೆಗಳನ್ನು ಬಳಸಿಕೊಂಡು ಕಾವ್ಯ ಕಟ್ಟುವ ಪ್ರಯತ್ನ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕಾವ್ಯದ ಸಾಮಗ್ರಿಗಳ ಪರಿಚಯ, ಮಹತ್ವದ ಅರಿವು ಹೊಂದಿರುವ ಮಕಾನದಾರ ಅವರು ಹನಿಗವನಗಳ ರಚನೆಯಲ್ಲಿ ಯಶಸ್ವಿಯಾಗಿದ್ದಾರೆ ಅಂತಾ ಅಭಿಮಾನ ಪಟ್ಟಿದ್ದಾರೆ. ಹಿರಿಯ ಸಾಹಿತಿ ಎಂ ಎ ಸನದಿ, ಜಿ ಎಸ್. ಅನ್ನದಾನಿ, ಎಂ ಡಿ ಗೋಗೇರಿ ಅವರ ನುಡಿ ತೋರಣ ಕಲಾವಿದ ಎಂ ಕಮಲ್ ಅವರ ರೇಖಾ ಚಿತ್ರ. ಪುಂಡಲೀಕ್ ಕಲ್ಲಿಗನೂರ ಅವರ ಆಕರ್ಷಕ ಮುಖಪುಟ, ಜರಗನಹಳ್ಳಿ ಶಿವಶಂಕರ್, ಡಾ ಸಬಿಹಾ ಭೂಮಿಗೌಡ, ಡಾ ಅಯ್ ಜೆ. ಮ್ಯಾಗೇರಿ ಡಿ ವಿ ಬಡಿಗೇರ್, ಏನ್. ಎಂ ಕೊಟ್ರೇಶ್ ಅವರ ಸದಭಿಪ್ರಾಯಗಳು ಸಂಕಲನದ ಮೌಲ್ಯ ಹೆಚ್ಚಿಸಿವೆ

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books