ಸಂಕೋಲೆಗಳ ಕಳಚುತ್ತ

Author : ಕು. ಸ. ಮಧುಸೂದನ

Pages 154

₹ 150.00




Year of Publication: 2019
Published by: ಕಾವ್ಯ ಸ್ಪಂದನ ಪಬ್ಲಿಕೇಷನ್ಸ್
Address: # 154/ಸಿ, 42ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 8861495610

Synopsys

ಕವಿ ಕು.ಸ.ಮಧುಸೂದನ್ ಅವರ ಕವನ ಸಂಕಲನ-ಸಂಕೋಲೆಗಳನ್ನು ಕಳಚುತ್ತ. ಇಡೀ ಜಗತ್ತೇ ಒಂದು ವಿಚಿತ್ರ ಬಂಧಿಖಾನೆಯಾಗಿ, ನಾವೆಲ್ಲ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದೇವೇನೊ ಎನ್ನುವ ವಾತಾವರಣ ನಿರ್ಮಾಣಗೊಂಡಿದೆ. ಒಂದೆಡೆ ಜಾಗತೀಕರಣ-ಮುಕ್ತ ಆರ್ಥಿಕ ನೀತಿ ಸ್ಥಳೀಯವಾದ ಎಲ್ಲವನ್ನೂ ಇಲ್ಲವಾಗಿಸುತ್ತ ಬರುತ್ತಿದ್ದರೆ, ಇನ್ನೊಂದೆಡೆ ಮತೀಯ ಮೂಲವಾದದ ಉಪ ಉತ್ಪನ್ನವಾದ ಎಲ್ಲ ತೆರನಾದ ಭಯೋತ್ಪಾದನೆ ನಮ್ಮ ದನಿಗಳನ್ನುಉಡುಗಿಸುವ ಪ್ರಯತ್ನದಲ್ಲಿದೆ. ಪ್ರಶ್ನೆಗಳನ್ನು ಕೇಳುವುದೇ ಅಪರಾಧವೆಂದು ಆರೋಪಿಸಲ್ಪಡುತ್ತಿರುವ ಈ ಸನ್ನಿವೇಶದಲ್ಲಿ ನನ್ನ ಕವಿತೆಗಳು ಪ್ರಶ್ನೆಗಳನ್ನು ಕೇಳುತ್ತಲೇ,ಉತ್ತರಗಳನ್ನೂ ಹುಡುಕುವ ಪ್ರಯತ್ನ ಮಾಡಿವೆ. ಹೀಗೆ ಪ್ರಶ್ನೋತ್ತರಗಳಲ್ಲಿ ಕೆಲವು ಕವಿತೆಗಳು ಸೂಕ್ಷ್ಮವಾಗಿ ಇನ್ನು ಕೆಲವು ವಾಚ್ಯವಾಗಿಯೂ ಇವೆ’ ಎಂದು ಸ್ವತಃ ಕವಿ ಕು.ಸ. ಮಧುಸೂದನ್ ಅಭಿಪ್ರಾಯಪಟ್ಟಿದ್ದಾರೆ. 

 

About the Author

ಕು. ಸ. ಮಧುಸೂದನ

ಕವಿ,ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ.ಮಧುಸೂದನ ಅವರು 1963ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ಮಾತೃಭಾಷೆ ಮಲೆಯಾಳಂ. ಆದರೂ, ಓದಿದ್ದು ಬರೆದಿದ್ದು ಮಾತ್ರ ಕನ್ನಡದಲ್ಲಿಯೇ. ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ(ಮುಡುಗೋಡು) ಗ್ರಾಮದಲ್ಲಿನೆಲೆಸಿದ್ದಾರೆ. ’ಅಸಹಾಯಕ ಆತ್ಮಗಳು’ ಕಥಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ” ಅವರ ಕವನ ಸಂಕಲನ. ಸಮಕಾಲೀನ ರಾಜಕೀಯ ವಿದ್ಮಮಾನಗಳ ವಿಶ್ಲೇಷಣೆ ಒಳಗೊಂಡ ’ಮಣ್ಣಿನ ಕಣ್ಣು ಭಾಗ - 1 ಮತ್ತು 2' ನ್ನು ಪ್ರಕಟಿಸಿದ್ದಾರೆ ...

READ MORE

Related Books