ಸಖ ಬಾ ಸಂಚಾರಕೆ

Author : ವಿಜಯಾ ಸುಬ್ಬರಾಜ್

Pages 100

₹ 60.00




Year of Publication: 2007
Published by: ಸುಂದರ ಪ್ರಕಾಶನ
Address: ಕಲಾಮಂದಿರ, 5ನೇ ಅಡ್ಡರಸ್ತೆ, ಎ.ಎನ್. ಸುಬ್ಬರಾವ್‌ ರಸ್ತೆ, ಹನುಮಂತನಗರ, ಬೆಂಗಳೂರು
Phone: 08026605796

Synopsys

ಹೆಣ್ಣಿನ ಅಂತರಂಗದ ದನಿಯ ಅಭಿವ್ಯಕ್ತಿ ವಿಜಯಾ ಅವರ 'ಸಖಿ ಬಾ ಸಂಚಾರಕೆ' ಕವನ ಸಂಕಲನದಲ್ಲಿ ಪ್ರತಿಧ್ವನಿಯಾಗಿದೆ. ಇಲ್ಲಿಯ ದನಿಯಲ್ಲಿ ಮುಖ್ಯವಾಗಿ ನ್ಯಾಯ ದೊರಕಿಸಿಲ್ಲ ಎನ್ನುವಂಥ ನೋವು ಉದ್ದಕ್ಕೂ ಕಂಡುಬರುತ್ತದೆ. 'ಸ್ವಗತ' ಎಂಬ ಕವಿತೆಯಲ್ಲಿ ಎಂಬತ್ತಾರರ ಮುದುಕಿಯ ಅಳಲು, ಸ್ತ್ರೀ ಶೋಷಣೆಗೆ ಒಳಗಾದ ನೋವಿನ ಪ್ರತೀಕವಾಗಿ ಗಮನ ಸೆಳೆಯುತ್ತದೆ. 

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books