ಅಗ್ನಿರಾಗ

Author : ಕೆ. ಕೇಶವ ಶರ್ಮ

Pages 56

₹ 30.00
Year of Publication: 2004
Published by: ಬಂಡಾಯ ಪ್ರಕಾಶನ
Address: ಸಹಯಾನ, ಕೆರೆಕೋಣ ಅರೇಅಂಗಡಿ, ಹೊನ್ನಾವರ, ಉತ್ತರ ಕನ್ನಡ-581334
Phone: 8762518640

Synopsys

‘ಅಗ್ನಿರಾಗ’ ಕೇಶವಶರ್ಮ ಕೆ. ಕವನ ಸಂಕಲನವಾಗಿದೆ. ಅತೃಪ್ತ ಮನಸ್ಸಿನ ಅನೇಕ ಅನಿಸಿಕೆಗಳನ್ನು ಧ್ವನಿಸುವ ಅಗ್ನಿರಾಗದ ಕವಿತೆಗಳು ಹಿಂಸೆಯ ನಾನಾ ರೂಪಗಳನ್ನು ಪರಿಚಯಿಸುತ್ತವೆ. ಪಂಚಭೂತಗಳಲ್ಲೊಂದಾದ ಅಗ್ನಿ ಇಂದಿನ ಅಗ್ನಿರಾಗದಗ್ಧ ಮನಸ್ಸುಗಳಿಗೆ ರೂಪಕವಾಗಿ ಕಾಣುತ್ತದೆ. ಇಂದು ಬಂದೂಕಿನ ಬಾಯಿ, ಕೋಪೋದ್ರಿಕ್ತ ಕಣ್ಣು, ಹಸಿದವರ ಒಡಲು, ಎಲ್ಲೆಂದರಲ್ಲಿ ಅಗ್ನಿಯು ರೌದ್ರರಾಗ ಪ್ರಜ್ವಲಿಸುತ್ತದೆ. ಪರಿಣಾಮ ವಿನಾಶದತ್ತ ಹೊರಳುವುದೇ ಆಗಿದೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Reviews

ಹೊಸತು -ಜನವರಿ-2005

ಅತೃಪ್ತ ಮನಸ್ಸಿನ ಅನೇಕ ಅನಿಸಿಕೆಗಳನ್ನು ಧ್ವನಿಸುವ ಅಗ್ನಿರಾಗದ ಕವಿತೆಗಳು ಹಿಂಸೆಯ ನಾನಾ ರೂಪಗಳನ್ನು ಪರಿಚಯಿಸುತ್ತವೆ. ಪಂಚಭೂತಗಳಲ್ಲೊಂದಾದ ಅಗ್ನಿ ಇಂದಿನ ಅಗ್ನಿರಾಗದಗ್ಧ ಮನಸ್ಸುಗಳಿಗೆ ರೂಪಕವಾಗಿ ಕಾಣುತ್ತದೆ. ಇಂದು ಬಂದೂಕಿನ ಬಾಯಿ, ಕೋಪೋದ್ರಿಕ್ತ ಕಣ್ಣು, ಹಸಿದವರ ಒಡಲು, ಎಲ್ಲೆಂದರಲ್ಲಿ ಅಗ್ನಿಯು ರೌದ್ರರಾಗ ಪ್ರಜ್ವಲಿಸುತ್ತದೆ. ಪರಿಣಾಮ ವಿನಾಶದತ್ತ ಹೊರಳುವುದೇ ಆಗಿದೆ. ಜ್ವಾಲೆಯಿಂದ ಹಣತೆಯನ್ನು ಹಚ್ಚಿ ಬೆಳಕು ಮಾತ್ರ ಪಡೆದು ತೃಪ್ತನಾಗದ ಮನುಷ್ಯನ ಅವಿವೇಕಕ್ಕಾಗಿ ಕವಿತೆಗಳು ಮರುಗುತ್ತವೆ. ಇತಿಹಾಸ ಪುರಾಣಗಳಲ್ಲಿ ಹೆಜ್ಜೆಹೆಜ್ಜೆಗೂ ಇರುವ ಇಂಥ ಅತಿರೇಕಗಳ ಉದಾಹರಣೆ ನೀಡುತ್ತ ಹಿಂಸೆಯಿಂದ ಮುಕ್ತವಾಗಲು ಕವಿ ಮನಸ್ಸು ಹಂಬಲಿಸುತ್ತದೆ. ಒಂದು ಸುಂದರ ಸಾಲು ಹೀಗಿದೆ : ಅಗ್ನಿಯೇ - ಗುಡಿಸಲಿನಲ್ಲಿ – ಮುದುಕಿ ಒಲೆ ಹಚ್ಚಿದ್ದಾಳೆ, ಗಂಜಿ ಬೇಯಿಸಿಕೊಡು.' ಸಾಕಲ್ಲವೇ ? 

Related Books