ನಾ ಕವಿತೆ ಬರೆಯಲೇ ಇಲ್ಲ!

Author : ಬಿ.ಎಂ. ರಾವ್ ಆನೂರು

Pages 96

₹ 50.00




Year of Publication: 2012
Published by: ಚೇತನ ಪ್ರಕಾಶನ
Address: ಮಹಾಂತೇಶ ಶಾಲೆ ಹಿಂಭಾಗ, ಬಳೂರಗಿ ರಸ್ತೆ, ಅಫಜಲಪುರ, ಜಿಲ್ಲೆ ಕಲಬುರಗಿ

Synopsys

ಲೇಖಕ ಬಿ.ಎನ್. ರಾವ್ ಆನೂರ ಅವರ ಕವನ ಸಂಕಲನ -ನಾ ಕವಿತೆ ಬರೆಯಲೇ ಇಲ್ಲ. ಯೌವನ ಮಾಗಿಯ ಕನಸುಗಳಿಗೆ ಕಚಗುಳಿ ಇಡುವ ಮಾಸದ ನೆನಪುಗಳು ಎಂಬ ಉಪಶೀರ್ಷಿಕೆಯಡಿ ಕವತೆಗಳನ್ನು ರಚಿಸಲಾಗಿದೆ. ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಮೂಲಕ ಬರಹವನ್ನು ಮೈಗೂಡಿಸಿಕೊಂಡ ಈ ಕವಿಯ ಮೊದಲ ಕವನ ಸಂಕಲನವಿದು.

ಬಂಡಾಯ ಕವಿ ಎಂದೇ ಖ್ಯಾತಿ ಚೆನ್ನಣ್ಣ ವಾಲೀಕಾರ್‍ ಕೃತಿಗೆ ಬೆನ್ನುಡಿ ಬರದು ‘ಅತಿ ಕೆಳಸ್ತರದಿಂದ ಬಂದಿರುವ ಈ ಕವಿ ತನ್ನ ನೋವು ನಲಿವು, ಸುಖ ದುಃಖ, ಏಳುಬೀಳಿನ, ಬದುಕಿನ ಚಿತ್ರಣವನ್ನು ಕವಿತೆಗಳಲ್ಲಿ ಪಡಿಮೂಡಿಸಿದ್ದಾರೆ. ಬದುಕಿನ ಬರಹ, ಹೋರಾಟದ ಹಾದಿಯ ಪಯಣ, ಚಿಗುರು ಮೀಸೆಯ ಚೆಲುವ, ಬೆತ್ತಲೆಯ ಕತ್ತಲೆಯ ಲೋಕದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಇವು ಬಹು ಮುಖ್ಯವಾದ ಕವಿತೆಗಳಾಗಿವೆ. ಹೊಸತನದ ಸೊಗಡು ದಟ್ಟವಾಗಿ ಕವಿತೆಯಲ್ಲಿ ಹೊರಹೊಮ್ಮಿದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಡಾ. ಮಲ್ಕಿಕಾಘಂಟಿ ಅವರು ‘ ಅರ್ಥಪೂರ್ಣ ಬದುಕಿಗೆ ಹಂಬಲಿಸುವ ಕವಿಹೃದಯ ಈ ರೋಗಗ್ರಸ್ತ ಸಮಾಜದ ಬಗ್ಗೆ ತಾತ್ವಿಕ ಪ್ರಶ್ನೆಗಳನ್ನು ಹಾಕುವುದರ ಮೂಲಕ ಚರಿತ್ರೆಯನ್ನು ಗ್ರಹಿಸಿಕೊಳ್ಳಲು ಮುಂದಾಗಿದೆ. ಅಂಬೇಡ್ಕರ್ ಕುರಿತು 'ನೀ ಬದುಕ ಬೇಕಾಗಿತ್ತು ಬಾಬಾಸಾಹೇಬ 'ಎನ್ನುವ ಕವನ ಮೀಸಲಾತಿಯ ಫಲಾನುಭವಿಗಳು ಆತ್ಮವಿಮರ್ಶೆಗೆ ಒಳಗಾಗಬೇಕೆಂದು ಒತ್ತಾಯಿಸುತ್ತದೆ. ಅಕ್ಷರಸ್ತರೆಲ್ಲರೂ ಆತ್ಮವಿಮರ್ಶೆಗೆ ತೊಡಗದೆ ಬದಲಾವಣೆ ಸಾಧ್ಯವಿಲ್ಲ. ಅಕ್ಷರದ ಅರಿವು ನಮ್ಮನ್ನು ಮನುಷ್ಯರನ್ನಾಗಿಸುವ ಮನುಷ್ಯರಾದವರು ನಾಗರಿಕರಾ ಗುವ ಪ್ರಕ್ರಿಯೆ ಪರಿಪೂರ್ಣವಾಗುವರೆಗೂ ಸಾಮಾಜಿಕ ಬದಲಾವಣೆ ಕನಸಿನ ಮಾತು ಎಂಬುದನ್ನು ಕವಿ ಅಂತರ್ಗತ ಮಾಡಿಕೊಂಡಿರುವರು. ಇದರಿಂದ ಪ್ರಶ್ನೆ ಪ್ರತಿಭಟನೆ ಎಂಬುದು ತಾತ್ವಿಕ ನೆಲೆಯಿಂದಲೇ ಹೊರಡುವುದರಿಂದ ಬದುಕು ಸಹ್ಯ ವಾಗಬೇಕೆಂಬ ಕಾಳಜಿ ಇದೆ’ ಎಂದು ಶ್ಲಾಘಿಸಿದ್ದಾರೆ.

About the Author

ಬಿ.ಎಂ. ರಾವ್ ಆನೂರು

ಕವಿ ಬಿ.ಎಂ.ರಾವ್ ಆನೂರು ಮೂಲತಃ ಕಲಬುರಗಿ ಜಿಲ್ಲೆಯ  ಅಫಜಲಪುರ ತಾಲೂಕಿನ ಆನೂರು ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕಲಬುರಗಿಯಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಶಿಕ್ಷಣ ನಂತರ ಬೆಂಗಳೂರು ವಿ.ವಿ.ಯಿಂದ ಎಂ.ಎ ಪದವೀಧರರು. ಮೈಸೂರು ವಿ.ವಿ.ಯಿಂದ ಎಂಫಿಲ್ ಪದವೀಧರರು. ಸದ್ಯ, ಅಫಜಲಪುರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು.ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಅಹಿಂದ ನೌಕರರ ಸಂಘದ ಅಧ್ಯಕ್ಷರಾಗಿ, ತಾಲೂಕು ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ, ದೇವರಾಜುಅರಸು ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದರು. ಕೃತಿಗಳು: ಕಣ್ಣಂಚಿನ ಹನಿಗಳು, ತೀರದ ತೆರೆ, ಶಿಕ್ಷಕರ ಸಾಹಿತ್ಯ, ಭಾವನೆಯ ಗೊಂಚಲು, ಮನದೊಳಗಿನ ಮೌನ, ಅಲೆಗಳು, ಭೀಮಾತೀರದಲ್ಲಿ ...

READ MORE

Related Books