ವಿವೇಕಿಯ ಸ್ವಗತ ಕವನ ಸಂಕಲನ

Author : ತಾರಿಣಿ ಶುಭದಾಯಿನಿ .ಆರ್

Pages 104

₹ 120.00




Year of Publication: 2022
Published by: ಸಿದ್ಧಾರ್ಥ ಎಂಟರ್ ಪ್ರೈಸಸ್
Address: ಗಣಪತಿ ನಗರ, ಗಾಣಿಗರಹಳ್ಳಿ, ಬೆಂಗಳೂರು ಉತ್ತರ, ಚಿಕ್ಕಬಾಣಾವರ- 560090
Phone: 9916015005

Synopsys

‘ವಿವೇಕಿಯ ಸ್ವಗತ’ ಆರ್‌.ತಾರಿಣಿ ಶುಭದಾಯಿನಿ ಅವರ ಕವನ ಸಂಕಲನವಾಗಿದೆ. ತಾರಿಣಿಯ ಹೊಸ ಕವಿತೆಗಳ ಜಾಡು ಹೊಸತು. ಅವುಗಳ ಪ್ರಭಾವ ಸಹೃದಯರನ್ನು ಸೀದಾ ತಲುಪುತ್ತವೆ. ಆದರೆ ಅದನ್ನು ಬಿಡಿಸಿ ಹೇಳುವುದು ಕಷ್ಟ. ಈ ಕವಿತೆಗಳಲ್ಲಿ ಸ್ತ್ರೀತ್ವದ ಛಾಯೆಯಿರುವುದಾದರೂ ಇವು ಪ್ರಚ೦ತೆ ಸ್ತ್ರೀಕಾವ್ಯದ ಪಾಂಥಿಕತೆಯ ಪೋಸುಗಳಿಂದ ಪೂರ್ತಿ ಮುಕ್ತವಾಗಿವೆ. ಅಷ್ಟೇ ಅಲ್ಲ. ಸ್ತ್ರೀಕಾವ್ಯವೆಂಬ ಹಣೆಚೀಟಿಯನ್ನು ಕಿತ್ತು ಹಾಕಿದರೂ ಈ ಕವಿತೆಗಳು ಇಂದಿನ ಇಡೀ ಸಮಕಾಲೀನ ಕನ್ನಡ ಕಾವ್ಯ ಪರಿಸರದಲ್ಲಿ ತಮ್ಮದೇ ಆದ ಸ್ವಯಂದೀಪಕತೆಯಿಂದ ಬೆಳಗುತ್ತವೆ. ಈ ಕವಿತೆಗಳ ವಿಶೇಷ ಇವು ಮಾತನಾಡುವುದಿಲ್ಲ; ಯಾವ ಹೇಳಿಕೆ, ಕೇಳಕೆ, ನಂಬುಗೆಗಳು ಪರ- ವಿರೋಧ ಕ್ಯಾತೆಯನ್ನು ತೆಗೆಯುವುದಿಲ್ಲ. ಬದಲ್ಲಿಗೆ ಮಾತನ್ನು ಆಡಿಸುತ್ತವೆ; ಪಾಡಿಸುತ್ತವೆ, ಅಳಿಸುತ್ತವೆ. ಆಗೊಮ್ಮೆ ಈಗೊಮ್ಮೆ ನಗಿಸುತ್ತೆವೆ. ಎಲ್ಲಕ್ಕಿಂತ ಹೆಚ್ಚಾಗಿ ಅವು ನಮ್ಮನ್ನು ಕೆಲಕುವುದು ಅವುಗಳ ಬಸಿರಲ್ಲಿ ಕೊತಕೊತಕುದಿಯುತ್ತಿರುವ ಅಧಿಕೃತ ತಳಮಳದಿಂದ... ಆ ತಳಮಳದಲ್ಲಿ ಸ್ವಯ ಮತ್ತು ಪರಗಳ ಕಳವಳಗಳು ಬಿಚ್ಚಬಾರದಂತೆ ಪರಸ್ಪರ ಹೆಣೆದುಕೊಂಡಿವೆ. ಆ ಮೂಲಕ ಆ ಕುದಿ ನಮ್ಮಲ್ಲೂ ಉಂಟಾಗುವುದರಿಂದ ಸಾಧಾರಣೀಕರಣ ಪಡೆದುಕೊಳ್ಳುತ್ತಿವೆ. ಕೇವಲ ಅನುಭವನಿಷ್ಠವಾಗಿ ಜಗದ ರೂಪುರೇಷೆಗಳನ್ನು ರೇಖಿಸುವ, ಲೇಖಿಸುವ ಪರಿ ಹೊಸತಾದರೂ ಅಕ್ಕಮಹಾದೇವಿಯ ತಳಮಳವನ್ನು ಸಮಕಾಲೀನ ಮಾನವಕೇಂದ್ರಿತ ಜಗತ್ತಿನಲ್ಲಿ ಪುನರಭಿನಯಿಸುತ್ತವೆಯೇ ವಿನಾ ಪುನಾರಾವರ್ತನೆಗೊಳಿಸುತಿಲ್ಲ. ಹಿಂದಣ ಮಹಾಕವಿಗಳ ಮರುದನಿಗಳಿಂದ ಪರಿಪಾಕಗೊಂಡ ಈ ಕವಿತೆಗಳು ನೇರವಾಗಿ ಸಾಮೂಹಿಕ ತಳಚೇತನದ ಕಸುವಿನಿಂದ ಎಲ್ಲ ತಾಖತ್ತಿನೊಡನೆ ಹಿಂದಿನವರೊಂದಿಗೆ, ಮುಂದಿನವರೊಂದಿಗೆ, ಇಂದಿನವರೊಂದಿಗೆ ಏಕಕಾಲದಲ್ಲಿ ಹೃದಯಸಂವಾದ ಏರ್ಪಡಿಸಿಕೊಳ್ಳುತ್ತವೆ. ಎಂದು ಲೇಖಕ ಎಚ್.ಎಸ್.ಶಿವಪ್ರಕಾಶ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ತಾರಿಣಿ ಶುಭದಾಯಿನಿ .ಆರ್
(09 January 1971)

ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು.  ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ.  ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ. ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ...

READ MORE

Related Books