ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ

Author : ರಮೇಶ್ ಅರೋಲಿ

Pages 84

₹ 50.00
Year of Publication: 2010
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ’ ಕವಿ ರಮೇಶ ಅರೋಲಿ ಅವರ ಕವನ ಸಂಕಲನ. ಈ ಕೃತಿಗೆ ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮುನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ರಮೇಶ ಅಲೋಲಿಯವರ ಹೊಸ ಕವಿತಾ ಸಂಗ್ರಹಕ್ಕೆ ಮುನ್ನುಡಿ ರೂಪದಲ್ಲಿ ಕೆಲವು ಮಾತು ಬರೆಯುವುದಕ್ಕೆ ನನಗೆ ಸಂತೋಷವೆನಿಸುತ್ತಿದೆ. ಕಾರಣ, ಸಂಗ್ರಹದ ಮೊದಲ ಕವಿತೆ ಓದುವಾಗಲೇ ವಿಶಿಷ್ಟವಾದ ಒಂದು ಹೊಸ ಅನುಭವ ಜಗತ್ತು ಕನ್ನಡ ಕಾವ್ಯಲೋಕವನ್ನು ಇವರ ಮೂಲಕ ಪ್ರವೇಶಿಸುತ್ತಿದೆ ಎಂದು ಬೋಧೆಯಾಗುತ್ತದೆ. ಮುಂದೆ ಸಂಗ್ರಹದ ಬೇರೆ ಬೇರೆ ಕವಿತೆಗಳನ್ನು ಓದುತ್ತಾ ಹೋದಂತೆ ಈ ಬೋಧೆ ಒಂದು ಖಚಿತ ಅಭಿಪ್ರಾಯವಾಗಿ ಮನಸ್ಸಲ್ಲಿ ಬೇರೂರುತ್ತದೆ. ಇಂದೊಂದು ವಿಸ್ತಾರವಾದ ಅನುಭವ ಜಗತ್ತು. ಈ ಜಗತ್ತಲ್ಲಿ ಕಾಣುವ ವಿವರಗಳೆಲ್ಲಾ ಕಾಣುತ್ತಿರುವಂತೆಯೇ ಧ್ವನಿಪೂರ್ಣ ರೂಪಕಗಳಾಗಿ ರೂಪಾಂತರಗೊಳ್ಳುತ್ತವೆ. ಈ ಜಗತ್ತು ಕಾಲಾಬಾಧಿತವಾದುದು. ಭೌಗೋಳಿಕ ಗಡಿಗಳನ್ನು ಸದಾ ವಿಸ್ತರಿಸಿಕೊಳ್ಳುವಂಥದು. ಕನ್ನಡಕ್ಕೆ ಹೊಸದೆನ್ನಿಸುವ ದೃಶ್ಯ ಸಂಪತ್ತನ್ನು ನಿರಾಯಾಸವಾಗಿ ಕಣ್ಣ ಮುಂದೆ ಮೆರವಣಿಗೆ ಹೊರಡಿಸುವಂಥದು. ಇಲ್ಲಿಯ ದೃಶ್ಯ, ಅವುಗಳ ಬಣ್ಣ, ಅವುಗಳ ನಾದಸಂಪತ್ತು ಎಲ್ಲವೂ ಒಂದು ಹೊಚ್ಚ ಹೊಸ ವಸ್ತು ಪ್ರಪಂಚದ ನಾವೀನ್ಯವನ್ನು ಸಾರುವಂತಿವೆ. ಮತ್ತೂ ಇದು ತುಂಬ ಅಪ್ರಯತ್ನಕವಾಗಿ ಸಂಭವಿಸಿದ್ದು ಅನ್ನಿಸುತ್ತಿದೆ. ಆದುದರಿಂದಲೇ ಈ ಕವಿತೆಗಳನ್ನು ಓದಿದಾಗ ಪರಸ್ಥಳ ಒಂದನ್ನು ಇದ್ದಕ್ಕಿದ್ದಂತೆ ಪ್ರವೇಶಿಸಿದಾಗ ಆಗುವ ಒಂದು ಮೈ ನವಿರು ಉಂಟಾಗುತ್ತದೆ. ಕೆಲವೊಮ್ಮೆ ನಾವಿದನ್ನೆಲ್ಲೋ ಕನಸಲ್ಲಿ ಕಂಡಿದ್ದೆವು. ಈಗ ಆ ಕನಸನ್ನು ಹೊಕ್ಕು ವಾಸ್ತವತೆಯ ದಾರುಣತೆಯನ್ನು ಗ್ರಹಿಸುತ್ತಿದ್ದೇವೆ ಅನ್ನಿಸತೊಡಗುತ್ತದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಈ ಕೃತಿಯಲ್ಲಿ 'ದುಃಖ ದಾಖಲಿಸುವವನೆ ಇದನ್ನು ಬರೆದಿಟ್ಟುಕೊ', 'ಹೇಗೆ ನುಡಿಸುವುದು ಮತ್ತೇರದೆ ಕೊಳಲು', 'ಮಂಡಿಯೂರಿದ್ದಾಳೆ ಕಿಸಾಗೋತಮಿ ಜೀವಕ್ಕಲ್ಲ', 'ಬೆರಳ ತೋರಿಸಿ ಹೊರಟುಬಿಡು ಸಖಿ', 'ಸುಮ್ಮನೆ ಪ್ರಾಮಾಣಿಕವಾಗಿ', 'ಆಕಾಶವಿಲ್ಲದ ಊರಿಗೆ ನಕ್ಷತ್ರ ಕಳುಹಿಸಿ', 'ತೀನ್ ಕಂದೀಲಿನಿಂದ', 'ವಸಂತಾ', 'ಮೋಸ ಹೋಗಬೇಕಿದೆ ಕಳೆದ ರಾತ್ರಿಯ ಹಾಗೆ', 'ಯಾರಿದ್ದೀರಿ', 'ನಿನ್ನದೇ ಎಂದಾಗ', 'ಆರು ಹಾಯ್ಕು', 'ಜಾರಿ ಬಿದ್ದದ್ದು ಯಾವ ದಿಕ್ಕಿಗೆ ಹೇಳು ಖರೆ', 'ಓಡಿ ಹೋದವಳಲೊಂದು ವಿನಂತಿ', 'ಸಂಚಾರಿಯೊಬ್ಬನ ಸ್ವಗತ', 'ಏನೆಂದು ಉತ್ತರಿಸಬಲ್ಲಿರಿ ನೀವು', 'ಮಾಂಸದಂಗಡಿಯೆದುರು ನವಿಲು ದೂರು', 'ಇಬ್ಬದಿಯ ಮಾತು', 'ಗಂಧ ಗಾಳಿ ಸಂಧಿಸಿದಂತೆ', 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ', 'ಎದೆಭಾರ ಸರಿದವಳು ಅರ್ಥ ಪಿಸುಗುಡುವೆಯಲ್ಲ', 'ರಂಗವಲ್ಲಿಯ ಅಂಗಳಕೆ ಮಳೆಯಾದಂತೆ', 'ಇನ್ನು ಬರಹೇಳೆವೆಂದು ಮಾತುಕೊಡಿ', 'ಎರಡು ನಿರ್ಜೀವಗಳ ನೆನೆದು', 'ಒಂದು ಸಂದಾನರಹಿತ ಒಪ್ಪಂದ', 'ಮರ್ಕ್ಯುರಿ ಲೈಟಿನಡಿಗೆ', 'ದಯವಿಟ್ಟು ಅಮವಾಸ್ಯೆಯನೆ ಉಟ್ಟುಕೊ', 'ಅ-ಪ್ರಕಟಿತ ವದಂತಿ', 'ಹೋಗಿ ಬನ್ನಿ ಕನಸುಗಳಾದರು ದಕ್ಕಲಿ ನಿಮಗೆ', 'ಮದರಂಗಿ ಮುಂಜಾವಿಗೆ ನಿನ್ನ ಹೆಸರಿಟ್ಟು', 'ತಾರೆಗಳ ಆರಿಸಿದ ಜಿಪುಣ ದೇವರು', 'ನೂರೆಂಟು ನಕ್ಷತ್ರ ಒಬ್ಬಂಟಿ ಆಕಾಶ', 'ಕಟ್ಟಿಸಲಾರೆನು', 'ಗತವೆಲ್ಲ ಶವದ ಮಲ್ಲಿಗೆಯಂತಿದ್ದರೆ', 'ಗುಟ್ಟಿನಿಂದ ಗುಲ್ ಮೊಹರ್ ಗೆ', 'ಕಾದು ಕುಂತೀವಿ ಹೆಳವಯ್ಯ ಬಾರೋ', 'ದೈವ ಪೂಜೆಗೆ ಕಾಗದ ಹೂ ನಡೆಯದಂತೆ', 'ಕಂಬದ ಮ್ಯಾಲ ದೀಪದ ಬುಡ್ಡಿ' ಎಂಬ ಕವಿತೆಗಳು ಸಂಕಲನಗೊಂಡಿವೆ.

About the Author

ರಮೇಶ್ ಅರೋಲಿ
(10 July 1982)

ಕವಿ ರಮೇಶ ಅರೋಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ (2010), ಜುಲುಮೆ (2014), ಒಳ ಮೀಸಲಾತಿ-ಮುಟ್ಟಲಾರದವನ ತಳಮಳ (ಸಹಸಂಪಾದನೆ) (2014), ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾ ಚಳವಳಿಗಾರ ಬೋಳಬಂಡೆಪ್ಪನ ಬದುಕು-ಬರಹ), ತೀನ್‌ ಕಂದೀಲ್‌ (ನಾಟಕ) "ಬಿಡು ಸಾಕು ಈ ಕೇಡುಗಾಲಕ್ಕಿಷ್ಟು" (2021) (ಕವನ ಸಂಕಲನ) ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ. ಜಿ.ಎಸ್‌. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಬಿಡಿಗವಿತೆಗಳಿವೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ಧೆಯಲ್ಲಿ ...

READ MORE

Related Books