ಸಂಬಾರಬಟ್ಟಲ ಕೊಡಿಸು

Author : ರೇಣುಕಾ ರಮಾನಂದ

₹ 110.00
Year of Publication: 2022
Phone: 9538650944

Synopsys

ಕವಿ ರೇಣುಕಾ ರಮಾನಂದ ಅವರ ಕವನ ಸಂಕಲನ ಸಂಬಾರಬಟ್ಟಲ ಕೊಡಿಸು. ಕೆ.ಫಣಿರಾಜ್ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು, ಕರಾವಳಿಯ ನಿತ್ಯದ ಸಾಧಾರಣ ಬದುಕಿನ ಇರುವಿಕೆ ಛಲದಲ್ಲಿ, ಸಾಮಾನ್ಯ ಜನರ ಬದುಕು ಬಯಸುವ ಸ್ವಾತಂತ್ರ್ಯದ ಹಲವು ಬಣ್ಣಗಳು ತಮಗೆ ತಾವೇ ಪ್ರಕಟವಾಗುತ್ತಾ ಹೋಗುತ್ತವೆ. ಕರಾವಳಿಯ ಪ್ರಕೃತಿಯ ಪ್ರತಿ ಧಾತುಗಳೂ ಮನುಷ್ಯ ಜೀವಗಳ ತವಕ ತಲ್ಲಣಗಳಿಗೆ ಪ್ರತಿಮೆಯಾಗುವ ಪ್ರಜ್ಞೆಯು ರೇಣುಕ ಅವರ ಪದ್ಯಗಳ ಜೀವ. ಯಥೇಚ್ಛ ಪೌಷ್ಟಿಕ ಮೀನು ಹಿಡಿದು ಮಾರುಕಟ್ಟೆಗೆ ಸುರಿವ ಶ್ರಮಿಕರ ಹೊಟ್ಟೆಗೆ ತಾವು ಹಿಡಿದ ಮೀನುಗಳು ಮರೀಚಿಕೆ; ಹಣ್ಣು ಮಾರುವವರಿಗೆ ಹಣ್ಣು ಮರೀಚಿಕೆ; ಅಡುಗೆ ಮಾಡಿ ಊರಿಗೆ ಬಡಿಸುವವರಿಗೆ ಸಂಬಾರ ಇಟ್ಟುಕೊಳ್ಳಲು ಬಟ್ಟಲು ಮರೀಚಿಕೆ; ನಿರ್ವ್ಯಾಜ ಪ್ರೀತಿಗೆ ತೆರೆದು ಕೊಂಡಿರುವ ದೇಹ, ಮನಸ್ಸುಗಳಿಗೆ ಪ್ರೀತಿಯೇ ಮರೀಚಿಕೆ. ನಿಸರ್ಗಕ್ಕೆ ತಮಗೆ ತಾವೇ ಕೊಟ್ಟುಕೊಂಡು ಬದುಕಲೆಳಸುವ ಜೀವಗಳನ್ನು ಬಂಧಿಸುವ ಅದೃಶ್ಯ ಸಂಕೋಲೆಗಳನ್ನು ರೇಣುಕ ತಮ್ಮ ಪದ್ಯಗಳಲ್ಲಿ ನಿರುದ್ವಿಗ್ನವಾಗಿ ನಿರೂಪಿಸುವ ಬಗೆಗಾಗಿಯೇ- ಅವು ಮತ್ತೆ ಮತ್ತೆ ಓದುವ ಹಂಬಲ ಹುಟ್ಟಿಸುವ ರಚನೆಗಳು ಎಂಬುದಾಗಿ ಹೇಳಿದ್ದಾರೆ.

About the Author

ರೇಣುಕಾ ರಮಾನಂದ

ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು. ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ...

READ MORE

Related Books