‘ಕಂಡಕ್ಟರ್ ಕವಿತೆಗಳು’ ಸದಾಶಿವ ಸೊರಟೂರ್ ಅವರ ಕವಿತೆಗಳ ಸಂಕಲನ. ಬಹುರೂಪಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಗೆ ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಒಂದು ಬಸ್ ಟಿಕೆಟ್‌ನ ಹಿಂದೆ.. ನಿನ್ನ ಆತ್ಮಚರಿತ್ರೆಯೇನು ಬಿಡು ಒಂದು ರೆವಿನ್ಯೂ ಸ್ಟ್ಯಾಂಪ್‌ನ ಹಿಂದೆ ಬರೆದು ಮುಗಿಸಬಹುದು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತೆ ಅಮೃತಾ ಪ್ರೀತಂರನ್ನು ಗೇಲಿ ಮಾಡಿದ್ದರು. ಆಕೆಯೋ Revenue Stamp ಎಂದು ಹೆಸರಿಟ್ಟೆ ತಮ್ಮ ಆತ್ಮ ಚರಿತ್ರೆ ಹೊರತಂದಿದ್ದರು. ಅಂತೆಯೇ ಕಂಡಕ್ಟರ್‌ಗಳ ಬದುಕೇನು ಬಿಡು ಒಂದು ಬಸ್ ಟಿಕೆಟ್ ಹಿಂದೆ ಬರೆದು ಮುಗಿಸಬಹುದು ಎಂದು ನೀವು ಅಂದುಕೊಂಡಿದ್ದರೆ ಅದು ಖಂಡಿತಾ ತಪ್ಪು ಎನ್ನುವುದನ್ನು ಯುವ ಬರಹಗಾರ ಸದಾಶಿವ ಸೊರಟೂರು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಬಸ್‌ನಲ್ಲಿ ದಿನನಿತ್ಯ ಪಯಣಿಸುವ ಸೊರಟೂರು ಕಂಡಕ್ಟರ್‌ಗಳ ಅಂತರಂಗದೊಳಗೆ ಹೊಕ್ಕು ಈ ಸಾಲುಗಳನ್ನು ಹೆಕ್ಕಿ ತಂದಿದ್ದಾರೆ. ಇವು ಕಂಡಕ್ಟರ್ 'ಜೆನ್' ಎಂದಿದ್ದಾರೆ ಜಿ. ಎನ್. ಮೋಹನ್
ಸದಾಶಿವ್ ಸೊರಟೂರು ಅವರು ಜನಿಸಿದ್ದು 1983 ಜೂನ್ 18ರಂದು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರಾದ ಸದಾಶಿವ ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನಸುಗಳಿವೆ ಕೊಳ್ಳುವವರಿಲ್ಲ, ಹೆಸರಿಲ್ಲದ ಬಯಲು, ಕನಸುಗಳಿವೆ ಕೊಳ್ಳುವವರಿಲ್ಲ, ಹೊಸ್ತಿಲಾಚೆ ಬೆತ್ತಲೆ, ತೂತು ಬಿದ್ದ ಚಂದಿರ ಮುಂತಾದವು. ...
READ MORE