ದಕ್ಲಕಥಾ ದೇವಿಕಾವ್ಯ

Author : ಕೆ.ಬಿ. ಸಿದ್ದಯ್ಯ

Pages 40

₹ 40.00




Year of Publication: 1999
Published by: ಚಲನ ಪ್ರಕಾಶನ
Address: ಸರ್ಕಾರಿ ಪ್ರಾಥಮಿಕ ಶಾಲೆ ಹಿಂಭಾಗ, ಉಪ್ಪಾರಹಳ್ಳಿ, ತುಮಕೂರು

Synopsys

ಸಮಕಾಲೀನ ವಿಷಯಗಳನ್ನು ವಸ್ತುವಿಷಯವಾಗಿಸಿಕೊಂಡು ಕವಿತೆ ರಚನೆಯಲ್ಲಿ ತೊಡಗಿಕೊಂಡಿದ್ದ ಬಕಾಲ ಕವಿ ಕೆ.ಬಿ.ಸಿದ್ಧಯ್ಯ ಅವರ ಕವನ ಸಂಕಲನ ’ದಕ್ಲಕಥಾ ದೇವಿಕಾವ್ಯ’.  ಒಂದೊಂದು ಕವಿತೆಯು ಹಸಿವು, ಬಡತನದ ಕುರಿತ ಆಳವಾಗಿ ವಿವರಿಸುವಂತಿದ್ದು, ಸಮಾಜವನ್ನು ಪ್ರಶ್ನಿಸುವಂತಿವೆ. ಇಡೀ ಸಮಾಜದ ಪ್ರತಿರೂಪದಂತೆ ಇಲ್ಲಿರುವ ಕವಿತೆಗಳು ಮೂಡಿಬಂದಿವೆ. ಈ ಕೃತಿಯ ಹಿನ್ನುಡಿ ಹೀಗಿದೆ.  ’ರಾತ್ರಿಯಲ್ಲಿ ಯಕ್ಕದ ಗಿಡದ ಬುಡದಲ್ಲೊ, ಬುಡದಲ್ಲಿ ಬಿದ್ದಿರುವ ಮುರುಕು ಬೋಕಿಯಲ್ಲೋ ಬೋಕಿಯೊಳಗೆ ಮೂರು ಬೆಂಕಿಕೆಂಡಗಳು ತಾಯಿಯೊಬ್ಬಳು ಆಗತಾನೆ ಹತ್ತು ಅಂಗಾತ ಮಲಗಿಸಿರುವ ತ್ರಿವಳಿ ಶಿಶುಗಳಂತ ಗಾಳಿಗೆ ಮೈಯೊಡ್ಡಿ ಕರಗಿ ಬೂದಿರೂಪ ತಾಳುತ್ತಿರುವ ಆ ಮೂರು ಶಿಶುಗಳ ಪ್ರಾಣಪಕ್ಷಿ ಹಾರಿಹೋಗುತ್ತ ದೆಂದು ತಿಳಿದು ಜೀವದಾನ ನೀಡುವಳೋ ಎಂಬಂತ ದಕ್ಷದೇವಿಯು ಅಲ್ಲಿಗೆ ಧಾವಿಸಿದರು. ಸೆರಗಿನ ತುದಿಯಲ್ಲಿ ಗಂಟಿಕ್ಕಿ ತಂದಿರುವ ಮೂರು ಹಿಡಿ ಬೆರಣಿಯ ಪುಡಿಯನ್ನು ಕೆಂಡ ಶಿಶುಗಳ ಬಾಯಿಗೆ ಉದುರಿಸಿದರು. ಆಗಲಾಗಲೆ ಆ ಮೂರು ಕೆಂಡ ನಾಲಿಗೆಗಳು ಚಟಚಟ ಸದ್ದು ಮಾಡಿ ಆ ಶಿಶುಗಳು ಉಸಿರಾಡತೊಡಗಿದವು. ಹಸಿ ಬೇವಿನ ಸೊಪ್ಪಿನ ಸಿಂಬೆ ಮಾಡಿ ಆ ಸಿಂಬೆಯ ಮೇಲೆ ಬೆಂಕಿಬೋಕಿ ಇರಿಸಿ ಏಕಮಾತ್ರ ಶಿಶುವನ್ನು ತಾಯಿ ಸಲಹುವಂತ ಸೆರಗು ಮರೆಮಾಡಿ ತನ್ನ ಕಣ್ಣ ಬೆಳಕು ತೋರಿದ ದಾರಿಯಲ್ಲಿ ಮೂಡುಗಡೆ ಮುಖನಾಗಿ ನಡೆದ ದಕ್ಕದೇವಿ’ 

ಕವನ ಸಂಕಲನದ ಕವಿತೆಯಲ್ಲಿ ಒಂದು:

 

'ಮುಟ್ಟಬಾರದ ಕೂಸು ಮುಟ್ಟಿದ ಬಳಿಕ

ನಿಮಗಿನ್ನು ತಾವಿಲ್ಲ ಜಗದಲ್ಲಿ ನಿಮ್ಮ

ತಾವಿಗೆ ತೊಲಗಿ ನೀವು

ಗುಡ್ಡ, ಗವಿ, ಮರ, ಕಲ್ಲು ಪೊಟರೆ,

ಇಲಿ, ಹೆಗ್ಗಣ, ಇರುವೆ, ಕಟರೆ, ಗೂಡಲ್ಲಿ

ಪಾಳುಮನೆ, ಮಂಟಪ, ಹಾಳುಬಾವಿಯಲ್ಲಿ

ಅವಿತು ಕೊಳ್ಳಿ, ನರನ ಕಣ್ಣಿಂದ ದೂರ ಎಚ್ಚರಿಕೆ

ಅವಿತುಕೊಳ್ಳಿ ನೀವು

ಪಾದವೂರಿದ ಭೂಭಾಗ ಗುಳಿಬೀಳುವುದು

ಹೊಕ್ಕಮನೆ ನರಕ, ಮುಟ್ಟಿದ್ದೆಲ್ಲ ಚಿನ್ನ

ನಿಲ್ಲಲು ನೆಲೆ ಇಲ್ಲ ಅತಂತ್ರವೇ ಗತಿ,

ತಿನ್ನಲು ಎಲ್ಲಿದೆ ಅನ್ನ ? ಅಮೇಧ್ಯವೇ ಗತಿ

ಕುಡಿಯಲು ನೀರೂ ಇಲ್ಲ ಪಾಷಾಣವೇ ಗತಿ

ನಡೆಯಲು ಪಥವಿಲ್ಲ ಆಕಾಶವೇ ಗತಿ

ಆಕಾಶದಿಂದಿತ್ತ ಏನು ಗತಿ ? ಎಲ್ಲಿ ಆ ಪಶುಪತಿ ?

ಜೋಳಿಗೆ ತುಂಬಿದ ಭಿಕ್ಷದ ಕಾಳು

About the Author

ಕೆ.ಬಿ. ಸಿದ್ದಯ್ಯ
(04 March 1954 - 18 October 2019)

ಮಾಗಡಿ ತಾಲ್ಲೂಕು ಕೆಂಕೆರೆಯ ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ ಅವರು ಇಂಗ್ಲೀಷ್ ಉಪನ್ಯಾಸಕರು, ಪ್ರಾಧ್ಯಾಪಕರು. ಕವಿ ಸಿದ್ಧಯ್ಯ ಅವರು ಬಕಾಲ, ದಕ್ಷಕಥಾದೇವಿ ಕಾವ್ಯ, ಅನಾತ್ಮ(ಕಾವ್ಯ)  ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ) ದಲಿತಕಾವ್ಯ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (2004) ಸಂದಿದೆ. ...

READ MORE

Excerpt / E-Books

ಕೆ.ಬಿ. ಸಿದ್ದಯ್ಯ ಅವರ ಕಾವ್ಯದ ಬಗ್ಗೆ ಜಿ.ಎಸ್. ಶಿವರುದ್ರಪ್ಪನವರು ಸಂದರ್ಶನವೊಂದರಲ್ಲಿ

ಇತ್ತೀಚಿನ ದಲಿತ ಕಾವ್ಯದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಯಬೇಕಿದೆ.

ಕೆ.ಬಿ. ಸಿದ್ದಯ್ಯನವರ ‘ದಕ್ಲದೇವಿ ಕಥಾಕಾವ್ಯ’ ನೋಡ್ತಾ ಇದ್ದರೆ, ಮಂಟೇಸ್ವಾಮಿ ಕಾವ್ಯಕ್ಕೂ ಅದಕ್ಕೂ ವ್ಯತ್ಯಾಸಾನೇ ಕಾಣೋದಿಲ್ಲ. ಸಿದ್ದಯ್ಯ ಇದೇ ಜನಪದೀಯ ಪರಂಪರೆಯ ಭಾಷೆ ಕಾವ್ಯಗಳ ಹಿನ್ನೆಲೆಯಲ್ಲಿ ಬೆಳೆದವನು. ಅದನ್ನ ಹ್ಯಾಗೆ ಬಳಸಿಕೊಂಡಿದಾನೆ, ನಮಗೆ ಆಶ್ಚರ್ಯಕರವಾಗಿದೆ. ಮಂಟೇಸ್ವಾಮಿ ಕಾವ್ಯದ ಸ್ಟ್ರಕ್ಚರ್ ನಲ್ಲಿ ಕಥೆ ಬರೀತಾ ಸಮಕಾಲೀನತೆಯನ್ನು ವ್ಯಾಖ್ಯಾನಿಸುವ ಅಲ್ಲಿನ ಕ್ರಮ ವಿಶಿಷ್ಟವಾಗಿದೆ. ದಲಿತ ಕಾವ್ಯವನ್ನು ನಮ್ಮ ಡಿ.ಆರ್. ನಾಗರಾಜ ಎರಡು ಭಾಗ ಮಾಡ್ತಾರೆ. ಒಂದು ಸಾಮಾಜಿಕ ಆಕ್ರೋಶದ ನೆಲೆಯ ಕಾವ್ಯ-ಪೊಯಟ್ರಿ ಆಫ್ ಸೋಶಿಯಲ್ ರೇಜ್; ಇನ್ನೊಂದು ಅನುಭಾವದ ಕಾವ್ಯ-ಪೊಯೆಟ್ರಿ ಆಫ್ ಸ್ಪಿರಿಚ್ಯುಯಲ್ ಕ್ವೆಸ್ಟ್. ಸಾಮಾಜಿಕ ಆಕ್ರೋಶದ ನೆಲೆಯ ಕಾವ್ಯಕ್ಕೆ ಅಂಬೇಡ್ಕರ್ ಮೂಲ ಪ್ರೇರಣೆ-ಸಿದ್ಧಲಿಂಗಯ್ಯನ ಕಾವ್ಯ. ಈ ಅನುಭಾವ ನೆಲೆಯ ಕಾವ್ಯ ಇದೆಯಲ್ಲ, ಅನುಭಾವದ ಮೂಲಕ ದುಃಖವನ್ನು ಸಂಕಟವನ್ನು ದಾಟಿಕೊಂಡು ಹೋಗುವಂತಹ ಪ್ರಯತ್ನ ಇದೆಯಲ್ಲ, ಇದಕ್ಕೆ ದೇವನೂರು ಮತ್ತು ಸಿದ್ದಯ್ಯ ಉತ್ತಮ ನಿದರ್ಶನ.

ದಲಿತ ಕಾವ್ಯಕ್ಕೆ ಆಧಾರವಾಗಿರುವ ದಲಿತ ಸಂಸ್ಕøತಿ ಕೂಡ ಇಲ್ಲಿ ಪ್ರಕಟವಾಗುತ್ತಿದೆ.

ಹೌದು. ದಕ್ಕಲರು ಎಂಥಾ ಜನಾಂಗ ಅಂತಂದ್ರೆ, ಅಸ್ಪøಶ್ಯರಲ್ಲಿ ಅಸ್ಪøಶ್ಯರು; ಅಸ್ಪøಶ್ಯರ ಮೇಲೇ ಡಿಪೆಂಡಾಗಿರೋರು. ಸ್ವಂತ ಅಡಿಗೆ ಮಾಡೋ ಹಂಗಿಲ್ಲ. ರಾತ್ರಿ ಹೊತ್ತು ಬರೋದು. ಒಂದು ಮರದ ಬುಡದಲ್ಲಿ ಕೂತು, ಕೇರಿಯ ಜನ ಹಾಕುವ ಆಹಾರವನ್ನು ಎತ್ಕೊಂಡು ತಿನ್ತಾರೆ. ಭೂಮಿ ಸೃಷ್ಟಿಯಾಗೋಕ್ಕಿಂತ ಆರು ತಿಂಗಳ ಮೊದಲು ಹುಟ್ಕೊಂಡನಂತೆ ಇವರ ಮೂಲ ಪುರುಷ. ಇದು ನೋಡ್ರಿ, ಎಷ್ಟು ಇಂಟ್ರೆಸ್ಟಿಂಗ್! ಈ ಪುರಾಣ ಅನ್ನೋದು ಕೂಡಾ ವ್ಯಕ್ತಿತ್ವ ಹಾಗೂ ಪ್ರತ್ಯೇಕ ಅಸ್ತಿತ್ವದ ಮಹತ್ತನ್ನು ಗುರುತಿಸೋ ಒಂದು ವಿಧಾನ. ಮೇಲ್ವರ್ಗದವರಿಗೆ ಪ್ರತಿಷ್ಠೆ. ಕೆಳವರ್ಗದವರಿಗೆ ಐಡೆಂಟಿಟಿ. `ಈ ಶ್ರೇಣೀಕೃತ ಸಮಾಜದಲ್ಲಿ ನಾವೂ ಮನುಷ್ಯರು. ನಮಗೊಂದು ಐಡೆಂಟಿಟಿ ಇದೆ. ಅದನ್ನ ಕಾಯ್ಕೋಬೇಕು' ಅನ್ನೋದಿದೆಯಲ್ಲ, ಅದು ದೊಡ್ಡ ವಿಚಾರ. ಸಿದ್ದಯ್ಯನವರ ‘ದಕ್ಲದೇವಿ ಕಥೆ’ಯೊಳಗೆ ಒಂದು ಇಂಟ್ರೆಸ್ಟಿಂಗ್ ಪ್ರಸಂಗ ಬರ್ತದೆ. ಚೆಲುವ ಅನ್ನೋನೊಬ್ಬ ತಪಸ್ ಮಾಡ್ತಾನೆ. ಜಲದೇವಿ ಪ್ರತ್ಯಕ್ಷಳಾಗಿ ನಿನಗೇನು ವರಾ ಬೇಕು ಅಂತ ಕೇಳ್ತಾಳೆ. ಅವನ್ಹೇಳ್ತಾನೆ: `ಕೆರೆ ಏರಿಗೆ ಏರಿಯಲ್ಲಾ ಮಾಂಸಖಂಡವಾಗಲಿ, ನೀರೆಲ್ಲ ಹೆಂಡವಾಗಿ ಬಿಡ್ಲಿ ತಾಯೀ'. ನನಗೆ ಶಾಕ್! ದಲಿತರ ಬದುಕಿನಲ್ಲಿ ಬಹಳ ಮುಖ್ಯವಾದದ್ದು ಹಸಿವು ಮತ್ತು ಅವಮಾನ. ಹಸಿವಿಗೆ ಮಾಂಸಖಂಡ; ಹೆಂಡ ಅವಮಾನ ಮರೆಯೋದಕ್ಕೆ. ಈ ಇಮೇಜ್ ಅಭಿವ್ಯಕ್ತಿ ಮಾಡುವ ಕ್ರಮ ಬಹಳ ವಿಶಿಷ್ಟವಾಗಿದೆ.

ಸಂದರ್ಶಕರು: ರಹಮತ್‌ ತರೀಕೆರೆ

Related Books