ನೀನೊಲಿದರೆ

Author : ವಿಜಯಕುಮಾರ ಜಿ. ಪರುತೆ

Pages 110

₹ 120.00
Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಅಂಚೆ: ಡೊಂಗರಗಾಂವ್, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ

Synopsys

ಲೇಖಕ ಡಾ. ವಿಜಯಕುಮಾರ ಪರುತೆ ಅವರ ದ್ವಿಪದಿಗಳ ಸಂಕಲನ-ನೀನೊಲಿದರೆ.  1065 ದ್ವಿಪದಿಗಳ ಸಂಗ್ರಹವಿದು. ಭಾರತೀಯ ಸಾಹಿತ್ಯದಲ್ಲಿ ಲೋಕೋಕ್ತಿಗಳು, ನೈತಿಕ ವಿಚಾರಗಳು,ನುಡಿಮುತ್ತುಗಳು, ಉಪನಿಷತ್ತು,ಶಿವಾಗಮಗಳ ಕಾಲದಿಂದಲೂ ಪ್ರಸಿದ್ಧವಾಗಿವೆ. ವಿಶೇಷವಾಗಿ ತ್ರಿಪದಿಗಳಲ್ಲಿ, ಅನುಭಾವ ಸಾಹಿತ್ಯದಲ್ಲಿ,ವಿಶೇಷವಾಗಿ ಹೊಸಗನ್ನಡದ ಮುಕ್ತಕಗಳು,ಹನಿಗವನಗಳು, ಗಜಲ್ ಗಳಲ್ಲಿ ಸಂಭಾಷಣಾ ಮಾದರಿಯ ಪ್ರಾಸ ಸಹಿತ, ತಾಳ ಲಯಾನ್ವಿತ ನುಡಿಗಡಣಗಳು, ಲೋಕೋಕ್ತಿಗಳು, ಸೂತ್ರಉಕ್ತಿಗಳು ಬಂದಿರುವುದು ವಿಶೇಷ. ದ್ವಿಪದಿ,ತ್ರಿಪದಿ ಮತ್ತು ಚೌಪದಿಗಳಲ್ಲಿ ಸಾಹಿತ್ಯಾಸಕ್ತರ ಲೋಕಾನುಭವಗಳು, ಸಶಕ್ತವಾಗಿ ಅಭಿವ್ಯಕ್ತವಾಗುತ್ತಿದೆ. ಡಾ.ಪರುತೆಯವರು  ಈಗಾಗಲೇ ಆಧುನಿಕ ವಚನ ರಚನೆ ಮತ್ತು ಲೋಕೋಕ್ತಿ ಮಾದರಿಯ ಹನಿಗವನ, ನುಡಿಗಡಣಗಳನ್ನು ಬರೆಯುವತ್ತ ಆಕರ್ಷಕರಾಗಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಶೀರ್ಷಿಕೆಗಳೇ ತಿಳಿಸುವಂತೆ ಕನಸು-ನನಸು, ಪ್ರೀತಿ-ಪ್ರೇಮ,ನೀತಿ-ಪ್ರೀತಿ,ಪ್ರಕೃತಿ- ಪರಿಸ್ಥಿತಿ,ನೋವು-ನಲಿವು,ಕಷ್ಟ-ನಷ್ಟ, ನಡೆ-ನುಡಿ, ಅರಿವು- ಆಚಾರ,ಸತ್ಯ- ಸುಳ್ಳು,ಜೋಡಿಪದಗಳೇ ಅವುಗಳಲ್ಲಿರುವ ಹುದುಗಿರುವ ವಿಷಯ ವಸ್ತುವನ್ನು ಸಾಬೀತು ಪಡಿಸುತ್ತವೆ.ಜೊತೆಗೆ. ಕವಿಗಳ ವೈಯಕ್ತಿಕ ಜೀವನ,ಅವರು ಅನುಭವಿಸಿದ ಕಷ್ಟ- ನಷ್ಟ,ನೋವು- ಯಾತನೆ,ಸಾಮಾಜಿಕ ಮತ್ತು ಮಾನವೀಯ ಸಂಬಂಧಗಳು ಸ್ನೇಹ ಸೇವಾಮನೋಭಾವದ ಸದ್ವಿಚಾರಗಳು ಇಲ್ಲಿ ಸಮರ್ಥವಾಗಿ ಪಡಿಮೂಡಿವೆ. ಈ ನುಡಿಗಡ ಣಗಳಲ್ಲಿಯೂ ಸಹಜವಾಗಿ ತಮ್ಮ ಸುಪ್ತಾವಸ್ಥೆಯಲ್ಲಿ, ಮನದಾಳದ ವಿಚಾರಗಳನ್ನು ಓದುಗರ ಮುಂದೆ ದಾಖಲಿಸಿರುವುದು ಸಹಜವಾಗಿದೆ. ವ್ಯವಸ್ಥಿತ ಶಬ್ದ ಸಂಯೋಜನೆಗಳಿಂದ ಆಕರ್ಷಕ ಕಾವ್ಯಾಭಿವ್ಯಕ್ತಿಗೆ ನಿದರ್ಶನವಾಗಿವೆ. 

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books