ಧರೆ ಮೇಲೆ ಉರಿಪಾದ

Author : ಕೃಷ್ಣಮೂರ್ತಿ ಬಿಳಿಗೆರೆ

Pages 85

₹ 40.00
Year of Publication: 2005
Published by: ನಮ್ಮ ಪ್ರಕಾಶನ
Address: ಬಿಳಿಗೆರೆ, ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ

Synopsys

‘ಧರೆ ಮೇಲೆ ಉರಿಪಾದ’ ಕೃತಿಯು ಕೃಷ್ಣಮೂರ್ತಿ ಬಿಳಿಗೆರೆ ಅವರ ಕವನಗಳ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಭರವಸೆ ಮತ್ತು ಕನಸುಗಳು ಕವಿತೆಯ ಹುಟ್ಟಿನ ಮೂಲವಿರಬೇಕು. ಅಂಥ ಭರವಸೆಯ ಚಿತ್ರಗಳನ್ನು ಕಲ್ಪಿಸಿಕೊಂಡು ಅಕ್ಷರಗಳನ್ನು ಮೂಡಿಸುವ ಧೈರ್ಯ ಕುಂದುತ್ತಿದೆ. ಅಲ್ಲದೆ, ಮನಸ್ಸುಗಳ ವ್ಯಾಪಾರಕ್ಕೆ ಇಷ್ಟೊಂದು ಹಿನ್ನೆಡೆ ಯಾವಾಗಲೂ ಆದ ದಾಖಲೆ ಇಲ್ಲ. ಈಗ ನೋಡಿದರೆ ಈ ಮನಸ್ಸಿನ ವ್ಯಾಪಾರ ತೀರಾ ಕುಸಿದು  ಹೋಗಿದೆ. ಕಾವ್ಯ ಕಥನ, ಚರಿತ್ರೆ, ಸಮಾಜ, ವಿಜ್ಞಾನಗಳು ಹೀಗೆಂದೂ ಗೇಲಿ ತಿರಸ್ಕಾರಗಳಿಗೆ ಒಳಗಾಗಿರಲಿಲ್ಲ. ಓದು ಬರಹ ಎಂದರೆ ಅದೀಗ ಮುಕ್ತ ವ್ಯಾಪಾರದ ಏಜೆನ್ಸಿಯ ಓದು ಬರಹ ಎಂದಷ್ಟೇ ಆಗಿದೆ. ಈ ಶತಮಾನದ ಆರಂಭ ಕಾಲದವರೆಗೂ ಈ ಬರಹ ಎಂಬುದು ಬದಲಾವಣೆಯ ಬೀಜಮಂತ್ರವಾಗಿತ್ತು’ ಎಂದಿದೆ.

About the Author

ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಚರಿತ್ರೆಯ ಅನುಶೋಧನೆಯಲ್ಲಿ ತೊಡಗಿದ್ದಾರೆ. ಸಾವಯವ ಕೃಷಿ ಮತ್ತು ಮಳೆನೀರಿನ ಚಳುವಳಿಯಲ್ಲಿ ಸಕ್ರಿಯವಾಗಿರುವ ಬಿಳಿಗೆರೆಗೆ ತತ್ವಪದ ಮತ್ತು ಕೃಷಿಗಳನ್ನು ಹಾಡುವ ರೂಢಿಯಿದೆ. ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವು ಇವರ ಕಾವ್ಯ ಕೃತಿಗಳು. ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ...

READ MORE

Related Books