ಚುಕ್ಕಿ

Author : ಜ್ಯೋತಿ ಗುರುಪ್ರಸಾದ್

Pages 67

₹ 50.00




Year of Publication: 2003
Published by: ಋಜುವಾತು ಪ್ರಕಾಶನ
Address: 498, 6ನೇ ’ಎ’ ಮುಖ್ಯರಸ್ತೆ, ಆರ್‌ಎಂವಿ ಎರಡನೇ ಹಂತ, ಬೆಂಗಳೂರು 94

Synopsys

ಕವಯತ್ರಿ ಜ್ಯೋತಿ ಗುರುಪ್ರಸಾದ್ ಅವರ ಮೊದಲ ಕವಿತಾ ಸಂಕಲನ ’ಚುಕ್ಕಿ’ ಕಡೆಂಗೋಡ್ಲು ಶಂಕರಭಟ್ಟ ಸ್ಮಾರಕ ಕಾವ್ಯ ಪ್ರಶಸ್ತಿ’ ಪಡೆದಿದೆ. ತಮ್ಮ ಮೊದಲ ಕೃತಿಯಿಂದಲೇ ಗುರುತರ ಹೆಜ್ಜೆಗಳನ್ನಿಟ್ಟು ಸೃಜನಶೀಲ ಹಾದಿಯಲ್ಲಿ ಬಹುದೂರ ಸಾಗಿಬಂದಿದ್ದಾರೆ ಜ್ಯೋತಿ. ಅವರ ಹಲವು ಕೃತಿಗಳನ್ನು ಓದಿದ ಬಳಿಕವೂ ’ಚುಕ್ಕಿ’ಯ ಚಂದ ನೆನಪಾಗುತ್ತಲೇ ಇರುತ್ತದೆ. 

ಸಾಹಿತಿ ಯು. ಆರ್‌. ಅನಂತಮೂರ್ತಿ ಅವರು , ’ತೋರುಗಾಣಿಕೆಯಿಲ್ಲದ ಜ್ಯೋತಿಯ ಅಪ್ಪಟ ಮಾತಿಗೆ ಕಿರಿದಾದ್ದರಲ್ಲಿ ಹಿರಿದಾದ್ದನ್ನು ಹಿಡಿಯುವ ಹಂಬಲವಿದೆ. ಈ ಹಂಬಲದಿಂದಾಗಿ ಜ್ಯೋತಿಯ ಕವನಗಳು ನಮಗೆ ಪ್ರಿಯವಾಗುತ್ತವೆ. ಉತ್ಕಟ ಸಂವೇದನೆಯ ಕವಿಯಾಗಿ ಜ್ಯೋತಿ ಬೆಳೆಯಬಹುದಾದ ಸಾಧ್ಯತೆಗಳು ಈ ಮೊದಲ ಸಂಕಲನದಲ್ಲಿಯೇ ಇವೆ’ ಎಂದು ಪ್ರೋತ್ಸಾಹಿಸಿದ್ದಾರೆ. 

ಇನ್ನು ಪ್ರಸಿದ್ಧ ಕವಿ. ಕತೆಗಾರ ಜಯಂತ ಕಾಯ್ಕಿಣಿ ಅವರು ’ನಿತ್ಯದ ಒಲವಿನಲ್ಲಿ ಹುಟ್ಟುವ ನಿರ್ಭಯದ ಅಲೆಗಳನ್ನು ಹೊಮ್ಮಿಸುವ ಜ್ಯೋತಿ ಗುರುಪ್ರಸಾದ್ ಅವರ ಈ ಚೊಚ್ಚಲು ಸಂಕಲನದ ಕವಿತೆಗಳು ಅಪ್ಪಟವಾಗಿವೆ. ಮುಕ್ತ ಕೌಟುಂಬಿಕತೆಯ ಮನದ ಕನ್ನಡಿಯಲ್ಲಿ ಪ್ರತಿಫಲಿಸುವ ಕಿರುಗನ್ನಡಿಗಳಂತಿವೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

About the Author

ಜ್ಯೋತಿ ಗುರುಪ್ರಸಾದ್
(16 July 1965)

ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್‌ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್‌ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...

READ MORE

Awards & Recognitions

Related Books