ತಮಂಧದಾಚೆ

Author : ಸಿದ್ಧಲಿಂಗಪ್ಪ ಬೀಳಗಿ

Pages 62

₹ 100.00




Year of Publication: 2022
Published by: ಅಶ್ವಿನಿ ಪ್ರಕಾಶನ
Address: ಮಹಂತ್ ನಗರ, ಹುನಗುಂದ- 587 118, ಬಾಗಲಕೋಟೆ ಜಿಲ್ಲೆ,
Phone: 9448541556

Synopsys

‘ತಮಂಧದಾಚೆ’ ಕೃತಿಯು ಸಿದ್ಧಲಿಂಗಪ್ಪ ಬೀಳಗಿ ಅವರ ಹಾಯ್ಕುಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಬದುಕನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ನಮ್ಮ ಮೂಲವನ್ನು ಅರಿಯುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ನಮ್ಮ ಮೂಲ ಇರುವುದೇ ಕುಟುಂಬದಲ್ಲಿ. ಈ ‘ಕುಟುಂಬ’ದ ಪರಿಕಲ್ಪನೇ ಮನುಷ್ಯ ಕಂಡುಕೊಂಡ ಅತ್ಯುತ್ತಮ ನೆಮ್ಮದಿಯ ಸೆಲೆಯಾಗಿದೆ. ಅಪ್ಪ-ಅಮ್ಮ-ಮಕ್ಕಳು ಎಂಬ ತ್ರಿವೇಣಿ ಸಂಗಮವು ನಾಕದ ಕೀಲಿಕೈ ಆಗಿದೆ. ನೆಮ್ಮದಿಯ ಬದುಕು ಎಲ್ಲರಿಗೂ ಬೇಕು ಆದರೆ ಅದು ಹೇಗೆ ಸಾಧ್ಯೆನ್ನುವುದೇ ನಮ್ಮ ಮುಂದಿರುವ ಯಕ್ಷ ಪ್ರಶ್ನೆ. ಇಲ್ಲಿಯ ಕೆಲವು ಹೈಕುಗಳು ಕುಟುಂಬದ ಪಿಲ್ಲರ್ ಬಗ್ಗೆ ಮಾತನಾಡುತ್ತವೆ. ಹೆತ್ತವರ ಅಮೃತ ಸಿಂಚನ, ಶ್ರಮಜೀವಿಯಾದ ಅಪ್ಪನ ಹೃದಯದಲ್ಲಿ ಅರಳಿದ ಮಕ್ಕಳ ಪ್ರೀತಿ, ನೋವಿನ ಹೆಜ್ಜೆಗಳಲ್ಲಿ ಮೂಡಿದ ಜೀವನ ಶ್ರದ್ಧೆಯ ಗುರುತುಗಳು, ಅಮ್ಮನ ಮಡಿಲಿನಲ್ಲಿ ಚಿಗುರೊಡೆವ ಮಂದಹಾಸ.. ಮುಂತಾದ ವಿಷಯಗಳನ್ನು ಬೀಳಗಿಯವರು ಒಪ್ಪವಾಗಿ ಓದುಗರ ಮನಸ್ಸಿಗೆ ಮುದ ನೀಡುವಂತೆ ಜೋಡಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಹೆಣ್ಣು-ಗಂಡಿಗೆ ಯಾವ ಭೇದವೂ ಇಲ್ಲ. ಆದರೆ ಮನುಷ್ಯನ ಅತಿಯಾದ ಬುದ್ಧಿವಂತಿಕೆ, ಮಡಿವಂತಿಕೆಯಿಂದ ಹೆಣ್ಣಿಗೆ ಅಬಲೆ ಎನ್ನುವ ಪಟ್ಟ ಲಭಿಸಿದೆ! ನಾವು ಇಪ್ಪತ್ತೊಂದನೆಯ ಶತಮಾನದಲ್ಲಿದ್ದರೂ, ವೈಜ್ಞಾನಿಕವಾಗಿ ಊರ್ಧ್ವಮುಖಿಯಾಗಿದ್ದರೂ, ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ ನಮ್ಮ ಮೈ-ಮನಗಳಲ್ಲಿ ಮಾತ್ರ ಹೆಣ್ಣು ಕೋಮಲೆ, ನಾಜೂಕು, ಅಬಲೆ ಎನ್ನುವ ಸಹಾನುಭೂತಿಯ ಬೇಲಿ ಮಾತ್ರ ಇನ್ನೂ ಜೀವಂತವಾಗಿದೆ. ಅಂತೆಯೇ ಇಲ್ಲಿ ಹೈಕು ಮಾಸ್ಟರ್ಸ್ ಹೆನ್ನು ಸಬಲೆ ಎಂಬುದು ತಿಳಿಯಲು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿರುವ ಈ ತಾರತಮ್ಯದ ಸರಪಳಿ ಕಳಚಲಿ ಎಂಬ ಆಶಯ ಇಲ್ಲಿದೆ.

About the Author

ಸಿದ್ಧಲಿಂಗಪ್ಪ ಬೀಳಗಿ

ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಯಡಹಳ್ಳಿ ಗ್ರಾಮದವರು. ಹುನಗುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರು. ಎಂ.ಎ. ಎಂ. ಈಡಿ ಪದವೀಧರರು.  ಛಾಯಾಗ್ರಹಣ ಇವರ ಹವ್ಯಾಸ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಅಧಿಕ ಚಿತ್ರಲೇಖನಗಳು ಪ್ರಕಟವಾಗಿವೆ. ಧಾರವಾಡ ಆಕಾಶವಾಣಿಯಿಂದ ಚಿಂತನಗಳು, ಭಾಷಣಗಳು, ಕಥೆ, ಸಂವಾದ, ಕವಿತೆಗಳು ಪ್ರಸಾರಗೊಂಡಿವೆ. ದೂರದರ್ಶನ ಚಂದನವಾಹಿನಿಯ 'ಬೆಳಗು' ನೇರಪ್ರಸಾರ ಮತ್ತು 'ವಚನಾಮೃತ' ಕಾರ್ಯಕ್ರಮ ಪ್ರಸಾರಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿ ಮತ್ತು ಅಖಿಲ ...

READ MORE

Related Books