ನೀರುಮಾಡು

Author : ಕವಿತಾ ರೈ

Pages 94

₹ 90.00




Year of Publication: 2013
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟನ ಅಂಚೆ, ಬಳ್ಳಾರಿ, 583 113
Phone: 9480353507

Synopsys

ಇಲ್ಲಿನ ಕವಿತೆಗಳಲ್ಲಿ ನನ್ನನ್ನು ನೀರು ಮಾಡು ಎಂಬ ಕವಿಯ ಕೋರಿಕೆ ಇದೆ. ನೀರು ತಾನೇ "ಮಾಡು" ಆಗಿರುವ ಲೋಕವನ್ನು ಕಾಣುವ ಬೆರಗು ಇದೆ. ತನ್ನೊಳಗೂ ಹೊರಗೂ ಅಲ್ಲಮ ಹೇಳುವ "ನೀರಲಾದ ನಿರ್ಮಿಂತಂಗಳು" ಇರುವುದನ್ನು, ಬೆಳೆಯುವುದನ್ನು ಅಳಿಯುವುದನ್ನು ಕಂಡು ಅಕ್ಷರದಲ್ಲಿ ಲಿಖಿಸುವ, ರೇಖಿಸುವ ಆಸೆ ಇಲ್ಲಿನ ಕವಿತೆಗಳನ್ನು ರೂಪಿಸಿದಂತಿದೆ. ನೀರಿನ ಪಾತ್ರ, ನೀರೆಯ ಪಾತ್ರಗಳ ಸಂಗಮವನ್ನು ಕಾಣುವ, ಕಾಣಿಸುವ ಕವಿಯ ಆಕಾಂಕ್ಷೆಯ ಜೊತೆಗೆ ಕಾಣುವುದೆಲ್ಲವನ್ನೂ ನೀರೆಂಬ ವಸ್ತು-ರೂಪಕದ ಮೂಲಕವೇ ಒಳಗೊಳ್ಳುವ ಒಮ್ಮುಖಗೊಳಿಸುವ ತುಡಿತವೂ ಇದೆ. 

ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಕವಿತಾ ರೈ ಅವರ ಕವಿತೆಗಳು ಹೆಣ್ಣಿನ ಹೊಸ ಹೊಸ ದನಿಗಳನ್ನು ಪಲ್ಲವಿಸುತ್ತವೆ.

About the Author

ಕವಿತಾ ರೈ
(15 October 1974)

ಮಹಿಳಾ ಲೇಖಕಿ ಕವಿತಾ ರೈ ಅವರು ಮೂಲತಃ ಮಡಿಕೇರಿಯವರು. ತಾಯಿ ಬಿ.ಎಲ್.ರಾಧಾ, ತಂದೆ ಬಿ.ಎಸ್.ರಂಗನಾಥ ರೈ. ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಾಹಿತ್ಯದೆಡೆಗಿನ ಒಲವು ಬಾಲ್ಯದಿಂದಲೂ ಅಪಾರವಾಗಿತ್ತು.   ಕನ್ನಡ ಸಾಹಿತ್ಯದಲ್ಲಿ ಇವರ ಕೊಡುಗೆಗೆ ದಿ.ವಿ.ಎಮ್. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಒಲಿದುಬಂದಿದೆ. ಇವರು ಬರೆದಿರುವ ಕೃತಿಗಳೆಂದರೆ ಹಕ್ಕಿ ಹರಿವ ನೀರು, ನೀರ ತೇರು (ಕವನ ಸಂಕಲನ) , ಮಹಿಳೆ ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ (ವೈಚಾರಿಕ) ಮುಂತಾದವು. ...

READ MORE

Related Books