ಎದೆಗಂಟಿದ ವಿರಹ

Author : ಹುಸೇನಸಾಬ ವಣಗೇರಿ

Pages 72

₹ 70.00




Year of Publication: 2021
Published by: ಜಾಫರಸಾಬ ವಣಗೇರಿ ಪ್ರಕಾಶನ
Address: ಮುಧೋಳ-583284, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ.
Phone: 7829606194

Synopsys

’ಎದೆಗಂಟಿದ ವಿರಹ’ ಕೃತಿಯು ಹುಸೇನಸಾಬ ವಣಗೇರಿ ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ನಾಗಪ್ಪ ಸುರುಳಿಕೇರಿ ಅವರು, `ಈ ಕೃತಿಯ ಕವನಗಳಲ್ಲಿ ಅಪ್ಪ ಅಮ್ಮನೆ ಸರ್ವಸ್ವ ಎನ್ನುವ ತ್ಯಾಗದ ಗುಣಗಳಿವೆ, ಪ್ರೀತಿಯ ಗೆಳತಿಯಿದ್ದಾಳೆ, ಅವಳಿಂದ ಪ್ರೀತಿ ಸಿಕ್ಕಿದೆ, ಪ್ರೀತಿಯಿಂದ ನೋವು ನಲಿವಿನ ವಿರಹಗಳಿವೆ, ಮನಸ್ಸುಗಳ ಪರದಾಟವಿದೆ, ನಿಸ್ವಾರ್ಥದ ಸ್ನೇಹ ಗುಣಗಳಿವೆ, ಪ್ರಕೃತಿ ಆಕಾಶಗಳ ಸೌಂದರ್ಯವಿದೆ, ಬಾಲ್ಯದ ಹುಡುಗಾಟವಿದೆ, ಬದುಕಿನ ದಾರಿಯಿದೆ, ದೇವರು ಹಾಗೂ ಭಕ್ತಿಯಿದೆ, ಮೌನದ ಗುಟ್ಟು ಇದೆ, ನಗುವಿನ ಮೂಲಕ ಜೀವನ ಸಾಗಿಸಿರಿ ಎನ್ನುವ ಮಾತಿದೆ, ಜಗತ್ತು ಗೆದ್ದ ಗೌತಮ ಬುದ್ಧನಿದ್ದಾನೆ, ಮಕ್ಕಳ ಭವಿಷ್ಯಕ್ಕೆ ಅಮ್ಮನ ತ್ಯಾಗದ ಗುಣಗಳಿವೆ, ಶ್ರದ್ಧೆ, ಭಕ್ತಿ, ನಂಬಿಕೆ, ವಿಶ್ವಾಸ, ಐಕ್ಯತೆ, ಪಾಪ ಪುಣ್ಯಗಳ ಕುರಿತು ಹಬ್ಬದ ಕವನಗಳಲ್ಲಿದೆ. ಜ್ಞಾನದ ಬುತ್ತಿ ಹಾಗೂ ಮಾನವೀಯ ಮೌಲ್ಯಗಳ ಆಗರ ಪುಸ್ತಕವಿದೆ, ಪ್ರೇಮಿಗಳ ನಡುವಿರುವ ನಿಜವಾದ ಭಾವನೆಗಳಿವೆ, ಬಣ್ಣ ಕಪ್ಪಾದರೂ ಗುಣ ಶ್ರೇಷ್ಠ ಎನ್ನುವ ಮೌಲ್ಯದ ಮಾತು ಕಪ್ಪು ಗೆಳತಿ ಮುಖಾಂತರ ತಿಳಿಸಿದ್ದಾರೆ. ಜೀವನದಲ್ಲಿನ ಬಾಲ್ಯದ ನೆನಪನ್ನು ಅಂದವಾಗಿ ವರ್ಣಿಸಿದ್ದಾರೆ, ಭಾಸ್ಕರನ ವರ್ಣನೆಯಿದೆ, ಸ್ವರ್ಗದ ಬಾಗಿಲು ತೆರೆದು ಹತ್ತೂರು ಸುತ್ತಿದರು ಪ್ರೀತಿಕೊಟ್ಟ ನಮೂರು ನನಗೆ ಮೇಲು ಎನ್ನುವ ಮಾತಿದೆ, ಅಕ್ಷರ ಕಲಿಸಿ ಬದುಕುಕೊಟ್ಟ ಗುರು ಇದ್ದಾರೆ, ಶ್ರೀಗಂಧದ ನಾಡು ಕನ್ನಡನಾಡಿನ ವರ್ಣನೆ ಇದೆ, ಹೆಮ್ಮಾರಿ ಕೊರೊನಾ ಮಣಿಸಲು ದೇವರ ಮೊರೆ ಹೋಗುವ ಪ್ರಸಂಗಗಳಿವೆ ಹೀಗೆ ಹಲವು ವರ್ಣನೆಗಳಿಂದ ಕೂಡಿದ ಕವನಗಳನ್ನು ಬರೆದಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಹುಸೇನಸಾಬ ವಣಗೇರಿ
(01 May 1995)

ಲೇಖಕ ಹುಸೇನಸಾಬ ವಣಗೇರಿ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದವರು. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಮುಧೋಳದಲ್ಲಿ ನಂತರ ಪದವಿಪೂರ್ವ ಶಿಕ್ಷಣವನ್ನು ನರೇಗಲ್ಲನ ಕೆ.ಎಸ್.ಎಸ್ ಕಾಲೇಜಿನಲ್ಲಿ ಪೂರೈಸಿದರು. ಗದಗಿನ ಕನ್ನಡ ಕಿರಣ ಶಿಕ್ಷಣ ಸಮಿತಿ ಬಿ.ಎಸ್.ಡಬ್ಲೂ. ಮಹಾವಿದ್ಯಾಲಯ,ದಲ್ಲಿ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜ ಕಾರ್ಯ ವಿಭಾಗದಲ್ಲಿ ಪದವೀಧರರು. ಹುಬ್ಬಳ್ಳಿಯ ಸರ್ದಾರ್ ವೀರನಗೌಡ ಪಾಟೀಲ, ಮಹಿಳಾ ವಿದ್ಯಾಪೀಠದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಲ್ಲಿ ಒಂದು ವರ್ಷ ಉಪನ್ಯಾಸಕರಾಗಿದ್ದು, ಸದ್ಯ, ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದಲ್ಲಿ ಪಿ.ಹೆಚ್.ಡಿ ವಿದ್ಯಾರ್ಥಿ. ...

READ MORE

Related Books