ಆತ್ಮಕಥೆ ಬರೆಯುವ ಮುನ್ನ

Author : ಚಂದ್ರಕಾಂತ ಪೋಕಳೆ

Pages 164

₹ 180.00
Year of Publication: 2022
Published by: ಆನಂದಿ ಪ್ರಕಾಶನ
Address: ಮೈಸೂರು

Synopsys

'ಆತ್ಮಕತೆ ಬರೆಯುವ ಮುನ್ನ’ಚಂದ್ರಕಾಂತ ಪೋಕಳೆ ಅವರ ಕವನಸಂಕಲನವಾಗಿದೆ. ಕವಿತೆಗಳಲ್ಲಿ ಆಕ್ರೋಶವಿಲ್ಲ, ಭಾವೋದ್ವೇಗವಿಲ್ಲ.‌ ವಸ್ತುಸ್ಥಿತಿಯನ್ನು ಚಿತ್ರಿಸುವಾಗ ವಿಷಾದ, ವ್ಯಂಗ್ಯ, ವಿಡಂಬನೆಗಳು ಹೆಚ್ಚಾಗಿ ಇವರ ಕವಿತೆಗಳಲ್ಲಿ ಕಂಡು ಬರುತ್ತವೆ. ಲೌಕಿಕ ವಿಷಮ ಪರಿಸ್ಥಿತಿಯ ಚಿತ್ರಣಗಳು ಮನುಷ್ಯನ ಭಕ್ತಿ ದೇವರು ಕಲ್ಪನೆಯ ಮತ್ತು ನಂಬಿಗೆಯ ಟೊಳ್ಳುತನವನ್ನೂ ಕವಿತೆಗಳು ಅನಾವರಣಗೊಳಿಸುತ್ತವೆ‌ ಮನುಷ್ಯ ಜೀವಿಯಂತೆ ಸಕಲ ಜೀವಜಂತುಗಳ ಜೊತೆಯಾಗಿ ಮನುಷ್ಯ ನಡೆಯಬೇಕಾದ ಅಗತ್ಯವನ್ನೂ ‌ಕವಿ ಒತ್ತು ನೀಡಿ ಹೇಳುತ್ತಾನೆ‌. ಕವಿತೆ ಬ್ರಹ್ಮಾಂಡವನ್ನು ಚಿತ್ತಿಸುವ ಲೌಕಿಕ ಕವಿತೆಗಳು. ಏಕಾಂತ ಧ್ಯಾನವಸ್ಥೆಯಿಂದ ಪ್ರಾರಂಭಗೊಂಡ ಕವಿತೆಗಳು ಲೋಕಾಂತದೊಂದಿಗೆ ಮಿಳಿತಗೊಂಡ ಧ್ವನಿಪೂರ್ಣ ಕವಿತೆಗಳು ಮುಕ್ತಛಂದಸ್ಸಿನಲ್ಲಿ ಬರೆಯಲಾಗಿವೆ‌ ಪದಗೞ ಆಯ್ಕೆಯಲ್ಲಿ ತನ್ನ ಕಾವ್ಯದ ಆಶಯವನ್ನು ಧ್ವನಿಸಲು ಒಬ್ಬ ಶಿಲ್ಪಿಯಂತೆ ಧ್ಯಾನಿಸಿ ಪೋಣಿಸಿ ಕಾವ್ಯಮೂರ್ತಿಯನ್ನು ಕಟ್ಟುತ್ತಾರೆ‌.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books