ಕನಸು ಕೋಳಿಯ ಕತ್ತು

Author : ಗೋವಿಂದ ಹೆಗಡೆ

Pages 62

₹ 30.00
Year of Publication: 2000
Published by: ಡಿ ವಿ ಪ್ರಹ್ಲಾದ್
Address: ಸಂಚಯ

Synopsys

ಗೋವಿಂದ ಹೆಗಡೆ ಅವರ ಮೊದಲ ಸಂಕಲನ ಕನಸು ಕೋಳಿಯ ಕತ್ತು. ಈ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರ ದ ಯುವ ಬರಹಗಾರರಿಗೆ ಪುರಸ್ಕಾರ ಯೋಜನೆ ಅಡಿಯಲ್ಲಿ ಪುರಸ್ಕೃತವಾಗಿದೆ.ಡಾ ಚೆನ್ನವೀರ ಕಣವಿ ಅವರ ಮುನ್ನುಡಿ ಈ ಕೃತಿಯಲ್ಲಿದೆ. ಅವರು ಹೇಳುವಂತೆ, ಕವನದಲ್ಲಿಯ ಒಂದು ಪದ ಒಂದು ಚಿತ್ರ-ಯಾವುದೂ ಹುಸಿ ಹೋಗದಂತೆ, ಸಾಧ್ಯವಾದಲ್ಲಿ ಹೊಸ ಅರ್ಥಕ್ಕೆ ತೆರೆದುಕೊಳ್ಳುತ್ತ ಇಡಿಯಾದ ಒಂದು ಪರಿಣಾಮಕ್ಕೆ ತುಡಿಯುವ ಕಲೆಗಾರಿಕೆಯನ್ನು ತಮ್ಮ ಪ್ರಥಮ ಸಂಕಲನದಲ್ಲಿಯೇ ಸಾಧಿಸಲು ಪ್ರಯತ್ನಿಸಿರುವ ಕವಿ ಡಾ.ಗೋವಿಂದ ಹೆಗಡೆಯವರನ್ನು ಮೊದಲು ಅಭಿನಂದಿಸುತ್ತೇನೆ.'ಪಡೆದ ಹಾಗೆಲ್ಲ ಕಳೆದು ಹೋಗುವ ಬೆಳಕ'ನ್ನು ಹರಳಾಗಿಸುವ, ಮೂಲಬಿಂಬದ ಬೆಳಕನ್ನು ತನ್ನ ಎದೆಯಲ್ಲಿ ಪ್ರತಿಫಲಿಸಿಕೊಳ್ಳು ವ ಹಾಗೂ ಪ್ರೀತಿಯ ಪಿಸುಮಾತಿಗೆ ಪ್ರತಿಕ್ರಿಯಿಸುವ ಹಂಬಲ ಈ ಕಾವ್ಯದ ಕೇಂದ್ರ ಕಾಳಜಿಯಾಗಿದೆ.ಹುಟ್ಟು ಪ್ರತಿಭೆಯ ಜಿಗುಟುಗಾರಿಕೆ, ಉದ್ವೇಗ ರಹಿತವಾದ ಉತ್ಕಟತೆ ಈ ಕಾವ್ಯದುದ್ದಕ್ಕೂ ಕಾಣುವಂಥದು.ಜೀವನದ ಸಾಧ್ಯತೆಯಲ್ಲಿಯೇ ತನ್ನ ಕಾವ್ಯದ ಸಾಧ್ಯತೆಯನ್ನೂ ಕಂಡುಕೊಳ್ಳುವ ಹಾಗೂ ಪ್ರಚಲಿತ ಮಾದರಿಗಳಿಗಿಂತ ಭಿನ್ನವಾಗಿ ನಿಲ್ಲುವ ಪ್ರಯತ್ನ ಈ ಕಾವ್ಯದ ಗಮನಾರ್ಹ ಅಂಶವಾಗಿದೆ ಎಂಬುದಾಗಿ ಹೇಳಿದ್ದಾರೆ.

About the Author

ಗೋವಿಂದ ಹೆಗಡೆ

ಗೋವಿಂದ ಹೆಗಡೆ ಅವರು ಎಂಬಿಬಿಎಸ್, ಡಿಎ., ಪದವೀಧರರು. ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ. ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ, ಧಾರವಾಡ ಉತ್ಸವ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮ್ಮೇಳನ ಕವಿಗೋಷ್ಠಿಯೂ ಸೇರಿದಂತೆ ಹಲವಾರು ವೇದಿಕೆಗಳಿಂದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರಾಚಾರ್ಯ ಎಚ್ಚೆಸ್ಕೆ ಅವರ ಜನ್ಮಶತಮಾನೋತ್ಸವದಲ್ಲಿ ಏರ್ಪಡಿಸಲಾಗಿದ್ದ ‘ಎಚ್ಚೆಸ್ಕೆ ಬೆಳಕು’ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಕಟಿತ ಕವನ ಸಂಕಲನ 'ಕನಸು ಕೋಳಿಯ ಕತ್ತು' ಕನ್ನಡ ಪುಸ್ತಕ ಪ್ರಾಧಿಕಾರದ ‘ಯುವ ಬರಹಗಾರರಿಗೆ ಪ್ರೋತ್ಸಾಹ' ...

READ MORE

Related Books