ಚಂದ್ರಶೇಖರ ಕಂಬಾರ ಅವರ ಆಯ್ದ ಕವಿತೆಗಳು

Author : ಚಂದ್ರಶೇಖರ ಕಂಬಾರ

Pages 108

₹ 75.00
Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕವಿ ಚಂದ್ರಶೇಖರ ಕಂಬಾರ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಸತ್ಯದ ಹುಡುಕಾಟ, ನೆರಳು-ಬೆಳಕಿನ ನಡುವಿನ ಮುಖಾಮುಖಿ, ಮನುಷ್ಯನ ಆಂತರ್ಯದಲ್ಲಿ ಅಡಗಿದ ತನ್ನತನ ಹುಡುಕಾಡುವ ಗುಣಗಳನ್ನು ಕಂಬಾರರ ಕವಿತೆಗಳು ಹೊಂದಿವೆ. ಜಾನಪದದ ಸೊಗಡು ಮತ್ತು ವಚನಗಳ ಬೆಡಗು ಹಾಗೂ ಆಧುನಿಕತೆಯ ಸ್ಪರ್ಶ ಹೊಂದಿರುವ ಕಂಬಾರರ ಕವಿತೆಗಳು ಸೊಗಸಾದ ಓದಿಗೆ ಅನುವು ಮಾಡಿಕೊಡುತ್ತವೆ. ಕಂಬಾರರ ಆಯ್ದ ಕವಿತೆಗಳನ್ನು ಈ ಸಂಕಲನದಲ್ಲಿ ನೀಡಲಾಗಿದೆ. ಪ್ರಾತಿನಿಧಿಕ ಕವಿತೆಗಳನ್ನು ನೀಡಿರುವುದು ವಿಶೇಷ. ಮೊದಲ ಓದಿಗೆ ಅನುವಾಗುವಂತೆ ಸಂಕಲನವನ್ನು ರೂಪಿಸಲಾಗಿದೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books