ಅಂತರ್ಮುಖಿ

Author : ರಾಘವೇಂದ್ರ ಡಿ. ಆಲೂರು

Pages 80

₹ 80.00
Year of Publication: 2019
Published by: ನಂದಗೋಕುಲ ಪ್ರಕಾಶನ
Address: ಬೊಂದೇಲ್, ಮಂಗಳೂರು
Phone: 9880353917

Synopsys

ಪ್ರೀತಿ ಪ್ರೇಮ-ಪ್ರಣಯಕ್ಕೆ-ಹೊರತಾಗಿ ಇಲ್ಲಿ ಕವಿ ಸಾಮಾಜಿಕ ಪಿಡುಗಿಗೆ ತಳುಕು ಹಾಕಿಕೊಂಡಿರುವ ಧರ್ಮ ತರುವ ಸಂಕಟವನ್ನು ಹೆಕ್ಕಿದ್ದಾರೆ. ಧರ್ಮಸಂಕಟದ ಸಾಲು ಹೀಗಿದೆ ; ನಾನೀಗ ಮತಾಂತರಗೊಂಡಿದ್ದೇನೆ! ರಹೀಮನ ಮದುವೆಯಾಗಿ! ಹುಟ್ಟಿದ ಮೂಲ ಮೂಲೆಗುಂಪು! 'ಅಂತರ್ಮುಖಿ' ಮತ್ತೊಂದು ಚಿಂತನೆಗೆ ಹಚ್ಚುವ ಕವನ, 'ಕತ್ತಲು ಒಮ್ಮೊಮ್ಮೆ ಕಣ್ತೆರೆಸಿದರೂ, ಬೆಳಕು ಪ್ರಕಾಶಿಸುವುದಿಲ್ಲ' ಎನ್ನುತ್ತಾರೆ ಕವಿ. ಬಹುಶಃ ಈ ರೀತಿಯ ತನ್ನೊಳಗನ್ನು ತಾನೇ ಕಂಡುಕೊಳ್ಳುವ ಪರಿ ಒಂದು ರೀತಿಯ ಸೋಜಿಗಕ್ಕೆ ಕಾರಣವಾಗುವ ಕೃತಿ ಇದು.

About the Author

ರಾಘವೇಂದ್ರ ಡಿ. ಆಲೂರು
(21 June 1990)

 ರಾಘವೇಂದ್ರ ಡಿ ಆಲೂರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನಲ್ಲಿ. 1990 ಜೂನ್‌ 21 ರಂದು ಜನನ. ಮೈಸೂರಿನ ಕರ್ನಾಟಕ ಮುಕ್ತ ವಿ.ವಿ.ಯಿಂದ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರೆಕಾಲಿಕ ಉಪನ್ಯಾಸಕರಾಗಿ, ಭಾರತೀಯ ಜೀವವಿಮಾ ಪ್ರತಿನಿಧಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರು. ಅರೆಹೊಳೆ ಪ್ರತಿಷ್ಟಾನ ಮಂಗಳೂರು, ಅನಂತ ಪ್ರಕಾಶನ ಕಿನ್ನಿಗೋಳಿ ಮತ್ತು ಮಂಗಳೂರು ಆಕಾಶವಾಣಿಯ ಪ್ರಾಯೋಜಿತ 'ಪ್ರತಿಭಾನ್ವೇಷಣ- 2018' ರಾಜ್ಯ ಕವನ ಸ್ಪರ್ಧೆಯಲ್ಲಿ ಬಹುಮಾನ ಸಂದಿದೆ. ಅವರ ಚೊಚ್ಚಲ ಕವನ ಸಂಕಲನ ’ಅಂತರ್ಮುಖಿ’ ಪ್ರಕಟಗೊಂಡಿದೆ. ...

READ MORE

Related Books