ಲೇಖಕಿ ಮಾಧವಿ ಭಂಡಾರಿ ಕೆರೆಕೋಣ ಅವರ ಕವನ ಸಂಕಲನ ’ಮೌನಗರ್ಭದ ಒಡಲು’. ಒಟ್ಟು 45 ಕವನಗಳಿವೆ. ಈ ಕವನಗಳು ಪ್ರಸ್ತುತ ಭಾರತದ ಪ್ರಕ್ಷುಬ್ದ ವಾತಾವರಣವನ್ನು ಯಾವುದೇ ವಿವಾದಗಳಿಗೆ ಸಿಲುಕದೆ ಹೇಳಬೇಕಾದದ್ದನ್ನು ನೇರವಾಗಿ ಪ್ರಸ್ತುತ ಪಡಿಸುತ್ತಿವೆ. ಕವನದ ದನಿ ನಿಧಾನವಾದರೂ ಅದರಲ್ಲಿನ ನಿಲುವುಗಳು ದಿಟ್ಟವಾಗಿವೆ.
ಕನ್ನಡದ ಸೂಕ್ಷ್ಮ ಕವಯತ್ರಿ ಮಾಧವಿ ಭಂಡಾರಿ ಕೆರೆಕೋಣ ಅವರು 1962 ಜುಲೈ 22 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಲ್ಲೂಕಿನ ಕೆರೆಕೋಣದಲ್ಲಿ ಜನಿಸಿದರು. ’ಹರಿದ ಸರ್ಟಿನ ಹುಡುಗಿ, ಕಡಲು ಕಳೆದಿದೆ' ಅವರ ಕವನ ಸಂಕಲನ. ’ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ ಸಂದಿದೆ ಅವರಿಗೆ. ...
READ MORE