ಗಾಳಿಗೆ ಕಟ್ಟಿದ ಗೆಜ್ಜೆ

Author : ಜಬೀವುಲ್ಲಾ ಎಂ. ಅಸದ್

Pages 176

₹ 250.00




Year of Publication: 2022
Published by: ತೇಜಸ್ ಇಂಡಿಯಾ
Address: # 277, 2ನೇ ಮಹಡಿ, 5ನೇ ತಿರುವು, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು - 560 058

Synopsys

‘ಗಾಳಿಗೆ ಕಟ್ಟಿದ ಗೆಜ್ಜೆ’ ಲೇಖಕ, ಕವಿ ಜಬೀವುಲ್ಲಾ ಎಂ. ಅಸದ್ ಅವರ ಕವಿತೆಗಳ ಸಂಕಲನ. ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮತ್ತು ಖ್ಯಾತ ವಿಮರ್ಶಕಿ ಡಾ. ತಾರಿಣಿ ಶುಭದಾಯಿನಿ ಅವರ ಮುನ್ನುಡಿ ಬರಹಗಳಿವೆ. ಕವಿತೆಗಳ ಬಗ್ಗೆ ವಿವರಿಸುತ್ತಾ. ಗಾಳಿಗೆ ಕಟ್ಟಿದ ಗೆಜ್ಜೆ ಜಬೀವುಲ್ಲಾ ಅಸದ್ ಅವರ ಎರಡನೆಯ ಕವಿತಾ ಸಂಗ್ರಹ. ಜಬೀವುಲ್ಲಾ ಅವರು ಬಹುಮುಖಿ ಪ್ರತಿಭೆಯ ವ್ಯಕ್ತಿ. ಅವರ ಆಸಕ್ತಿಗಳು, ವೈವಿಧ್ಯಮಯವಾಗಿದ್ದು, ಅವರು ತಮ್ಮನ್ನು ತಾವು ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಓದಿದ್ದು ಒಂದು, ಆದರೆ ಆಸಕ್ತಿಗಳು ಹರಡಿ ಹಬ್ಬಿಸಿರುವುದು ಅನೇಕ ದಿಕ್ಕುಗಳಲ್ಲಿ. ಆಸಕ್ತಿಗಳ ಬೆನ್ನುಹತ್ತಿ ಹೋಗುವ ವ್ಯಕ್ತಿ ಎನ್ನುವುದು ಇವರಿಗೆ ಹೆಮ್ಮೆಯ ಫಲಕ ಎನ್ನುವುದಕ್ಕಿಂತ ಅವರಿಗೆ ಅದೊಂದು ಜೀವನಾಸಕ್ತಿಯ, ಜೀವನದ ಬಗೆಗಿನ ಶೋಧವನ್ನು ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದೆ ಎನ್ನುವುದು ವಿಶೇಷ ಸಂಗತಿ. ಈ ಆಸಕ್ತಿಗಳ ಫಲವಾಗಿಯೇ ಅವರೊಳಗಿನ ಕವಿ ಮಾತಾಡಿದ್ದಾನೆ ಎನ್ನುತ್ತಾರೆ ತಾರಿಣಿ ಶುಭದಾಯಿನಿ. ಜೊತೆಗೆ ಜಬೀವುಲ್ಲಾ ಅಸದ್ ಅವರ ಈ ಕವಿತಾ ಸಂಕಲನವು ತಾತ್ವಿಕ ಚಿಂತನೆಯ ದಾರ್ಶನಿಕ ಕವಿತೆಗಳು ಎಂಬ ಉಪಶೀರ್ಷಿಕೆಯನ್ನು ಹೊಂದಿವೆ. ಆದುದ್ದರಿಂದ ಇಲ್ಲಿನ ಕವಿತೆಗಳ ಆಶಯ, ವಸ್ತುಗಳು ಒಂದು ವಿಷಯವನ್ನಪ ಕೇಂದ್ರೀಕರಿಸಿವೆ ಎನ್ನುವುದನ್ನು ತಿಳಿಯಬಹುದು. ಈ ಉಪಶೀರ್ಷಿಕೆಯು ನನಗೆ ಕುವೆಂಪು ಅವರ ಕವಿತೆಯ ನಿಲುವನ್ನು ನೆನಪಿಸಿತು. ಕುವೆಂಪು ತಾವು ಕವಿಯಾಗದಿದ್ದರೆ ತತ್ವಶಾಸ್ತ್ರಜ್ಞನಾಗಿರುತ್ತಿದ್ದೆ ಎಂದಿರುವುದು ಕವಿತೆಯ ಬಗ್ಗೆ ಪುನರವಲೋಕನ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕವಿಯಾದವನು ಮುಖ್ಯವಾಗಿ ಭಾವನಾಜೀವಿಯಲ್ಲ, ಅವನು ಪಂಡಿತನೊ, ವಿಶ್ಲೇಷಕನೋ ಅಲ್ಲ. ಅವನು ಈ ಎರಡನ್ನೂ ಸೇರಿಸಿದ ಒಂದು ವ್ಯಕ್ತಿತ್ವ. ಬುದ್ಧಿಭಾವಗಳ ವಿದ್ಯುದಾಲಿಂಗನ ಹೊಂದಿರುವ ಕವಿಪ್ರತಿಭೆಯು ಒಬ್ಬ ತತ್ವಶಾಸ್ತ್ರಜ್ಞನಿಗೆ ಹತ್ತಿರವಾಗಿರುವಂತದ್ದು, ಕವಿತೆಯ ಮೂಲಕ ಕವಿ ಹಾಗೂ ಸಹೃದಯರಿಬ್ಬರೂ ಒಂದು ಜಾಗೃತ ಅವಸ್ಥೆಯನ್ನು ಮುಟ್ಟುತ್ತಾರೆ ಎಂದಿದ್ದಾರೆ. ಕವಿತೆ ಬರೆಯುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಬೀವುಲ್ಲಾ ಅಸದ್ ಅವರು ಇನ್ನಷ್ಟು ಕಾವ್ಯದ ಕಸುಬಿಗೆ ತೆರೆದುಕೊಳ್ಳಲಿ. ಅವರ ಆಸಕ್ತಿ, ಕಸುಬುಗಾರಿಕೆಯಿಂದ ಇನ್ನಷ್ಟು ಒಳ್ಳೆಯ ಕವಿತೆಗಳು ಬರಲಿ ಎಂದು ತಾರಿಣಿ ಶುಭದಾಯಿನಿ ಹಾರೈಸಿದ್ದಾರೆ.

About the Author

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ...

READ MORE

Related Books