ವ್ಯೋಮ ತಂಬೂರಿ ನಾದ

Author : ಆನಂದ್ ಕುಂಚನೂರ

Pages 96

₹ 150.00




Year of Publication: 2016
Published by: ಒನ್ ವೀಲರ್ಸ್ ಪಬ್ಲಿಕೇಷನ್ಸ್
Address: ವೆಂಕಟಾಲ, ಯಲಹಂಕ ಪೋಸ್ಟ್, ಬೆಂಗಳೂರು-560064
Phone: 9945177900

Synopsys

ಕವಿ, ಲೇಖಕ ಆನಂದ ಕುಂಚನೂರು ಅವರ ಕವನ ಸಂಕಲನ ‘ವ್ಯೋಮ ತಂಬೂರಿ ನಾದ’. ಈ ಕೃತಿಗೆ ಕಥೆಗಾರ ನಾಗರಾಜ ರಾಮಸ್ವಾಮಿ ವಸ್ತಾರೆಯವರು ಮುನ್ನುಡಿ ಬರೆದಿದ್ದಾರೆ. ಕೃತಿಯಲ್ಲಿ ಹಲವು ಕವಿತೆಗಳು ಗಮನ ಸೆಳೆಯುತ್ತವೆ. ಔಷದಿ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಕುಂಚನೂರು ಅವರು ಈ ಕವಿತೆಗಳಲ್ಲಿ ಪುರಾಣಪಾತ್ರಗಳೊಂದಿಗೆ ವಾಸ್ತವಗಳನ್ನೂ ಬೆಸೆಯುತ್ತಾ ಬೆರಗುಟ್ಟಿಸುತ್ತಾರೆ. ಅವರ ‘ಸಾಂಪ್ರತು’ ಬಲು ಚೆಂದದ ಪದ್ಯ, ‘ಒಂದು ವೀರ್ಯದ ಋಣ’ ಕಾಡಿ ಕೆಣಕುವಂಥದ್ದು. ‘ಜನ್ಮ ಕೊಟ್ಟವನಾಗಿ ಅಪ್ಪನಾಗದ ನಿನ್ನನ್ನು ದ್ವೇಷಿಸುತ್ತೇನೆ/ ಸಾಲದ ಒಂದು ವೀರ್ಯದ ಋಣಕ್ಕೆ ಕ್ಷಮಿಸಿ ಬಿಡುತ್ತೇನೆ. ನಾನೂ ಮಗನಲ್ಲ ಬಿಡು’- ಹೀಗೆ ಆರಂಭವಾಗುವ ಸಾಲು ತಮ್ಮ ಮೊದಲ ಮಂಡನೆಯಲ್ಲಿಯೇ ಗಕ್ಕನೆ ನಿಲ್ಲಿಸಿ ಅವಕ್ಕಾಗಿಸುತ್ತದೆ.

‘ನಾ ನಿಂತರೂ ನೀ ಚಲಿಸುವೆ/ ನೀ ನಿಲ್ಲವು ನಾ ನಿಚ್ಚಲ ನಾರಾಯಣ/ ಯದುಕುಲದಾಯಣ ಇಕ್ಷ್ವಾಕುವಂಶಾಯಣ/ ಕಲಿಯುಗದತಾರಣದಲಿ ಬಳಲಿದ ಬಕುಳ/ ಅದು ನಿನಗೆ ಬೇಕು/ ಇದು ನನಗೆ ಬೇಡ’- ಎಂದು ಮತ್ತೊಮ್ಮೆ ಬೆರಗಿಸಿ, ‘ತಾನು ತಾನಾಗಿ ತೊನೆದು ನಿನ್ಹೆಸರ ಉಳಿಸಿದಲ್ಲದೆ ನಾನು ನಿನ್ನ ಮಗನೆ ಅಲ್ಲ’ ಎಂಬಲ್ಲೊಂದು ದಿಟ್ಟ ಸಾಲು ನಿಬ್ಬೆರಗಾಗಿಸುತ್ತದೆ. ಇಂಥಾ ಹಲವು ಕಾಡುವ ಪದ್ಯಗಳು ಈ ವ್ಯೋಮ ತಂಬೂರಿ ನಾದದಲ್ಲಿ ಲೀನವಾಗಿವೆ.

About the Author

ಆನಂದ್ ಕುಂಚನೂರ
(13 July 1981)

ಕವಿ, ಲೇಖಕ ಆನಂದ ಕುಂಚನೂರು ಮೂಲತಃ  ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರು. ಇವರು 13-07-1981ರಂದು ಮೂಡಲಗಿಯಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬನಹಟ್ಟಿಯಲ್ಲಿ ಮುಗಿಸಿದ ಆನಂದ ಅವರು ನಂತರ ಧಾರವಾಡದಲ್ಲಿ ಪಿ.ಯು.ಸಿ ಹಾಗೂ ಬೆಳಗಾವಿ ಮತ್ತು ಮೈಸೂರಿನಲ್ಲಿ ಬಿ.ಫಾರ್ಮ್ ಮತ್ತು ಎಂ.ಫಾರ್ಮ್ ಶಿಕ್ಷಣ ಪಡೆದರು. 2007 ರಿಂದ ಖಾಸಗಿ ಔಷದಿ ಕಂಪೆನಿಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು- ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಕರಿನೆಲ’, ‘ವ್ಯೋಮ ತಂಬೂರಿನಾದ’ ಎಂಬ ಕವನ ಸಂಕಲನಗಳು ಮತ್ತು ‘ಪಾದಗಟ್ಟಿ’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ.  ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳಾದ ಮಯೂರ, ತುಷಾರ, ...

READ MORE

Related Books