ನಾನು ಹೀಗೆಯೇ ಪಯಣ ಮುಗಿಸಿ ಹೋಗಲೇ

Author : ಅಲಿಬಾಬಾ ರವುಡಕುಂದಾ

Pages 88

₹ 80.00




Year of Publication: 2020
Published by: ಫಾರೂಖ್ ಪ್ರಕಾಶನ
Address: ಫಾತಿಮಾಬಿ ಜಿ, ವಾರ್ಡ್ ನಂ. 1, ಮನೆ ನಂ-9, ಬಸವೇಶ್ವರ ದೇವಸ್ಥಾನದ ಹತ್ತಿರ, ರವುಡಕುಂದಾ, ಪೋಸ್ಟ್: ರವುಡಕುಂದಾ, ತಾ-ಸಿಂಧನೂರು, ಜಿಲ್ಲೆ- ರಾಯಚೂರು
Phone: 8197838995

Synopsys

‘ನಾನು ಹೀಗೆಯೇ ಪಯಣ ಮುಗಿಸಿ ಹೋಗಲೇ’ ಕವಿ ಅಲಿಬಾಬಾ ರವುಡಕುಂದಾ ಅವರ ಮೊದಲ ಕವನ ಸಂಕಲನ. ಈ ಕೃತಿಗೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಬೆನ್ನುಡಿ ಬರೆದು ‘ಕವಿ ನಾಡಿಗೆ ಪರಿಚಯವಾಗಬೇಕೇ ಹೊರತು ಕವಿಯ ಹೆಸರು, ರೂಪ, ಜಾತಿ, ಧರ್ಮದ ಮೂಲವಲ್ಲ ಎನ್ನುವ ಗಂಭೀರ ಚಿಂತನೆಯ ಸಾಲುಗಳನ್ನು ಕವಿತೆಯಾಗಿಸಿಕೊಂಡು ಕವಿ ಅಲಿಬಾಬಾ ರವುಡಕುಂದಾ ಅವರು ನಾನು ಯಾರು, ಎಲ್ಲಿಂದ ಬಂದೆ ಎನ್ನುವ ಸೂಕ್ಷ್ಮ ಪ್ರಶ್ನೆ ಹಾಕಿಕೊಳ್ಳುವುದರ ಜೊತೆಗೆ ಸಂಕಲನದ ಕೊನೆ ಪುಟ ಮುಟ್ಟುವ ಮುನ್ನವೇ ಅರ್ಥವಾಯಿತು ಇಲ್ಲಿ ಯಾರೂ ಶಾಶ್ವತರಲ್ಲ. ಒಂದು ದಿನ ಅಗಲಿಕೆ ಅನಿವಾರ್ಯವಿದೆ ಮನುಷ್ಯನಿಗೆ ಆದರೆ ಕವಿತೆಗಲ್ಲ. ಎನ್ನುವ ಮಾರ್ಮಿಕ ಸಾಲು ಬರೆಯುವುದರ ಮೂಲಕ ಮನುಷ್ಯ ಪ್ರೀತಿ ಜಗದ ತುಂಬ ಗೆಲ್ಲಲಿ ಎಂದು ಕೈ ಜೋಡಿಸುತ್ತಾರೆ. ಕವಿಯ ಈ ನಮ್ರತಾ ಭಾವಕ್ಕೆ ಶರಣು ಹೇಳಲೇಬೇಕು’ ಎನ್ನುತ್ತಾರೆ.

ಸರಳತೆ ಮತ್ತು ಮಮತೆಯ, ಪ್ರೀತಿ, ಪ್ರೇಮ, ಮೋಹ ಹಾಗೇ ದೇಶಾಭಿಮಾನದ ವಿಷಯದ ಕವಿತೆಗಳ ನಡುವೆ ಮಿಂದು ಧನ್ಯರಾಗುವ ಕವಿ, ‘ನಾನು ಹೀಗೆಯೇ ಪಯಣ ಮುಗಿಸಿ ಹೋಗಲೇ’ ಎನ್ನುವ ಈ ಕವನ ಸಂಕಲನವನ್ನು ಓದುಗರ ಮುಂದಿಟ್ಟಿದ್ದಾರೆ.

About the Author

ಅಲಿಬಾಬಾ ರವುಡಕುಂದಾ
(01 June 1982)

ಕವಿ ಅಲಿಬಾಬಾ ರವುಡಕುಂದಾ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರವುಡಕುಂದಾ (01-06-1982) ಗ್ರಾಮದವರು. ತಂದೆ- ಶ್ಯಾಮಿದ್ ಸಾಬ. ಇವರದು ಕೃಷಿಕ ಕುಟುಂಬ. ವಿದ್ಯಾರ್ಥಿ ದೆಸೆಯಿಂದಲೇ ತಮ್ಮೊಳಗೆ ಕ್ರಿಯಾಶೀಲತೆ ರೂಢಿಸಿಕೊಂಡವರು. ಕತೆ, ಕವನ, ಲೇಖನಗಳನ್ನು ಬರೆಯುವುದು, ಧಾರ್ಮಿಕ ಪ್ರವಚನ ನೀಡುವುದು ಹವ್ಯಾಸ. ರವುಡಕುಂದಾದಲ್ಲಿ ಪ್ರಾಥಮಿಕ ಶಿಕ್ಷಣ, ಕುಷ್ಟಗಿ ತಾಲೂಕಿನ ತಾವರೆಗೇರಾದಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ಸಿಂಧನೂರಿನಲ್ಲಿ ಟಿಸಿಎಚ್ ಶಿಕ್ಷಣ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ(ಹಿಂದಿ) ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಇತಿಹಾಸ) ಸ್ನಾತಕೋತ್ತರ ಪದವೀಧರರು. 29 ಜನವರಿ 2004 ರಿಂದ ಸರಕಾರಿ ...

READ MORE

Related Books