ತುಂಟ ಮಕ್ಕಳು

Author : ಶರಣಪ್ಪ ಜಿ.ಚಟ್ಟಿ ( ಶರಣು ಚಟ್ಟಿ)

Pages 74

₹ 100.00
Year of Publication: 2021
Published by: ನುಡಿಚಿತ್ರ ಪ್ರಕಾಶನ
Address: ಗೋಲಗೇರಿ, ತಾ: ಸಿಂದಗಿ,ಜಿ: ವಿಜಯಪುರ-586128
Phone: 9148428153

Synopsys

ಕವಿ ಶರಣಪ್ಪ ಜಿ.ಚಟ್ಟಿ ( ಶರಣು ಚಟ್ಟಿ) ಅವರ ಕವನ ಸಂಕಲನ- ತುಂಟ ಮಕ್ಕಳು. ವೃತ್ತಿಯಿಂದ ಶಿಕ್ಷಕರಾಗಿರುವ ಕವಿಗಳು ಮಕ್ಕಳ ಮನಸ್ಸಿಗೆ ಮುದ ನೀಡುವ  ಕವಿತೆಗಳನ್ನು ರಚಿಸಿದ್ದಾರೆ. ಒಟ್ಟು 25 ಕವನಗಳನ್ನು ಇಲ್ಲಿ ಸಂಕಲಿಸಲಾಗಿದೆ. ಸರಳ ಪ್ರಾಸಗಳು, ಪದ ಕುಣಿತ,ಲಯ ಹಾಗೂ ರಾಗ ಸಂಯೋಜನೆಗೆ ಪೂರಕವಾಗಿ ರಚಿಸಿದ ಕವನಗಳ ಗುಚ್ಛವೇ ಈ ಕೃತಿಯಾಗಿದೆ. ಕವಿಗಳು ವ್ಯಂಗ್ಯಚಿತ್ರಕಾರರೂ ಆಗಿದ್ದು, ಪ್ರತಿ ಕವನಕ್ಕೆ ಅಗತ್ಯವೆನಿಸುವ ಸಾಂದರ್ಭಿಕ ಚಿತ್ರಗಳನ್ನೂ ಆಕರ್ಷಕವಾಗಿ ಚಿತ್ರಿಸಿದ್ದು, ಮಕ್ಕಳ ಕವನಗಳ ಅರ್ಥವಂತಿಕೆಯನ್ನುಹೆಚ್ಚಿಸಿದ್ದಾರೆ. ಮನೆ, ಶಾಲೆ, ಪರಿಸರ, ಕೃಷಿ, ವಿಜ್ಞಾನ, ಆರೋಗ್ಯ,ದೇಶಪ್ರೇಮ,ಮಾನವೀಯತೆ ಹೀಗೆ ವಿಷಯ ವೈವಿಧ್ಯತೆ ಇದೆ. ಮಕ್ಕಳಿಗೆ- ಪಾಲಕರಿಗೆ- ಶಿಕ್ಷಕರಿಗೆ- ಸಮಾಜಕ್ಕೆ ಕವನಗಳ ಮೂಲಕವೇ ಉತ್ತಮ ಸಂದೇಶಗಳನ್ನೂ ನೀಡಿದ್ದಾರೆ. ಮಕ್ಕಳು ಓದಿ ಹಾಡಲೂ ಬರುವ ಕವನಗಳಿವೆ. ಖ್ಯಾತ ಮಕ್ಕಳ ಸಾಹಿತಿ ಪ.ಗು.ಸಿದ್ಧಾಪುರ ಅವರು  ಮುನ್ನುಡಿ ಹಾಗೂ ಹ.ಮ.ಪೂಜಾರ ಅವರು ಬೆನ್ನುಡಿ ಬರೆದು, ಮಕ್ಕಳಿಗಾಗಿ ಬರೆದ ಕವನಗಳ ರಚನಾ ಕಲೆಯನ್ನು ಪ್ರಶಂಸಿಸಿದ್ದಾರೆ. 

About the Author

ಶರಣಪ್ಪ ಜಿ.ಚಟ್ಟಿ ( ಶರಣು ಚಟ್ಟಿ)
(21 October 1987)

ಲೇಖಕ ಶರಣಪ್ಪ ಜಿ.ಚಟ್ಟಿ ( ಶರಣು ಚಟ್ಟಿ) ಅವರು ಮೂಲತಃ ವಿಜಯಪುರ ಜಿಲ್ಲೆ,ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದವರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಕುವೆಂಪು ವಿಶ್ವವಿದ್ಯಾಲಯದಿಂದ ಎಂಎ ಹಾಗೂ ಸಿಂದಗಿಯ ಪದ್ಮರಾಜ ಡಿ.ಇಡಿ ಕಾಲೇಜಿನಿಂದ ಡಿ.ಇಡಿ ಪದವಿ ಪಡೆದಿದ್ದಾರೆ. ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶೀಕ್ಷಕರು. ಸಾಹಿತಿ, ವ್ಯಂಗ್ಯಚಿತ್ರಕಾರರು ಹಾಗೂ ಗಾಯಕರು. ಕೃತಿಗಳು: ತುಂಟ ಮಕ್ಕಳು (ಕವನ ಸಂಕಲನ-2021) ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಪ್ರಶಸ್ತಿ, ಬಾಗೇವಾಡಿಯ ಆರೂಢ ಶ್ರೀ ಪ್ರಶಸ್ತಿ, ಮುದ್ದೆಬಿಹಾಳ ತಾಲೂಕಿನ ಇಂಗಳಗೇರಿಯ ಕರುನಾಡ ಗುರುಶ್ರೇಷ್ಠ ಪ್ರಶಸ್ತಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕನ್ನೆಳ್ಳಿಯ ಸಗರನಾಡು ಯುವ ...

READ MORE

Related Books