ಗಾನಗುಚ್ಛ

Author : ಈ. ಬಸವರಾಜು

Pages 100

₹ 30.00
Published by: ಭಾರತ ಜ್ಞಾನ ವಿಜ್ಞಾನ ಸಮಿತಿ
Address: ಕರ್ನಾಟಕ

Synopsys

‘ಗಾನುಗುಚ್ಛ’ ಈ. ಬಸವರಾಜು ಅವರ ಹಾಡುಗಳ ಸಂಕಲನವಾಗಿದೆ. ಸಾಕ್ಷರತೆ, ಸಮಾನತೆ, ವೈಜ್ಞಾನಿಕ ಮನೋಭಾವ, ಪರಿಸರ ಪ್ರಜ್ಞೆ, ಪ್ರಾಥಮಿಕ ವಿದ್ಯಾಭ್ಯಾಸ, ಮಹಿಳಾ ಸಮಾನತೆ ಹಾಗೂ ಕ್ರಾಂತಿಕಾರಕ ಹಾಡುಗಳ ಸಂಕಲನವೇ ಈ ಪುಸ್ತಕವಾಗಿದೆ. ಈ ಹಾಡುಗಳು ಸಮಾಜವನ್ನು ಪ್ರಜ್ಞಾವಂತ ಸಮಾಜ ಮಾಡಲು ಹೊರಟಿರುವ ಸಮಾಜ ಸೇವಕರಿಗೆ ತಮ್ಮ ಕೆಲಸದಲ್ಲಿ ಬಳಸಿಕೊಳ್ಳಲು ರಚನೆಯಾದ ಹಾಡುಗಳು. ಒಂದು ಹಾಡಿನಲ್ಲಿ ಹೇಳಿರುವಂತೆ ಎಲ್ಲಿಂದ ಬಂದಿರಂದು ಹೇಳಬಹುದು ನೀವು ಜನರ ನಡುವಿನಿಂದ ಎಂದು ಹೇಳುತ್ತೇವೆ ನಾವು ಈಗ ಪಯಣ ಎಲ್ಲಿಗೆಂದು ಕೇಳಬಹುದು ನೀವು. ತಿರುಗಿ ಮತ್ತೆ ಜನರ ನಡುವೆ ಹೋಗುತ್ತೇವೆ ನಾವು. ಅಜ್ಞಾನ ಆವರಿಸಿ ಒಳಗಣ್ಣಿಗೆ ಕತ್ತಲ ಕನ್ನಡಕ ತೊಡಿಸಿರುವ ನಮ್ಮ ಸಂದರ್ಭಕ್ಕೆ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಗಳ ಆಪರೇಷನ್ ಅಗತ್ಯ. ಮುಗ್ದತೆಯನ್ನು ಮೌಢ್ಯಕ್ಕೆ ತಳ್ಳುವ, ಮನುಷ್ಯ ವಿರೋಧಿ ಶಕ್ತಿಗಳು ನಮ್ಮ ನಡುವೆಯೇ ಇರುವುದನ್ನು ನಾವು ಮೊದಲು ತಿಳಿಯಬೇಕು. ಮೌಢ್ಯದ ಕಪ್ಪು ಮೋಡ ಕರಗಿ ಬೆಳಕಿನ ಕಿರಣಗಳು ಕಾಣಿಸಬೇಕು. ಕಡಿವಾಣಗಳು ಕತ್ತರಿಸಿ ಬೀಳಬೇಕು ಎಂಬ ಆಶಯವನ್ನು ಬರಗೂರು ರಾಮಚಂದ್ರಪ್ಪ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ಈ. ಬಸವರಾಜು
(01 January 1965)

ಈ. ಬಸವರಾಜು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಬಹುಮುಖಿಯಾಗಿ ತೊಡಗಿಸಿಕೊಂಡಿರುವ ಇವರು ಹವ್ಯಾಸಿ ಬರಹಗಾರರಾಗಿದ್ದಾರೆ. ವೈಜ್ಞಾನಿಕ ಚಿಂತನೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ಇವರ ಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. - ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ವಿಚಾರವಾದಿಗಳ ವೇದಿಕೆ-ಹೀಗೆ ನಾನಾ ಸಂಘಟನೆ ಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಇವರು  ಖಗೋಳಯಾನ, ಸುವರ್ಣ ವಿಜ್ಞಾನೋತ್ಸವ, ಜನರೆಡೆಗೆ ವಿಜ್ಞಾನ ಜಾಥಾ, ಜೀವ ವೈವಿಧ್ಯ ದಾಖಲಾತಿ, ಇನ್ನೂ ಮುಂತಾದ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದಾರೆ.  ’ಶಿಕ್ಷಣ ಶಿಲ್ಪಿ' ಎಂಬ ಶೈಕ್ಷಣಿಕ ಮಾಸಪತ್ರಿಕೆಯ ಪ್ರಕಾಶನದ ಜವಾಬ್ದಾರಿಯನ್ನು ...

READ MORE

Related Books