ವಿಕ್ರಮ ವಿಸಾಜಿ ಕವಿತೆಗಳು

Author : ವಿಕ್ರಮ ವಿಸಾಜಿ

Pages 104

₹ 100.00




Year of Publication: 2018
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಬೆಳ್ಳಾರೆ- 583113
Phone: 9480353507

Synopsys

ವಿಕ್ರಮ ವಿಸಾಜಿ ಕವನ ಸಂಕಲನ -ಇಲ್ಲಿನ ಹಲವು ಕವಿತೆಗಳಲ್ಲಿ ಭಾವನೆ, ಕಲ್ಪನೆ ಮತ್ತ ವಿಚಾರಗಳ ಕೂಡುಕುಟುಂಬವನ್ನು ಕಾಣಬಹುದು. ನಿಗೂಢತೆಯ ಹಂಗು ತೊರೆದು ನೇರ ಸಂವಹವನ್ನು ಈ ಕವಿ ಆವರಿಸಿಕೊಂಡಿದ್ದಾರೆ. ಹೈದ್ರಾಬಾದ್ ಕರ್ನಾಟಕಕ್ಕೆ ತೀರ ಸಹಜವಾದ ಗಜಲ್ ಗಳ ನಿಕಟವಾದ ಓದು ಇಲ್ಲಿನ ಅಭಿವ್ಯಕ್ತಿಯ ಸ್ವರೂಪವನ್ನು ನಿರ್ಧರಿಸಿದೆ. ಆದರೆ ಅಲ್ಲಿನ ಗೇಯತೆಯನ್ನು ಇಲ್ಲಿ ಅರಸುವಂತಿಲ್ಲ. ಗುಬ್ಬಿಗಳಿಲ್ಲದ ಸಮಾಜ ಮತ್ತು ಕಾವ್ಯಗಳೆರಡನ್ನೂ ನಿರಾಕರಿಸುವ ಈ ಕವಿ ಗುಬ್ಬಿಗೂಡಿನ ಏಕಾಂತದಲ್ಲಿಯೇ ಲೋಕಸಂವಾದವನ್ನೂ ಯಶಸ್ವಿಯಾಗಿ ನಡೆಸಿದ್ದಾರೆ, ಕಾವ್ಯಭಾಷೆಯಲ್ಲಿಯೂ ಪ್ರಾದೇಶಿಕ ಮತ್ತು ಶಿಷ್ಟಗಳ ಹದವರಿತ ಬಳಕೆಯಿದೆ. 

ಹರೆಯದ ಹುಚ್ಚುಹೊಳೆ ಕೇವಲ ತನ್ನನ್ನು ಕಂಡುಕೊಳ್ಳುತ್ತದೆ. ಸಂಗಾತಿಯನ್ನು ಬಣ್ಣಿಸುತ್ತದೆ. ಆದರೆ ಈ ಕವಿ ಜಲಪಾತದ ನೀರನ್ನು ಹೃದಯದ ಕಾಲುವೆಗಳಲ್ಲಿ ಹರಿಸಿ, ಒಲುಮೆಯ ಬೆಳೆ ತೆಗೆಯುತ್ತಾರೆ. ಇದು ದೇಹವನ್ನೂ ಮರೆಯದೆ ಅದನ್ನು ಮೀರುವ ಕವಿತೆ. ಸಂಗಾತಿಯ ಮನಸ್ಸನ್ನೂ ಕಾಣುವ ಕಟ್ಟಿಕೊಡುವ ಕವಿತೆ. ಹೀಗೆ ಬಹುಮುಖಿಯಾದ ಮತ್ತು ಓದುಗರನ್ನು ಮುಟ್ಟುವ ತಟ್ಟುವ ಕವಿತೆಗಳು ಈ ಸಂಕಲನದಲ್ಲಿವೆ ಎನ್ನುತ್ತಾರೆ ಎಚ್.ಎಸ್. ರಾಘವೇಂದ್ರರಾವ್. 

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books