ಕಾಡುವ ಹುಡುಗ

Author : ಮೇಘನಾ ಕಾನೇಟ್ಕರ್

Pages 68

₹ 110.00




Year of Publication: 2020
Published by: ಚಿದಂಬರ ಪ್ರಕಾಶನ
Address: ಹುಬ್ಭಳ್ಳಿ

Synopsys

ಪ್ರಸ್ತುತ ಕವನ ಸಂಕಲನದಲ್ಲಿ ಕವಯತ್ರಿ ಹದಿಹರೆಯದ ಹುಡುಗಿಯ ಮನದಲ್ಲಿ ಅರಳುವ ತನ್ನ ಕಾಡುವ ಹುಡುಗನ ಬಗೆಗಿನ ಪ್ರೀತಿ, ಅಂತಃಕರಣ, ಕನಸು, ವಯೋಸಹಜ ತಲ್ಲಣಗಳು, ಮನಸಿನ ಹೊಯ್ದಾಟ, ಬದುಕಿನ ಪಾಠಗಳನ್ನು ಕವಿತೆಯ ಮೂಲಕ ವರ್ಣಿಸಲು ಪ್ರಯತ್ನಿಸಿದ್ದಾರೆ. ಒಟ್ಟು 45 ಕವನಗಳನ್ನು ಒಳಗೊಂಡಿರುವ ಸಂಕಲನದಲ್ಲಿ ಹರೆಯದ ಹೆಣ್ಣಿನ ಮನಸ್ಸಿನಲ್ಲಿ ಮನೆ ಮಾಡಿ ಕಾಡುವ ಯಾವುದೇ ಹುಡುಗನ ಪರಿಕಲ್ಪನೆ ಬಿಂಬಿತವಾಗಿದೆ. ಪ್ರತಿಯೊಂದು ಕವನಗಳು ಹೆಣ್ಣು ಗಂಡಿನ ಜೀವನದಲ್ಲಿ ಬರುವ ವಿವಿಧ ಆಯಾಮಗಳ ಪ್ರತೀಕದಂತಿದೆ. ಇಲ್ಲಿನ ಕೆಲ ಕವನಗಳ ಸಾಲುಗಳು ಓದುಗರಲ್ಲಿ ತಮ್ಮ ಜೀವನದೊಂದಿಗೆ ಸಮೀಕರಿಸಿಕೊಂಡು ಸದಾ ಉತ್ಸಾಹದಿಂದ ಗುನುಗುನಿಸುವಂತೆ ಮಾಡುವ ಆಕರ್ಷಣೆ ಹೊಂದಿದೆ. ಆದ್ದರಿಂದ ಕಾಡುವ ಹುಡುಗ ಕವನ ಸಂಕಲನ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

About the Author

ಮೇಘನಾ ಕಾನೇಟ್ಕರ್

ಮೇಘನಾ ಕಾನೇಟ್ಕರ್ ಹುಟ್ಟಿದ್ದು ಮಲೆನಾಡಿನ ರಮ್ಯ ಪರಿಸರದಲ್ಲಿಯಾದರೂ ಬೆಳೆದಿದ್ದು ಬಯಲುಸೀಮೆಯಲ್ಲಿ. ಹುಬ್ಬಳ್ಳಿಯಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ವಾಣಿಜ್ಯ ವಿಷಯದಲ್ಲಿ ಪದವಿ ಮತ್ತು ಕಾನೂನು ವ್ಯಾಸಂಗವನ್ನು ಮಾಡಿದ್ದಾರೆ.ಕೆಲ ವರ್ಷಗಳು ನೆಚ್ಚಿನ ವೃತ್ತಿಯಾದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಇವರು ಇದೀಗ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಓದು, ಬರಹದಲ್ಲಿ ಅಪಾರ ಒಲವನ್ನು ಹೊಂದಿದ್ದ ಇವರು ತಮ್ಮ ಶಾಲಾ ಹಾಗೂ ಕಾಲೇಜು‌ ದಿನಗಳಲ್ಲಿ ಹನಿಗವಿತೆ, ಪ್ರಬಂಧ ಲೇಖನ, ಸಣ್ಣ ಕತೆಗಳನ್ನು ರಚಿಸುವ ಮೂಲಕ ಗುರುತಿಸಿಕೊಂಡವರು.ಮೇಘನಾ ಕಾನೇಟ್ಕರ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿದ್ದು ಹಲವು ...

READ MORE

Related Books