ಗುಂಡಮ್ಮನ ಹಾಡು

Author : ಚಂದ್ರಶೇಖರ ಪಾಟೀಲ (ಚಂಪಾ)

Pages 85

₹ 60.00
Year of Publication: 2017
Published by: ಸಂಕ್ರಮಣ ಪ್ರಕಾಶನ
Address: ನಂ.15,ಜ್ಯೋತಿ ಲೇಔಟ್, ವಾರ್ಡ್-186, ಜೆ.ಪಿ.ನಗರ, ಬೆಂಗಳೂರು- 560 078

Synopsys

ಚಂದ್ರಶೇಖರ ಪಾಟೀಲ ಅವರ ಗೇಯ ಕವನಗಳ ಸಂಗ್ರಹ ‘ಗುಂಡಮ್ಮನ ಹಾಡು’. ಕನ್ನಡ ಕಾವ್ಯ, ತನ್ನ ಎಲ್ಲ ಸ್ಥಿತ್ಯಂತರಗಳಲ್ಲಿ, ವಸ್ತು ವೈವಿಧ್ಯವಿದ್ದರೂ, ತನ್ನ ಲಯವನ್ನು, ನಾದವನ್ನು ನರನರಗಳಲ್ಲಿ ಹರಿಯುವ ರಕ್ತದಂತೆ ಉಳಿಸಿಕೊಂಡೇ ಬಂದಿದೆ. ‘ನವ್ಯ’ ಹಾಗೂ ‘ಬಂಡಾಯ’ಗಳ ಗಟ್ಟಿ ದನಿಯಾಗಿರುವ ಚಂಪಾ ಅವರ ಈವರೆಗಿನ ಎಲ್ಲ ಸಂಕಲನಗಳಲ್ಲಿ ಹರಡಿರುವ ಗೇಯ-ಕವನಗಳ ಗುಚ್ಚವಿದು. ಖ್ಯಾತ ಗಾಯಕರಾದ ಸಿ.ಅಶ್ವತ್ಥ, ನಾಗರಾಜ ಹವಾಲದಾರ, ಸಂಗೀತಾ ಕಟ್ಟಿ, ಶಿವಮೊಗ್ಗ ಸುಬ್ಬಣ್ಣ, ಶಶಿಧರ ಕೋಟೆ ಮುಂತಾದ ಅನೇಕ ಕೊರಳುಗು ಈ ಸಳಾಉಗಳನ್ನು ಗುಣಗುಣಿಸಿವೆ. ಶೀರ್ಷಿಕೆಯ ‘ಗುಂಡಮ್ಮ’ ರಾಯಚೂರು ನಾಡಿನ ಕೋಗಿಲೆ: ಗಜಲ್ ಗುಂಡಮ್ಮ ಎಂದೇ ಪ್ರಖ್ಯಾತರು.

ಕೃತಿಯ ಪರಿವಿಡಿಯಲ್ಲಿ ನಾಳೆಗಿದೊ ಸುಸ್ವಾಗತ, ಮೌನ ಮಾತನಾಡಿತು, ಅವಳು, ತಂದೆನೊಂದು ವೀಣೆ, ಮೌನ ಕವನ, ಬಾನುಲಿ, ಸ್ವಾತಂತ್ಯ್ರ ಗೀತೆ, ಹೋಗಿ ಬರುವೆ ಹೂವೆ, ನಿನ್ನ ನೆನಪೆ ಕವನ, ಇವರು, ಹಾಡು, ಬೇಡ, ಬೆಳಕು-ನೆರಳು, ಈ ಮಣ್ಣ ಪಣತೆ, ಏಕಾಕಿ, ನನ್ನ ತಂಗೆವ್ವ, ಈ ನಾನು, ನೀನು ಒಮ್ಮೆ ನಕ್ಕರೆ, ಕಾಮಕಸ್ತೂರಿ, ನೆತ್ತರದ ಪಂಚಾರತಿ, ಲೆಕ್ಕ, ಕ್ರಿಸ್ ಮಸ್ ಗೀತೆ, ಬುರಡಿ ಬಾಬಾ ಮಹಿಮೆ, ದೀಪ ಸ್ತಂಭ, ಪಂಪ ಮತ್ತು ರನ್ನ , ಮೂರ್ಖರ ಸಂಗ, ಖರೇ ಖರೇ ಅನ್ನಂಗ, ಶಾಲ್ಮಲಾ ನನ್ನ ಶಾಲ್ಮಲಾ, ಈ ಸಲದ ಯುಗಾದಿಗೆ, ಕನ್ನಡ ಕನ್ನಡ ಬರ್‍ರಿನಮ್ಮ ಸಂಗಡ ಸೇರಿದಂತೆ ಅನೇಕ ಕವನಗಳಿವೆ.

ಮಂಡ್ಯದಲ್ಲಿ ನಡೆದ ಅಖಿಲ ಭಾರತ 63ನೆಯ ಕನ್ನಡ ಸಾಹಿತಯ ಸಮ್ಮೇಳನದಲ್ಲಿ ಈ ಕೃತಿಯು ಹೊರಬಂದಿದೆ. 1994ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2017ರಲ್ಲಿ ಎರಡನೇ ಮುದ್ರಣ ಕಂಡಿದೆ.

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books