ಬಸವನ ಕಾಲಿನ ಜೋಡಿಮೆಟ್ಟು

Author : ರವಿ ರಾಯಚೂರಕರ್

Pages 104

₹ 80.00




Year of Publication: 2019
Published by: ಚಾರುಮತಿ ಪ್ರಕಾಶನ
Address: ನಂ. 224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ ಬೆಂಗಳೂರು - 560018
Phone: 9448235553

Synopsys

ರವಿ ರಾಯಚೂರಕರ್ ಅವರ ಕವನ ಸಂಕಲನ ’ ಬಸವನ ಕಾಲಿನ ಜೋಡಿಮೆಟ್ಟು’. ದಮನಿತ ಬದುಕಿನ ಜಂಜಾಟ, ಕುಡಿತದ ಚಟದಿಂದ ನೊಂದ ಕೌಟುಂಬಿಕ ವ್ಯವಸ್ಥೆ, ದೇಹಮಾರಿ ಬದುಕಬೇಕಾದ ಅಸಹಾಯಕತೆ, ದಮನಿತರ ಮೇಲಿನ ಸಾಮಾಜಿಕ ದೌರ್ಜನ್ಯ, ವೈಚಾರಿಕತೆಯ ಮೇಲೆ ನಡೆಯುವ ಹಲ್ಲೆ, ವೈಯಕ್ತಿಕ ನೆಲೆಯ ಪ್ರೀತಿಯ ಏಳು-ಬೀಳು ಇಂತಹ ವಸ್ತು ವಿಷಯಗಳನ್ನೊಳಗೊಂಡ ಕವಿತೆಗಳು ಇಲ್ಲಿವೆ. 

About the Author

ರವಿ ರಾಯಚೂರಕರ್

ರವಿ ರಾಯಚೂರಕರ್ ಅವರು ಮೂಲತಃ ರಾಯಚೂರು ಜಿಲ್ಲೆ, ದೇವದುರ್ಗ ತಾಲೂಕಿನವರು. ಎಂ.ಎ.ಪದವೀದರರಾಗಿರುವ ಅವರು ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಬೆಂಗಳೂರು ವಿವಿ ಕನ್ನಡ ಸಂಘದ 99ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಲ್ಲದೇ ರಾಯಚೂರು ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ  ಕನ್ನಡ ಮತ್ತು ಜಾನಪದದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಚೊಚ್ಚಲ ಕವನಸಂಕಲನ " ಬಸವನ ಕಾಲಿನ ಜೋಡಿಮೆಟ್ಟು " ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದ ಕಾರ್ಯಗಳಿಗಾಗಿ ಬೆಂಗಳೂರು ...

READ MORE

Related Books