ನೂರು ಬಣ್ಣದ ಕಣ್ಣು

Author : ವಿಜಯಕಾಂತ ಪಾಟೀಲ

Pages 88

₹ 50.00




Year of Publication: 2012
Published by: ಲಡಾಯಿ ಪ್ರಕಾಶನ
Address: 42, ಪ್ರಸಾದ್ ಹಾಸ್ಟೆಲ್, ಗದಗ
Phone: 9480286844

Synopsys

‘ನೂರು ಬಣ್ಣದ ಕಣ್ಣು’ ಲೇಖಕ ವಿಜಯಕಾಂತ ಪಾಟೀಲರ ಕವನಸಂಕಲನ. ಈ ಸಂಕಲನವು ಮಳೆ ಬಿದ್ದ ನೆಲದಿಂದ ಎದ್ದ ಹುಡಿಯ ಘಮಲು; ಸ್ವಲ್ಪ ಸ್ವಲ್ಪವೇ ಮೂಗಿಗಡರುವ ಅಲ್ಲೆಲ್ಲೋ ಅರಳಿದ ಹೂವಿನ ಪರಿಮಳ; ಅಷ್ಟೂ ನೋವಸಂಕಟವನ್ನು ಒಟ್ಟು ಮಾಡಿ ಹೊರಹಾಕಿ ನಿಡುಸುಯ್ಯುವ ಉಸಿರ್ಗರೆತ; ಎಲ್ಲ ಹೇಳಿಯೂ ಹೇಳದಂತಿರುವ ಒಂದು ಮೌನದ ಜೊತೆಗಿನ ಸಂವಾದವಾಗಿ ಕಾಣುತ್ತದೆ. ನಿಜ ಬದುಕಿನಿಂದ ವಿಮುಖವಾಗದ ಕವಿತೆಗಳ ಅಪರೂಪದ ಸಂಗ್ರಹ ಈ ನೂರು ಬಣ್ಣದ ಕಣ್ಣು.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books