ಕಿಟ್ಟೆಲ್ಲ ಮತ್ತು ಕನ್ನಡ

Author : ಸಂಗಮೇಶ ತಮ್ಮನಗೌಡ್ರ

Pages 108

₹ 100.00
Year of Publication: 2019
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ಲಕ್ಷ್ಮೇಶ್ವರ, ಜಿ: ಗದಗ-
Phone: 9449074397

Synopsys

ಜರ್ಮನ್ ಪಾದ್ರಿ ಆಗಿದ್ದ ಕಿಟೆಲ್ಲರು ಭಾರತಕ್ಕೆ ಬಂದಿದ್ದು, ತದನಂತರ ಧರ್ಮ ಪ್ರಸಾರಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ತಂಗುವುದರ ಮೂಲಕ ಕನ್ನಡ ನಾಡಿಗೆ ಅವರು ಕೊಟ್ಟ ಅತ್ಯುತ್ತಮ ಹಾಗೂ ಶಾಸ್ವತ ಕೊಡುಗೆ ಎಂದರೆ ಕನ್ನಡ-ಕನ್ನಡ ನಿಘಂಟು.ಇಂದಿಗೂ ಈ ನಿಘಂಟುವನ್ನು ಸರಿಗಟ್ಟುವಷ್ಟು ಆರೋಗ್ಯಕರ ನಿಘಂಟು ಬಂದಿಲ್ಲ ಎಂದೇ ಹೇಳಬೇಕು. ಈ ಎಲ್ಲ ಸಾಧನೆಗಳ ಕೊಡುಗೆಗಳನ್ನು ಸ್ಮರಿಸುವ ಕವನಗಳು ಇಲ್ಲಿವೆ. ಮಾತ್ರವಲ್ಲ; ಕನ್ನಡ ನಾಡು-ನುಡಿಯ ಸೇವೆಗೈದ ಸಂ.ಶಿ.ಭೂಸನೂರುಮಠ, ಮಧುರಚೆನ್ನ, ಆರ್. ಸಿ. ಹಿರೇಮಠ, ಫ.ಗು.ಹಳಕಟ್ಟಿ ಸೇರಿದಂತೆ ಇತರೆ ಕವಿ-ಸಾಹಿತಿ-ಗಣ್ಯರ ಕೊಡುಗೆಗಳನ್ನು ಸ್ಮರಿಸಿ ಬರೆದ 52 ಕವನಗಳು ಇಲ್ಲಿ ಸಂಕಲನಗೊಂಡಿವೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books