ಮಾಸದ ಅಣಕು ಗೀತೆಗಳು

Author : ಎನ್. ರಾಮನಾಥ್

Pages 118

₹ 55.00
Published by: ಪ್ರಶಾಂತ ಪ್ರಕಾಶನ
Address: ಬೆಂಗಳೂರು

Synopsys

‘ಮಾಸದ ಅಣಕು ಗೀತೆಗಳು’ ಕೃತಿಯು ಎನ್. ರಾಮನಾಥ್ ಅವರ ಕವನಗಳ ಸಂಕಲನವಾಗಿದೆ. ಇಲ್ಲಿನ ಕವಿತೆಗಳ ಕೆಲವೊಂದು ಸಾಲುಗಳನ್ನು ಕವಿ ಹೀಗೆ ವರ್ಣಿಸಿದ್ದಾರೆ ; ‘ಕರುಣಾಳು ಬಾ ಬೆಳಕೆ ಮುಸುಕಿದೀ ಪಬ್ಬಿನಲಿ ಕೈ ಹಿಡಿದು ಕುಡಿಸೆನ್ನನು’ ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ: ಮೋಹಿನಿ ಮೋಹಕ ಮಾದಕ ಲಂಚಮ್ ಮಡದಿಯ ಕೋಪ ನಿವಾರಕ ಲಂಚಮ್ ಮಂತ್ರಿಯ ಮನವನು ಗೆಲ್ಲುವ ಲಂಚಮ್ ತತ್ಪ್ರಣಮಾಮಿ ಸದಾಪ್ರಿಯ ಲಂಚಮ್ ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು ಹರಿಯಿತು ಇರುಳು ಕರಗಿತು, ಏಳು ಪಯಣಿಗ ಎಚ್ಚರಾ‘ ಎಂಬ ಚಕ್ರತೀರ್ಥದ ಹಾಡು ಅವರ ಅಣಕವಾಡುವಿನಲ್ಲಿ ‘ಕೊರೆತ ಮುಗಿಯಿತು ಸಭೆಯು ಕರಗಿತು ಏಳು ಸಭಿಕನೆ ಎಚ್ಚರಾ‘ ಎಂದಾಗುತ್ತದೆ. ಹೀಗೆ ಇಲ್ಲಿಯ ಕವಿತೆಗಳು ಗಮನ ಸೆಳೆಯುತ್ತವೆ. 

About the Author

ಎನ್. ರಾಮನಾಥ್

ಲೇಖಕ ಎನ್. ರಾಮನಾಥ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಪತ್ರಕರ್ತರು. ವಿಜಯಕರ್ನಾಟಕದಲ್ಲಿ ಅಕಂಣಕಾರರಾಗಿ ‘ವೀಕೆಂಡ್ ವಿನೋದ’, ಹಾಗೂ ಹೀಗೂ ಉಂಟು, ಸಂಗ್ಯಾ ಮಂಗ್ಯಾ ದೈನಿಕ ಅಂಕಣಗಳನ್ನು ಬರೆಯುತ್ತಿದ್ದಾರೆ. ಅವರ ‘ನಿದ್ರಾಂಗನೆಯ ಸೆಳವಿನಲ್ಲಿ’ ಕೃತಿಗೆ ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಕೃತಿಗಳು:ನಿದ್ರಾಂಗನೆಯ ಸೆಳವಿನಲ್ಲಿ, ಹಸಿರು ಬಾಗಿಲು (ಅನುವಾದ ಕೃತಿ) ...

READ MORE

Related Books