ಅಲಂಕಾರ

Author : ಡಿ.ಓ. ಸದಾಶಿವ (ಸಂಕಲ್ಪ)

Pages 104

₹ 100.00
Year of Publication: 2020
Published by: ಚೇತನ್‌ ಬುಕ್ಸ್
Address: #624, 9ನೇ ಡಿ ಮುಖ್ಯರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು-560104
Phone: 9986167684

Synopsys

ಆಹಾ! ಎಂತಹ ಅಲಂಕಾರ, ನೋಡಿದ ಮನ ನಿರ್ವಿಕಾರ, ನಿನಗೆ ಭಕ್ತಿಯೆ ಸಂಸ್ಕಾರ ನೀಡೆನಗೆ ಸತ್ಕಾರ, ಮುಕ್ತಿಯ ಸಾಗರ, ಕಾಪಾಡೋ ಹರ, ಅಲಂಕಾರ ಹರ...ಹೀಗೆ ಭಕ್ತಿ-ಚಿಂತನೆಗಳು ಇರುವ ಕವನಗಳು ಕವಿ ಡಿ.ಓ. ಸದಾಶಿವ ಅವರ ಕವನ ಸಂಕಲನ ‘ಅಲಂಕಾರ’ ದಲ್ಲಿವೆ. ಜೀವ, ಭಾವ, ಗೌರವ, ಪ್ರೀತಿ, ಆತ್ಮೀಯತೆ ಇಲ್ಲಿನ ಕವನ ಸಂಕಲನದ ವಿಷಯವಸ್ತುಗಳು. ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು ಮುನ್ನುಡಿ ಬರೆದು ‘‘ಹಿಂದಿನ ಕವಿಗಳು ತಮ್ಮ ಬರವಣಿಗೆಗೆ ಶಿವನ ಕೃಪೆ ಬೇಡುವಂತೆ ಇವರು ಸಹ ಹರನಲ್ಲಿ ಪ್ರಾರ್ಥನೆ ಸಲ್ಲಿಸುವ ಪರಿ ಪರಿಣಾಮಕಾರಿಯಾಗಿದೆ. ಈ ಕವನ ಸಂಕಲನದಲ್ಲಿರುವ ಅನೇಕ ಕವನಗಳಲ್ಲಿ ಓದಿಸಿಕೊಳ್ಳುವ ಗುಣ ಇದೆ. ಓದಿಸಿಕೊಂಡ ನಂತರ ಒಂದು ಕ್ಷಣ ಚಿಂತನೆಗೆ ತೊಡಗಿಸುವ ಕಾರ್ಯವನ್ನೂ ಮಾಡುವವು. ಕವನಗಳ ಹರವು ತುಂಬಾ ವಿಸ್ತಾರವಾಗಿದೆ. ಕವಿ ತಮ್ಮ ಭಾವನೆಗಳನ್ನು ವಿವಿಧ ರೀತಿಯಲ್ಲಿ ಹೊರಹಾಕಲು ಪ್ರಯತ್ನಿಸಿದ್ದಾರೆ. `ನೀನೊಲಿದಂತೆ ಹಾಡುವೆ' ಎನ್ನುವ ಬಸವಣ್ಣನವರ ವಾಣಿಯನ್ನೇ ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಆಧಾರವಾಗಿಸಿಕೊಂಡಿರುವ ಹಾಗೆ ತೋರುತ್ತದೆ.’ ಎಂದು ಪ್ರಶಂಸಿಸಿದ್ದಾರೆ. 

About the Author

ಡಿ.ಓ. ಸದಾಶಿವ (ಸಂಕಲ್ಪ)
(14 January 1986)

`ಸಂಕಲ್ಪ' ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಿ.ಓ ಸದಾಶಿವ ಅವರು ಜನಿಸಿದ್ದು 1986 ಜನವರಿ 14ರಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ದೇವಿಗೆರೆಯವರು. ತಾಯಿ ಪಾರ್ವತಮ್ಮ. ತಂದೆ ಓಂಕಾರಪ್ಪ. ಹುಟ್ಟೂರಾದ ಕಂಗುವಳ್ಳಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನಿಂದ ಕಾಮರ್ಸ್‌‌ ವಿಷಯದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹೊಸದುರ್ಗ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅಲಂಕಾರ-ಇವರ ಮೊದಲ ಕವನ ಸಂಕಲನ.  ...

READ MORE

Related Books