ಚಿಟ್ಟೆ ರೆಕ್ಕೆ

Author : ನವೀನ್ ಮಧುಗಿರಿ

Pages 96

₹ 75.00
Year of Publication: 2016
Published by: ವಿನಯ ಪ್ರಕಾಶನ
Address: ಮಧುಗಿರಿ ತಾಲ್ಲೂಕು ತುಮಕೂರು ಜಿಲ್ಲೆ
Phone: 8951124493

Synopsys

‘ಚಿಟ್ಟೆ ರೆಕ್ಕೆ’ ಕೃತಿಯು ನವೀನ್ ಮಧುಗಿರಿ ಅವರ ಕಿರುಗವಿತೆಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಹೃದಯ ಶಿವ ಅವರು, ಭರವಸೆ ಮೂಡಿಸಿರುವ ಕೆಲವೇ ಕೆಲವು ಯುವಕವಿಗಳಲ್ಲಿ ನವೀನ್ ಮಧುಗಿರಿ ಕೂಡ ಒಬ್ಬರು. ಇವರ ಕವಿತೆಗಳಲ್ಲಿನ ಸೂಕ್ಷ್ಮ ಒಳನೋಟಗಳು ಎಂಥವರಿಗೂ ಬೆರಗು ಮೂಡಿಸುತ್ತವೆ. ಮಕ್ಕಳ ಮುಗ್ಧತೆಯಿಂದ ಹಿಡಿದು ವೃದ್ದರ ಅಸಹಾಯಕತೆಯವರೆಗೆ ಪ್ರಕೃತಿಯ ಚೋದ್ಯಗಳಿಂದ ಹಿಡಿದು ಧಾರ್ಮಿಕ ಮೌಢ್ಯಗಳವರೆಗೆ, ಯುವಮನಸುಗಳ ಬಿಸಿಭಾವನೆಗಳಿಂದ ಹಿಡಿದು, ಬದುಕಿನ ಕಟುವಾಸ್ತವದವರೆಗೆ ಇವರ ಕವಿತೆಗಳು ಅರಳಿಕೊಳ್ಳುತ್ತವೆ.

ಅಂಕಣಕಾರ ರಾಘವೇಂದ್ರ ಜೋಶಿ ಅವರು ತಮ್ಮ ಅಭಿಪ್ರಾಯ ವ್ಯುಕ್ತಪಡಿಸಿ, ಎಲ್ಲ ಕವಿತೆಗಳು ರಸಪೂರ್ಣವಾಗಿವೆ. ಪ್ರತಿಯೊಂದು ಕವಿತೆ ಕೂಡ ಹಠಕ್ಕೆ ಬಿದ್ದು ಪದಭಂಡಾರದ ಆಗರವಾದಾಗಲೇ, ಆಯಾ ಚಿತ್ರಣಗಳು ತಾನೇತಾನಾಗಿ ಮುಂದೆ ಬಂದು, ತಮ್ಮ ವಿಳಾಸ ಕೊಟ್ಟು ಹೋದಂತಿವೆ. ಹೀಗಾದಾಗಲೆಲ್ಲ, ಕವಿ- ಕವಿತೆಗಳಿಂದ ಕವಿಮನ ಅತ್ಯಂತ ಶ್ರೇಷ್ಠದ್ದು ಅನ್ನುವ ನನ್ನ ವೈಯುಕ್ತಿಕ ಅನಿಸಿಕೆ ಹೆಚ್ಚು ಪ್ರಬಲವಾಗುತ್ತ ಹೋಗುತ್ತದೆ’ ಎಂದಿದ್ದಾರೆ.

About the Author

ನವೀನ್ ಮಧುಗಿರಿ

ನವೀನ್ ಮಧುಗಿರಿ ಅವರ ಮೂಲನಾಮ ರಘುನಂದನ್ . ವಿ. ಆರ್. ವೃತ್ತಿಯಿಂದ ಕೃಷಿಕರು. ಸಾಹಿತ್ಯ ರಚನೆಯಲ್ಲಿ ಆಸಕ್ತಿ. ಅವರ ಕತೆ, ಕವಿತೆ, ಶಿಶುಗೀತೆ, ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ರುಚಿಗೆ ತಕ್ಕಷ್ಟು ಪ್ರೀತಿ, ಚಿಟ್ಟೆ ರೆಕ್ಕೆ, ನವಿಗವನ ...

READ MORE

Related Books