ಕವಿತೆ ಉದಯಿಸಿದಾಗ

Author : ಲತಾ ಗುತ್ತಿ

Pages 220

₹ 105.00




Year of Publication: 2016
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ 35, ಫಿರೋಜಶಾಹ ರಸ್ತೆ ನವದೆಹಲಿ-110001

Synopsys

ಕವಿತೆ ಉದಯಿಸಿದಾಗ ಎಂಬ ಕವನ ಸಂಕಲನವು ಲತಾ ಗುತ್ತಿಯವರ ಮೊದಲ ಅನುವಾದ ಕೃತಿಯಾಗದೆ. ಪ್ರಮುಖವಾಗಿ 20 ಜನ ಬಂಗಾಳಿ ಕವಿಯತ್ರಿಯರ 200 ಕವಿತೆಗಳನ್ನು ಕನ್ನಡದಲ್ಲಿಯೇ ಮೊದಲ ಬಾರಿಗೆ ಅನುವಾದ ಮಾಡಿದ್ದಾರೆ. ಬಂಗಾಳಿಯ 20 ಕವಿಯತ್ರಿಯರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕಿಯರಾದವರು, ತಮ್ಮ ಮನದಾಳದ ಮಾತುಗಳನ್ನು ಕಾವ್ಯಾತ್ಮಕವಾಗಿ ನಿರ್ಭಿಡೆಯಿಂದ ಹೊರಹಾಕಿದ್ದಾರೆ. ಸಂಭಾಷಣೆ ನಡೆಸಿದ್ದಾರೆ. ಮತ್ತೆ ಮತ್ತೆ ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುತ್ತಿದ್ದಾರೆ, ಚರ್ಚಿಸುತ್ತಾರೆ, ಪರಿಹಾರ ಕಂಡುಕೊಳ್ಳಲು ಹೋರಾಡಿ ಯಶಸ್ವಿಯೂ ಆಗುತ್ತಾರೆ. ಇಲ್ಲಿಯ ಕವಿತೆಗಳು ಒಂದಕ್ಕಿಂತ ಒಂದು ಅರ್ಥಪೂರ್ಣವಾದವುಗಳು. ಅವರ ಧೈರ್ಯ ಕೆಚ್ಚೆದೆಯ ಮಾತುಗಳಿಂದ ಅದೆಷ್ಟೋ ಸಲ ಅವರು ಬಂಗಾಳದ ಕಾಳಿದುರ್ಗೆಯರಂತೆ ಕಂಡಿದ್ದಾರೆ. ಕಾವ್ಯದ ಗುಣಲಕ್ಷಣಗಳನ್ನು ಹಿಡಿದಿಟ್ಟುಕೊಳ್ಳುತ್ತಲೇ ಕವಯತ್ರಿಯರ ಸಂವೇದನೆಗಳ ಕಡೆಗೂ ಗಮನಕೊಡುವುದು ಮಹತ್ವದ ಕೃತಿ ಇದಾಗಿದೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books