ತಂಗುದಾಣ ಬೇಕು ಬದುಕಿಗೆ

Author : ರೇಶ್ಮಾ ಗುಳೇದಗುಡ್ಡಾಕರ್

Pages 72

₹ 100.00




Year of Publication: 2023
Published by: ಸ್ನೇಹ ಸೌಹಾರ್ದ ಪ್ರಕಾಶನ
Address: ಕೊಟ್ಟೂರು

Synopsys

‘ತಂಗುದಾಣ ಬೇಕು ಬದುಕಿಗೆ’ ಜೀವಸೆಲೆಯ ಕಾಪಿಟ್ಟುಕೊಳ್ಳಲು ಯುವ ಕವಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಚೊಚ್ಚಲ ಕವನ ಸಂಕಲನ. ಈ ಕೃತಿಗೆ ಇಬ್ಬರು ಯುವ ಕವಯತ್ರಿಯರ ಬೆನ್ನುಡಿ ಬರಹವಿರುವುದು ವಿಶೇಷ. ಈ ಕೃತಿಯ ಕುರಿತು ಬರೆಯುತ್ತಾ ‘ನಮ್ಮನ್ನು ನಾವೇ ಅವಲೋಕನ ಮಾಡಿಕೊಳ್ಳಲು ಒಂದು ತಂಗುದಾಣ ಬೇಕು, ಯಾವುದೋ ವಸ್ತು, ವಿಷಯ ಅಥವಾ ಘಟನೆಯನ್ನು ಎದುರಾದಾಗ ಅದನ್ನು ಕವಿ ಉಸಿರಾಡುತ್ತಾಳೋ ಅಥವಾ ಆಲೋಚಿಸುತ್ತಾನೋ ಎನ್ನುವುದು ನನಗೆ ಮಿಸ್ಟ್ರಿ. ಓದುಗಳಿಗೆ ಕೆಲವೊಂದು ಕವನಗಳಲ್ಲಿ ಅವಲೋಕನ, ಕೆಲವೊಂದರಲ್ಲಿ ಉಸಿರು, ಮತ್ತೆ ಕೆಲವದರಲ್ಲಿ ಎರಡೂ ಕಾಣಿಸುತ್ತದೆ. ಅಥವಾ ಓದುಗನೂ ಕೆಲವೊಂದು ಪದ್ಯವನ್ನು ಉಸಿರಾಡಿ, ಕೆಲವೊಂದನ್ನು ಅವಲೋಕಿಸುತ್ತಾನೆ ಎನ್ನುತ್ತಾರೆ ಕೃತಿ.ಆರ್. ಹಾಗೇ ಮುಂದುವರೆದು ರೇಶ್ಮಾ ಅವರ ಸಂಕಲನದಲ್ಲಿ ನನಗೆ ಈ ಎರಡೂ ಅನುಭವಗಳಾದವು’ ಎನ್ನುತ್ತಾರೆ. ತಂತ್ರ, ಸಿದ್ಧಾಂತ, ಶೈಲಿಗಳು ಹೇಗೇ ಇರಲಿ, ಕವನಗಳು ಕವಿಗೆ ತಂಗುದಾಣದ ಸ್ಥಳ. ಅಲ್ಲಿ ಒಮ್ಮೊಮ್ಮೆ ಸುಮ್ಮನೆ ಉಸಿರಾಡುತ್ತಾ ಇರುವ ಅವಕಾಶವೂ ಉಂಟು. ಇದನ್ನು ರೇಶ್ಮಾ ಕಂಡುಕೊಂಡಿದ್ದಾರೆ. ಅವರಿಗೆ ಕವನಗಳು ಅಂತಹ ತಂಗುದಾಣವಾಗಿ ಯಾವಾಗಲೂ ಸಿಗಲಿ, ಅದು ಅವರಿಗೆ ಮುಂದಿನ ದಾರಿಯನ್ನು ತೋರಿಸುತ್ತಾ ಹೋಗಲಿ ಎಂದು ಕೃತಿ ಹಾರೈಸಿದ್ದಾರೆ.

About the Author

ರೇಶ್ಮಾ ಗುಳೇದಗುಡ್ಡಾಕರ್

ರೇಶ್ಮಾ ಗುಳೇದಗುಡ್ಡಾಕರ್ ವಿಜ್ಞಾನದ ಪದವಿ ಮತ್ತು ಬಿಯಡ್ ಪದವಿ ಪೂರ್ಣಗೊಳಿಸಿದ್ದಾರೆ . ಪುಸ್ತಕಗಳ ಓದು ಜೊತೆಗೆ ಕವಿತೆ, ಲೇಖನ ಬರೆಯುವದು ಅವರ ಮೆಚ್ಚಿನ ಹವ್ಯಾಸ. 2006 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಹೊತ್ತಿಗೆ "ಕವಿತೆ - 2006 " ರಲ್ಲಿ ಗಾಂಧಿ ಕವನ ಪ್ರಕಟವಾಗಿದೆ. ಇದಕ್ಕೂ ಮೊದಲು ಗಾಂಧಿ ಕವನ ಹೊಸತು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಂತರ್ಜಾಲ ಪತ್ರಿಕೆಗಳು ಮತ್ತು ಬ್ಲಾಗ್ ಗಳಲ್ಲಿ ಬರೆಯುವ ಅವರ ಬರಹಗಳು ಪಂಜು, ಅವಧಿ, ಸಂಗಾತಿ, ಆಕೃತಿ, ನಸುಕು, ಪ್ರತಿಲಿಪಿ ಗಳಲ್ಲಿ ಪ್ರಕಟವಾಗಿವೆ. ಅವರ ಮೊದಲ ಕವನ ಸಂಕಲನ ‘ತಂಗುದಾಣ ಬೇಕು ...

READ MORE

Related Books