ಅಂತರಂಗದ ಮೃದಂಗ

Author : ಅನಿತಾ ಪಿ. ತಾಕೊಡೆ

Pages 122

₹ 125.00
Year of Publication: 2016
Published by: ಅಭಿಜಿತ್ ಪ್ರಕಾಶನ
Address: ಎ/404, ವಿನಾಯಕ್ ಆಶೀಶ್, ಎಂ.ಎಂ.ಎಂ. ರೋಡ್, ಮುಂಬೈ- 400080

Synopsys

‘ಅಂತರಂಗದ ಮೃದಂಗ’ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೊಡೆ ಅವರ ಕವನ ಸಂಕಲನ. ಇಲ್ಲಿಯ ಕವಿತೆಗಳಲ್ಲಿ ಋತುಗೀತೆಗಳು, ಪ್ರಕೃತಿಗೀತೆಗಳು, ಸೂರ್ಯಚಂದ್ರ ಹಕ್ಕಿಗಳನ್ನು ಕುರಿತ ಕವಿತೆಗಳು ಅವರು ಬದುಕನ್ನು ಹೊಸಬಗೆಯ ನವೋದಯ ಪ್ರಜ್ಞೆಯಲ್ಲಿ ಗ್ರಹಿಸಿ ಭಾಷೆಗೆ ಭಾವರೂಪ ವನ್ನು ಕೊಟ್ಟಿರುವ ಮಾದರಿಗಳಂತೆ ಕಾಣುತ್ತವೆ.

ವ್ಯಕ್ತಿಗಳ ಬಗೆಗಾಗಲಿ, ಸನ್ನಿವೇಶಗಳ ಕುರಿತಾಗಲಿ ಅವರು ಬರೆದಿರುವ ಕವಿತೆಗಳು ಸಾಮಾನ್ಯೀಕರಣಗೊಂಡು ಸಾರ್ವಕಾಲಿಕ, ಸಾರ್ವಜನಿಕ ಭಾವಗಳನ್ನು ಮೀಟುತ್ತವೆ. ಈ ಕಾರಣಗಳಿಂದ ಅನಿತಾ ಪೂಜಾರಿ ಅವರು ಯುವ ತಲೆಮಾರಿನ ಮಹತ್ವದ ಕವಿಗಳಲ್ಲಿ ಒಬ್ಬರೆನಿಸಿಕೊಳ್ಳುತ್ತಾರೆ.

About the Author

ಅನಿತಾ ಪಿ. ತಾಕೊಡೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್‌ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ...

READ MORE

Related Books