ಅಷ್ಟೇ

Author : ದೀಪ್ತಿ ಭದ್ರಾವತಿ

Pages 66

₹ 90.00
Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಹೊಸ ಕಾಲದ ತಿಳಿವಿಗೆ ತೆರೆದುಕೊಂಡ ಸಂವೇದನೆ ಪುರಾಣಗಳನ್ನು ನಿರಾಕರಿಸುವುದಿಲ್ಲ. ಆದರೆ ಅದು ನೋಡುವ ನೋಟ, ದಿಕ್ಕು ಬೇರೆಯಾಗಿರುತ್ತವೆ. ಇರುವ ಕಥೆಯನ್ನೇ ಅದು ಹೊಸ ಬೆಳಕಲ್ಲಿ ನೋಡಿ, ಹೊಸ ಹೊಸ ಅರ್ಥಗಳನ್ನು ಹೊಳೆಸಲು ಪ್ರಯತ್ನಿಸುತ್ತದೆ. ಈ ಹೊಸ ಅರ್ಥ ವರ್ತಮಾನದ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿರುತ್ತದೆ. ದೀಪ್ತಿಯವರ ಕಾವ್ಯ ಈ ದಿಕ್ಕಿನಲ್ಲಿ ನಡೆಯುತ್ತಿರುವ ಕಾವ್ಯ. ದುಷ್ಯಂತ ಶಕುಂತಲೆಗೆ ಕೊಟ್ಟ ಉಂಗುರವನ್ನು ದೀಪ್ತಿ ಪ್ರೇಮದುಂಗುರವಾಗಿ ನೋಡಲಾರರು. ಯಾಕೆಂದರೆ ಅವರಿಗೆ ಶಕುಂತಲೆಯ ನೋವಿನ ಆಳ ಗೊತ್ತು; ಹಾಗೆಯೇ ದುಷ್ಯಂತನ ನಿರಾಕರಣೆಯ ನೆಪಗಳು, ಉಡಾಫೆ ಗೊತ್ತು, ಆದ್ದರಿಂದಲೇ ಅವರಿಗೆ ದುಷ್ಯಂತನ ಉಂಗುರ ಒಂದು ರೂಪಕವಾಗಿ ಕಾವ್ಯದಲ್ಲಿ ನಿಲ್ಲಲಾರದು. ಉಂಗುರವಲ್ಲ, ಸಿಗರೇಟಾದರೂ ಸರಿ, ಹೊಸ ರೂಪಕವಾಗಬೇಕು ಎನ್ನುತ್ತಾರೆ. ಇಂಥ ಕಾವ್ಯದಲ್ಲಿ ಶಕುಂತಲೆ, ಸೀತೆ, ದೌಪದಿಯರ ನೋವೇ ಬಹುದೊಡ್ಡ ರೂಪಕವಾಗಿ ನಿಲ್ಲುತ್ತದೆ. ಪುರಾಣ ಮಾತ್ರವಲ್ಲ, ಮಗಳು ಓದುವ ಇತಿಹಾಸದ ಪುಟಗಳೂ, ದೀಪ್ತಿ ಅವರ ಕಾವ್ಯದ ನಾಯಕಿಗೆ ಕೇವಲ ಇತಿಹಾಸದ ಪುಟಗಳಾಗುವುದಿಲ್ಲ. ಅಲ್ಲಿನ ಯುದ್ಧಗಳ ಮತ್ತು ಗಂಡಿನ ಸಾಹಸಗಳ ಅಡಿಯಲ್ಲಿ ಹೆಣ್ಣಿನ ನೋವು ನಿರಂತರದ ದನಿಯಾಗಿ ಕೇಳುತ್ತಲೇ ಇರುತ್ತದೆ. ಇಂಥ ಸಂವೇದನೆಯ ಕಾವ್ಯನಾಯಕಿ ವರ್ತಮಾನದ ಅಗ್ನಿಕುಂಡವನ್ನು ಹಾಯಬೇಕು. ಅಜ್ಜ ನೆಟ್ಟಾಲಕ್ಕೆ ನೇತುಹಾಕಿಕೊಳ್ಳಬೇಕು. ಅದಕ್ಕವಳು ತಲೆಕೊಡಲಾರಳು. ಹೊರಗೆ ಜಿಗಿಯಲು, ಧಿಕ್ಕರಿಸಲು ಹೊರಡುವಾಗಿನ ಸತ್ಯವನ್ನೂ ಅವಳು ಬಲ್ಲಳು. ಎಂದೋ ಜಡಿದ ಬೀಗ/ತಲೆಗೆ ಬಡಿಯುವುದನ್ನೂ ಅವಳು ತಿಳಿದಿದ್ದಾಳೆ. ದೀಪ್ತಿಯ ಕವಿತೆಗಳು ಹೊಸ ಬದುಕಿನ ಹೊಸ ಸೂಕ್ಷ್ಮಗಳ ಹಾಸುಹೊಕ್ಕನ್ನು ಮೈಗೂಡಿಸಿ ಕೊಂಡಿರುವಂಥದ್ದು. ಸಮಕಾಲೀನ ಕಾಳಜಿಗಳನ್ನು ಸ್ಪಷ್ಟವಾಗಿ ಹೊರಹೊಮ್ಮಿಸುವುದೇ ಈ ಕವಿತೆಗಳ ಬಹು ಮುಖ್ಯವಾದ ಗುಣ, ಮಹಿಳಾ ಕಾವ್ಯಪರಂಪರೆಯ ಹಿನ್ನೆಲೆಯ ಜೊತೆಗೆ ಇತ್ತೀಚಿನ ಕನ್ನಡ ಕಾವ್ಯದ ಹೊಸ ಸ್ವರೂಪಗಳು ಈ ಕವಿತೆಗಳ ಕಟ್ಟುವ ಕಾಯಕದ ಮೇಲೆ ಪ್ರಭಾವ ಬೀರಿರುವುದು ಧನಾತ್ಮಕವಾದ ಅಂಶ. ಒಳಗಿನ ಕತ್ತಲೆಯಲ್ಲಿನ ತೆವಳಾಟದ ಜೊತೆಯಲ್ಲಿಯೇ ಹೊರಗೆ ಜಿಗಿಯುವ ಉಮೇದು ದೀಪ್ತಿ ಅವರ ಕಾವ್ಯದ ಉದ್ದಕ್ಕೂ ಜಿನುಗುತ್ತಿರುವ ಜೀವಸೆಲೆ, ಇಂಥ ಕಾವ್ಯ ನಾಳಿನ ಭರವಸೆ ಮಾತ್ರವಲ್ಲ, ಬೆಳಕೂ ಹೌದು; ಕನ್ನಡ ಕಾವ್ಯ ನಡೆಯಬೇಕಾದ ದಿಕ್ಕು ದಾರಿಯೂ ಹೌದು ಎಂದು ಪುಸ್ತಕದ ಬೆನ್ನುಡಿಯಲ್ಲಿ ಜಿ.ಪಿ. ಬಸವರಾಜು ತಿಳಿಸಿದ್ದಾರೆ.

About the Author

ದೀಪ್ತಿ ಭದ್ರಾವತಿ

ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ...

READ MORE

Related Books