ಮಂಜಿನ ಮನೆ ಹೊಕ್ಕ ಮನ

Author : ಕವಿತಾ ಹೆಗಡೆ

Pages 106

₹ 110.00
Year of Publication: 2022
Published by: ಅಕ್ಷರ ಮಂಟಪ
Address: #1667, 6ನೇ ಅಡ್ಡರಸ್ತೆ, 6 ನೇ ಮುಖ್ಯರಸ್ತೆ, ಹಂಪಿ ನಗರ, ಬೆಂಗಳೂರು - 560 104

Synopsys

ಕವಿ ಕವಿತಾ ಹೆಗಡೆ ಅಭಯಂ ಅವರ ಕವನ ಸಂಕಲನ ‘ಮಂಜಿನ ಮನೆ ಹೊಕ್ಕ ಮನ’. ಈ ಕೃತಿಯಲ್ಲಿ ಎಚ್. ಎಸ್. ಸತ್ಯನಾರಾಯಣ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕವಿತಾ ಅಭಯಂ ರ‍್ವ ಕಾವ್ಯಜೀವಿ. ಇವರ ಪದ್ಯಗಳನ್ನು ಓದುವಾಗ ತಟಕ್ಕನೆ ನಮ್ಮ ಮನಕ್ಕೆ ಅರೆ, ಈ ಕವಿತೆಗಳು ಕವಯತ್ರಿಯ ಮನದಲ್ಲಿ ಅದೆಷ್ಟು ಕಾಲದಿಂದ ತಾಲೀಮು ನಡೆಸಿದ್ದವಪ್ಪಾ ಎಂಬ ಅಚ್ಚರಿ ಮೂಡುವಂತೆ 'ಮಂಜಿನ ಮನೆ ಹೊಕ್ಕ ಮನ' ಸಂಕಲನದ ಕವಿತೆಗಳಿವೆ. ಸೂಕ್ಷ್ಮ ಸಂವೇದನೆಯೊಂದಿಗೆ ಮನದ ಭಾವತುಮುಲಗಳನ್ನು ಹಿಡಿದಿಡುವಾಗ ಬೆರಗು,ಮುಗ್ಧತೆಗಳನ್ನು ಎಲ್ಲೂ ಬಿಟ್ಟುಕೊಡದಂತೆ ಕಾವ್ಯ ಕಟ್ಟುವ ಕುಸೂರಿತನವನ್ನು ಕವಿತಾ ಹೆಗಡೆಯವರು ತೋರಿದ್ದಾರೆ. ಒಳಗೇ ಮಾತನಾಡಿಕೊಳ್ಳುವ ದನಿ ಇವರದು. ಹತ್ತು ಹಲವು ವಿಚಾರಗಳನ್ನು ತರ‍್ಕಿಕವಾಗಿ ದಾಖಲಿಸುವಾಗಲೂ ಎಲ್ಲಿಯೂ ಏರು ದನಿಯ ಅಬ್ಬರವಿಲ್ಲ. ಅತ್ಯಂತ ಸಂಯಮದ, ಸಾವಧಾನದ ನಡೆಯೊಂದು ಇಲ್ಲಿನ ಕವಿತೆಗಳ ಜೊತೆ ಸಾಗಿದೆ. ಶೈಲಿಯೂ ಸರಾಗ, ಎಲ್ಲಿಯೂ ರ‍್ಥ ಸಂದಿಗ್ಧತೆಗಾಗಿ ಓದುಗರು ಹೆಣಗಾಡ ಬೇಕಾಗಿಲ್ಲ. ಹಾಗೆಂದು ಅತ್ಯಂತ ಸರಳವಾಗಿಯೂ ತನ್ನ ಮಾರ್ಮಿಕತೆಯನ್ನು ಬಿಟ್ಟುಕೊಡದ ಇಲ್ಲಿನ ರಚನೆಗಳು ತಮ್ಮ ಲವಲವಿಕೆ ಮತ್ತು ತಾಜಾತನದಿಂದ ನಮ್ಮನ್ನು ಹಿಡಿದು ನಿಲ್ಲಿಸುತ್ತವೆ. ಇತ್ತೀಚೆಗೆ ಅಪರೂಪವಾಗುತ್ತಿರುವ ತುಸು ದೀರ್ಘ- ಸಂಕೀರ್ಣ ರಚನೆಗಳ ಜೊತೆಗೆ ಲಯಬದ್ಧವಾದ ಗೇಯಾಂಶವುಳ್ಳ ಕವಿತೆಗಳಿಗೂ ಈ ಸಂಕಲನದಲ್ಲಿ ಜಾಗ ದೊರೆತಿರುವುದನ್ನು ಗಮನಿಸಿದರೆ ಕವಿತಾ ಹೆಗಡೆ ಅಭಯಂ ಅವರ ನಿರಂತರ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಮೂಡುತ್ತದೆ.ನಮ್ಮ ಹೊಸ ತಲೆಮಾರಿನ ಅನೇಕರಂತೆ ಪುರಾಣ, ಚರಿತ್ರೆ, ವರ್ತಮಾನಗಳನ್ನು ಜೊತೆಗಿಟ್ಟು ನೋಡುವ ಪರಿಕ್ರಮವನ್ನೇ ಭಿನ್ನ ಧಾಟಿಯಲ್ಲಿ ಕಾಣಬಲ್ಲ ಇಲ್ಲಿನ ರಚನೆಗಳು ಸೋಜಿಗ, ಸಂಶಯಗಳೆರಡರ ಜೊತೆ ಬದುಕಿನ ಅರ್ಥವನ್ನು ಬಹುಬಗೆಯಲ್ಲಿ ಬೆದಕುವತ್ತ ಆಸ್ಥೆ ವಹಿಸುತ್ತವೆಂಬುದು ಈ ಕವಯತ್ರಿಯನ್ನು ಭರವಸೆಯ ಕಣ್ಣುಗಳಿಂದ ದಿಟ್ಟಿಸುವಂತೆ ಮಾಡಿದೆ. ಈ ಕಾರಣಕ್ಕೆ ಕವಯತ್ರಿಯನ್ನು ಅಭಿನಂದಿಸುತ್ತ ಅವರ ಈ ಸಂಕಲನವನ್ನು ಓದುಗರು ಪ್ರೀತಿಯಿಂದ ಬರಮಾಡಿಕೊಳ್ಳಲೆಂದು ಹಾರೈಸುತ್ತೇನೆ.

About the Author

ಕವಿತಾ ಹೆಗಡೆ

ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದಲ್ಲಿ ಜನನ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ. ಕುಮಟಾದ ಡಾ. ಎ ವಿ ಬಾಳಿಗಾ ಮಹಾವಿದ್ಯಾಲಯದಲ್ಲಿ ಪದವಿ. ಮೈಸೂರಿನಲ್ಲಿ ಡಿಪ್ಲೊಮಾ ಇನ್ ಫ್ಯಾಷನ್ ಟೆಕ್ನಾಲಜಿ. ಹುಬ್ಬಳ್ಳಿಯಲ್ಲಿ ಎಂ ಎ (ಇಂಗ್ಲಿಷ್ ) ಹಾಗೂ ಬಿ ಎಡ್ ಪದವಿ. ಬಾಲ್ಯದಿಂದಲೂ ಪ್ರಥಮ ಸ್ಥಾನದೊಂದಿಗೆ ತರ‍್ಗಡೆ. ಸಾಹಿತ್ಯದಲ್ಲಿ ಆಸಕ್ತಿ ಹಾಗೂ ರಚನೆ. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ (ಸಿಬಿಎಸ್ಇ) ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. 2020ರಲ್ಲಿ ಹೊರಬಂದ "ದ ನೆಸ್ಟೆಡ್ ಲವ್" ಇವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ...

READ MORE

Related Books