ರೈಲು ಹಳಿಗಳ ಮೇಲೆ

Author : ಅಲಿಬಾಬಾ ರವುಡಕುಂದಾ

Pages 96

₹ 120.00




Year of Publication: 2022
Published by: ಫಾರೂಖ್‌ ಪ್ರಕಾಶನ
Address: ರಾಯಚೂರು ಜಿಲ್ಲೆ,ಸಿಂಧನೂರು ತಾಲೂಕು,ರಾವುಡಕುಂದ
Phone: 9113588221

Synopsys

ಅಲಿಬಾಬಾರವರ ರೈಲು ಹಳಿಗಳ ಮೇಲೆ ಸಂಕಲನದಲ್ಲಿನ ಕವನಗಳಲ್ಲಿ ಬದುಕಿನ ತಳಮಳಗಳಿವೆ. ಸಾಮಾಜಿಕ ಸಂಕಟಗಳಿವೆ, ನೊಂದ ಮನಸುಗಳ ದುಗುಡ ದುಮ್ಮಾನಗಳು ವೈಯಕ್ತಿಕ ನೋವುಗಳಂತೆ ಭಾವಿಸುವ ರೂಪವಿದೆ. ಅಂತರಂಗದ ಭಾವವನ್ನು ಬಹಿರಂಗಕ್ಕೆ, ಬಹಿರಂಗದ ಕಾಣೆಯನ್ನು ಅಂತರಂಗಕ್ಕೊಗ್ಗಿಸಿ ಮಥಿಸುವ ಸಂವೇದನೆಯಲ್ಲಿ ಕವಿತೆಗಳು ಸಹಜವಾಗಿ ಹೊರಹೊಮ್ಮಿವೆ. ಇಲ್ಲಿನ ಬಹುತೇಕ ಕವಿತೆಗಳು ಸಮಾಜಿಕ ಹದ ಕೊಡುವ ಕರಾಮತ್ತಿಗೆ ಪ್ರಯತ್ನಿಸಿದ್ದಾರೆ. ಇದು ಒಬ್ಬ ಸೃಜನಶೀಲ ಕವಿಗೆ ಇರಬೇಕಾದ ಅಗತ್ಯವಾಗಿದೆ. ಇವರ ಕಾವ್ಯದಲ್ಲಿ ಬರುವ ಪ್ರತಿಮೆ, ರೂಪಕಗಳು ದಿನನಿತ್ಯ ನಮ್ಮೆದುರೇ ಸುಳಿದಾಡುವ ವಸ್ತುಗಳಾಗಿವೆ. ಜನ ಭಾಷೆಯ ಮೂಲಕ ಸಂವಾದಿಸುತ್ತಲೇ ಸತತ ಕಾವ್ಯಾಭಿವ್ಯಕ್ತಿಯ ಪ್ರಯತ್ನದಿಂದ ಗಟ್ಟಿಗೊಳ್ಳುತ್ತಾ ಹಾಗೂ ಏಕತಾನತೆಯಿಂದ ದೂರ ಸರಿದಿರುವುದು ಇಲ್ಲಿನ ಕವಿತೆಗಳ ಹೆಗ್ಗಳಿಕೆಯಾಗಿದೆ ಎಂದು ಅಬ್ದುಲ್ ಹೈ ತೋರಣಗಲ್ಲು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಅಲಿಬಾಬಾ ರವುಡಕುಂದಾ
(01 June 1982)

ಕವಿ ಅಲಿಬಾಬಾ ರವುಡಕುಂದಾ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರವುಡಕುಂದಾ (01-06-1982) ಗ್ರಾಮದವರು. ತಂದೆ- ಶ್ಯಾಮಿದ್ ಸಾಬ. ಇವರದು ಕೃಷಿಕ ಕುಟುಂಬ. ವಿದ್ಯಾರ್ಥಿ ದೆಸೆಯಿಂದಲೇ ತಮ್ಮೊಳಗೆ ಕ್ರಿಯಾಶೀಲತೆ ರೂಢಿಸಿಕೊಂಡವರು. ಕತೆ, ಕವನ, ಲೇಖನಗಳನ್ನು ಬರೆಯುವುದು, ಧಾರ್ಮಿಕ ಪ್ರವಚನ ನೀಡುವುದು ಹವ್ಯಾಸ. ರವುಡಕುಂದಾದಲ್ಲಿ ಪ್ರಾಥಮಿಕ ಶಿಕ್ಷಣ, ಕುಷ್ಟಗಿ ತಾಲೂಕಿನ ತಾವರೆಗೇರಾದಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ಸಿಂಧನೂರಿನಲ್ಲಿ ಟಿಸಿಎಚ್ ಶಿಕ್ಷಣ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿಎಡ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ(ಹಿಂದಿ) ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಇತಿಹಾಸ) ಸ್ನಾತಕೋತ್ತರ ಪದವೀಧರರು. 29 ಜನವರಿ 2004 ರಿಂದ ಸರಕಾರಿ ...

READ MORE

Related Books