ವನಸುಮ

Author : ಲಕ್ಷ್ಮೀ ವಿ ಭಟ್

Pages 96

₹ 100.00




Published by: ಚಿಗುರು ಪ್ರಕಾಶನ
Address: ಚಿಗುರುಪಾದೆ
Phone: 9738519932

Synopsys

ಲಕ್ಷ್ಮೀ ವಿ ಭಟ್ ಅವರ ಚೊಚ್ಚಲ ಕವನ ಸಂಕಲನ “ವನಸುಮ”. ಈ ಸಂಕಲನ “ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬೈ -ಧಾರವಾಡ ಆಯೋಜಿತ ರಾಷ್ಟ್ರಮಟ್ಟದ ಕವನ ಸಂಕಲನ 2022″ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿ. ಈ ಸಂಕಲನದಲ್ಲಿ ಒಟ್ಟು 75 ಕವನಗಳಿವೆ. ಈ ಕೃತಿ ಲಕ್ಷ್ಮೀ ವಿ ಭಟ್ ಅವರ ಚೊಚ್ಚಲ ಸಂಕಲನ. ಕೃತಿಯಲ್ಲಿ ಭಕ್ತಿ ಗೀತೆ, ಪ್ರಕೃತಿ ಗೀತೆ, ಸಾಮಾಜಿಕ ಕವನ, ಒಲವಿನ ಗೀತೆಗಳಿವೆ. ವೈವಿಧ್ಯ ವಸ್ತು ವಿಶೇಷವೇ ಕೃತಿಯ ಹೆಗ್ಗಳಿಕೆ. ಮುನ್ನುಡಿಯಲ್ಲಿ ಹೇಳಿದಂತೆ ಸಹಜ ಸುಂದರ ವನಸುಮ ಕಾನನದ ಮಧ್ಯೆ ಅರಳಿದರೂ ತನ್ನ ಕಂಪಿನಿಂದ ಕೆಂಪಿನಿಂದ ಜನರನ್ನು ತನ್ನತ್ತ ಸೆಳೆಯುತ್ತದೆ. ಅಜ್ಞಾತವಾಗಿದ್ದ ಹೂವನ್ನು ನಾಡ ಜನರು ಅರಸಿ ಬಂದು ಸಡಗರದಿಂದ ಆಗಮಿಸಿದಾಗ ಸುಮಕ್ಕೂ ಸಂಭ್ರಮವೇ. ಲಯಬದ್ಧವಾದ ಛಂದೋ ಬದ್ಧವಾದ ಗೀತೆಗಳಿಂದ ಕೂಡಿದ ಸರಾಗವಾಗಿ ಹಾಡುವಿಕೆಗೆ ಒಗ್ಗಿಕೊಳ್ಳುವ ಇಲ್ಲಿನ ಕವನಗಳು ಮೊದಲ ಓದಿದಲ್ಲೇ ಹಿಡಿದಿಡುತ್ತವೆ. ಎಲ್ಲಾ ಆಶಯಗಳ ಕವನಗಳು ವನಸುಮದಲ್ಲಿ ಕಾಣಸಿಗುತ್ತವೆ. ಕವನಗಳು ಉತ್ಸಾಹ ಲಯ ಮಂದಾನಿಲ ಲಯ ಲಲಿತಲಯ ಹೀಗೆ ಯಾವುದೋ ಒಂದು ಬಂಧಕ್ಕೆ ಒಳಪಟ್ಟಿವೆ. ಒಟ್ಟಾರೆ ಛಂದೋಲಯಗಳ ನಿಬಂಧನೆಗೊಳಪಟ್ಟೇ ಕವನ ರಚನೆಯಾಗಿರುವುದು ಸಂಕಲನದ ವೈಶಿಷ್ಟ್ಯ. ಆದಿಪ್ರಾಸವನ್ನೇ ಹೆಚ್ಚಿನ ಕವನಗಳಲ್ಲಿ ಬಳಸಲಾಗಿದೆ. ಛಂದಸ್ಸಿನ ಕಟ್ಟುಪಾಡುಗಳ ಬಿಗಿಯಿಂದ ಹೊರಗೆ ಬಂದೇ ಇಂದಿನ ಕವಿಗಳು ಕೃತಿ ರಚನೆಗೆ ತೊಡಗಿರುವ ಮಧ್ಯೆ ಶ್ರೀಮತಿ ಲಕ್ಷ್ಮೀ ವಿ ಭಟ್ ಅವರ ಸಂಕಲನ ಭಿನ್ನವಾಗಿ ನಿಲ್ಲುತ್ತದೆ.

About the Author

ಲಕ್ಷ್ಮೀ ವಿ ಭಟ್

ಲೇಖಕಿ ಲಕ್ಷ್ಮೀ ವಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರದವರು. ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಎಂ. ಎ, ಬಿ.ಎಡ್ ಪದವೀಧರರು. ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಛಂದಸ್ಸು ವಿಶೇಷ ಆಸಕ್ತರು.  ಕೃತಿಗಳು ; ಹೊಸ ಬರಹಗಾರರ ಕೈಪಿಡಿ ಪ್ರಶಸ್ತಿಗಳು ; ಸುವರ್ಣ ಕನ್ನಡ ರತ್ನ ಪ್ರಶಸ್ತಿ (ಕೀರ್ತಿ ಪ್ರಕಾಶನ), ಸಾಹಿತ್ಯ ದೀವಿಗೆ ಪ್ರಶಸ್ತಿ ಹಾಗೂ ಕಾವ್ಯ ಕಣಜ ಪ್ರಶಸ್ತಿ ಲಭಿಸಿದೆ. ...

READ MORE

Related Books